ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಪ್ಪರಗಿ ಬ್ಯಾರೆಜ್‌ನ ನೀರು ಪೋಲು: ಶ್ರೀಮಂತ ಪಾಟೀಲ
Water from Hipparagi Barrage is being wasted due to negligence of government and officials: Shriman
ಕಾಗವಾಡ 23: ಸರ್ಕಾರ ಮತ್ತು ಅಧಿಕಾರಿಗಳ ವಿಳಂಬ ಧೋರಣೆ, ನಿರ್ಲಕ್ಷಕ್ಕೆ ಹಿಪ್ಪರಗಿ ಬ್ಯಾರೇಜ್‌ನಿಂದ 3 ಟಿಎಂಸಿ ನೀರು ಪೋಲಾಗಿದ್ದು, ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕರ್ನಾಟಕ ಸರ್ಕಾರ ಕೂಡಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ, ಕೃಷ್ಣಾ ನದಿಗೆ 2 ರಿಂದ 3 ಟಿಎಂಸಿ ನೀರು ಬಿಡುಗಡೆಗೊಳಿಸಿಕೊಳ್ಳಬೇಕೆಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಆಗ್ರಹಿಸಿದ್ದಾರೆ.
ಅವರು, ಶುಕ್ರವಾರ ದಿ. 23 ರಂದು ಹಿಪ್ಪರಗಿ ಬ್ಯಾರೇಜ್‌ಗೆ ಭೇಟ್ಟಿ ನೀಡಿ, ಮಾತನಾಡುತ್ತಿದ್ದರು. 2-3 ದಿನ ಗೇಟ್ ಮುರಿದು, 2 ರಿಂದ 3 ಟಿಎಂಸಿ ನೀರು ಹರಿದು ಹೋದರೂ ಅಧಿಕಾರಿಗಳು ಏನು ಮಾಡಲಿಲ್ಲ. ಇದರಿಂದ ಚಳಿಗಾಲದಲ್ಲಿಯೇ ಕೃಷ್ಣಾ ನದಿ ತೀರದ ರೈತರು ಮತ್ತು ಗ್ರಾಮಸ್ಥರು ನೀರಿ ಅಭಾವ ಎದುರಿಸಬೇಕಾಗಿದೆ. ಚಳಿಗಾಲದಲ್ಲಿಯೇ ಈ ರೀತಿಯಾದರೇ ಮುಂದೆ ಬೇಸಿಗೆಯಲ್ಲಿ ಸ್ಥಿತಿ ಇನ್ನಷ್ಟು ಹದೆಗೆಟ್ಟು ನದೀ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗಲಿದೆ. ಅಧಿಕಾರಿಗಳ ಬೇಜವ್ಬಾರಿಯಿಂದಾಗಿಯೇ ಗೇಟ್ ಮುರಿದಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ ಕೃಷ್ಣಾ ನದಿಗೆ 2-3 ಟಿಎಂಸಿ ನೀರು ಬಿಡಿಸಿಕೊಂಡು ಬರಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ವೇಳೆ ಮುಖಂಡರಾದ ದಾದಾಗೌಡ ಪಾಟೀಲ, ಮುರಗೆಪ್ಪಾ ಮಗದುಮ, ರೇವಣ್ಣಾ ಪಾಟೀಲ, ಈಶ್ವರ ಕುಂಬಾರೆ, ನಾನಾಸಾಹೇಬ ಅವತಾಡೆ, ಮಾಯಪ್ಪ ಖಿಲಾರೆ, ಬಾಹುಬಲಿ ಅಜ್ಜಾಪಗೋಳ, ಮಲಕು ಅಂದಾನಿ, ಶ್ರೀಶೈಲ ಅಪರಾಜ, ಬಿಲಾಲಗೌಡ ಪಾಟೀಲ, ಶೇಖರಗೌಡ ಪಾಟಿಲ, ಪುಂಡಲಿಕ ಸಾರಗಾಂವೆ ಸೇರಿದಂತೆ ಮತ್ತಿತರ ಮುಖಂಡರು, ರೈತ ಬಾಂಧವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 