ಸುರಿದ ಭಾರಿ ಮಳೆಗೆ ಮನೆಯೊಳಗೆ ನುಗ್ಗಿದ ನೀರು, ಪಟೇಲ್ ನೇತೃತ್ವದಲ್ಲಿ ಪರೀಶೀಲನಾ ಕಾರ್ಯ ಆರಂಭ

ಸುರಿದ ಭಾರಿ ಮಳೆಗೆ ಮನೆಯೊಳಗೆ ನುಗ್ಗಿದ ನೀರು, ಪಟೇಲ್ ನೇತೃತ್ವದಲ್ಲಿ ಪರೀಶೀಲನಾ ಕಾರ್ಯ ಆರಂಭ Water entered the house due to heavy rain, investigation work started under the leadership of Patel

ಸುರಿದ ಭಾರಿ ಮಳೆಗೆ ಮನೆಯೊಳಗೆ ನುಗ್ಗಿದ ನೀರು, ಪಟೇಲ್ ನೇತೃತ್ವದಲ್ಲಿ ಪರೀಶೀಲನಾ ಕಾರ್ಯ ಆರಂಭ

ಕೊಪ್ಪಳ 10: ನಿನ್ನೆ ಕೊಪ್ಪಳ ನಗರದಲ್ಲಿ ಸುರಿದ ಭಾರಿ ಮಳೆಗೆ ನಗರದ ವಿವಿಧ ವಾರ್ಡಗಳಲ್ಲಿ ಓಣಿಗಳಲ್ಲಿ ಮನೆಯೊಳಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿ ಸಾಮಾಗ್ರಿ ಗಳಿಗೆ ಹಾನಿ ಉಂಟಾಗಿದೆ,ರವಿವಾರ ದಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ರಾದ ಅಮ್ಜದ್ ಪಟೇಲ್ ನೇತೃತ್ವದ ನಗರಸಭೆಯ ಅಧಿಕಾರಿ ಸಿಬ್ಬಂದಿಗಳ  ತಂಡ ಮನೆ ಮನೆಗಳಿಗೆ ವಾರ್ಡ್‌ ಗಳಿಗೆ ಭೇಟಿ ಮಾಡಿ ಪರೀಶೀಲನ ಕಾರ್ಯ ಕೈಗೊಂಡರು, ನಗರದ 19 ಮತ್ತು 20ನೇ ವಾರ್ಡಿನ ಗಣೇಶನಗರ, 29ನೇ ವಾರ್ಡಿನ ಗವಿಶ್ರೀ ನಗರ್ ಹತ್ತನೇ ವಾರ್ಡಿನ ಕನಕಗಿರಿ ಓಣಿ ಸೇರಿದಂತೆ ನಗರದ ಪ್ರಮುಖ ಹೆದ್ದಾರಿ ಹೊಸಪೇಟೆ ಗದಗ್ ರಸ್ತೆ ಭಾಗದಲ್ಲಿ ಬರುವ ಮುಖ್ಯ ರಾಜ್ ಕಾಲುವೆಗೆ ಮಳೆ ನೀರಿನ ರಬಸಕ್ಕೆ ಎಲ್ಲೆಡೆ ನೀರು ತುಂಬಿಕೊಂಡು ಸಾರ್ವಜನಿಕರ ಆಸ್ತಿ ಮನೆಗಳ ಸಾಮಗ್ರಿ ಗಳಿಗೆ ನಷ್ಟ ಉಂಟಾಗಿದೆ ಮುಖ್ಯ ರಾಜ ಕಾಲುವೆ ಬಸವೇಶ್ವರ ಸರ್ಕಲ್ ಮುಂದುಗಡೆ ಇರುವ ದೊಡ್ಡ ಚರಂಡಿ ಸಂಪೂರ್ಣ ತುಂಬಿ ನೀರು ಹರಿದಿರುವುದರಿಂದ ಅಲ್ಲಿಯೂ ಕೂಡ ಸಾರ್ವಜನಿಕರ ಜೀವನ ಅಸ್ತವೆಸ್ತಗೊಂಡಿದೆ ಸದರಿ ಸ್ಥಳಕ್ಕೆ ಕೂಡ ನಗರಸಭೆ ತಂಡ ಭೇಟಿ ಕೊಟ್ಟು ಪರೀಶೀಲನ ಕಾರ್ಯ ನಡೆಸಿದರು, ಸದರಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆದಿರುವ ಎಲ್ಲಾ ಕಾಮಗಾರಿಗಳು ಕೂಡಲೇ ಪ್ರಾರಂಭ ಮಾಡಿ ಸಾರ್ವಜನಿಕರಿಗೆ ಅನುಕೂಲತೆಯನ್ನು ಮಾಡಿಕೊಡಲಾಗುವುದು ಎಂದು ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು ಈಗಾಗಲೇ 26ನೇ ವಾರ್ಡಿನ ಗಣೇಶ್ ನಗರಕ್ಕೆ ದೊಡ್ಡ ಚರಂಡಿ ಮತ್ತು ಅಡ್ಡ ಚರಂಡಿ ಗಳಿಗೆ ಜಿಲ್ಲಾಧಿಕಾರಿಗಳಿಂದ ಒಂದು ಕೋಟಿ 43 ಲಕ್ಷ ರೂಪಾಯಿ ಅನುದಾನಕ್ಕೆ ಅನುಮೋದನೆ ಪಡೆದು ಟೆಂಡರ್ ಕರೆಯಲಾಗಿದೆ ಕೂಡಲೇ ಕೆಲಸವನ್ನು ಪ್ರಾರಂಭ ಮಾಡಲಾಗುವುದು ಅದೇ ರೀತಿಯಾಗಿ ಸುಮಾರು ದಿನಗಳಿಂದ 10ನೇ ವಾರ್ಡಿನ ಕನಕಗಿರಿ ಓಣಿಯಲ್ಲಿರುವ ದೊಡ್ಡ ಸಿಡಿ ಕಾಮಗಾರಿ ಸಲುವಾಗಿ 15ನೇ ಹಣಕಾಸು ಅನುದಾನದಲ್ಲಿ 30 ಲಕ್ಷ ರೂಪಾಯಿಗಳನ್ನು ಟೆಂಡರ್ ಕರೆದು ಕೆಲಸ ಪ್ರಾರಂಭ ಆಗುವ ಹಂತದಲ್ಲಿದೆ ಈಗಾಗಲೇ ಇತರ ವಾರ್ಡುಗಳಿಗೆ 15ನೇ ಹಣಕಾಸು ಅನುದಾನದಲ್ಲಿ ಟೆಂಡರ್ ಅನ್ನು ಕರೆಯಲಾಗಿದ್ದು ಕೂಡಲೇ ಎಲ್ಲಾ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು ,ಇದರಿಂದ ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ವಾಗಲಿದೆ ,ಕಾರಣ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಸೇರಿ ಇತರರು ಉಪಸ್ಥಿತರಿದ್ದರು.