ಹಾವೇರಿ15:. ಯುವ ಜನತೆ ಸಮಾಜದಲ್ಲಿನ ಜನರ ಕಷ್ಟಗಳಿಗೆ ಸಹಕರಿಸಬೇಕು. ಯುವಜನರು ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗಿ ಜೀವನವನ್ನು ನಡೆಸಬೇಕು."ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರು ವ್ಯರ್ಥ ಆದ್ದರಿಂದ ಯುವಜನರು ಸಮಯದ ಮಹತ್ವವನ್ನು ಅರಿತು ಸ್ವಾವಲಂಬಿಗಳಾಗಿ ಬದಕಬೇಕು. ಎಂದು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿದರ್ೇಶಕರು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್. ಎಚ್.ಮಜೀದ್ ಹೇಳಿದರು.
ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಹಾವೇರಿ.ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಹಾವೇರಿಯ ಕಾಳಿದಾಸ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ "ಗ್ರಾಹಕರ ಹಕ್ಕು ಮತ್ತು ಕಾಯ್ದೆ ಕುರಿತು ಕಾರ್ಯಗಾರ"ವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರು ಜಾಗೃತರಾಗುವ ಮೂಲಕ ತಾವು ಖರೀದಿಸುವ ವಸ್ತುಗಳಿಗೆ ರಶೀದಿ ಪಡೆದಾಗ ಮಾತ್ರ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು. ನಾವು ಖರೀದಿಸುವ ವಸ್ತುಗಳಿಗೆ ರಶೀದಿ ಇಲ್ಲವಾದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ನಡೆಯಬೇಕು. ದೂರು ದಾಖಲಿಸಲು ಗ್ರಾಹಕರು ತಾವು ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಶೀದಿ ಪಡೆದಿರಬೇಕು, ಯಾವುದೇ ಜಾಹಿರಾತುಗಳಿಗೆ ಮರುಳಾಗದೇ ಗ್ರಾಹಕನು ತಾನು ಖರೀದಿಸುವ ವಸ್ತುವಿನ ಪ್ರಮಾಣ ಮತ್ತು ಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸುವ ಮೂಲಕ ಜಾಗೃತ ಗ್ರಾಹಕರಾಗಿ ಬೆಳೆಯಬೇಕು, ಜಾಗೃತ ಗ್ರಾಹಕ ದೇಶದ ಸಂಪತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಎಫ್.ಎನ್. ಗಾಜಿಗೌಡ್ರು ಇವರು ಮಾತನಾಡುತ್ತಾ ದುಶ್ಚಟಗಳಿಗೆ ಯುವ ಶಕ್ತಿಬಲಿಯಾಗದೆ ಸದಾದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಸಮತೋಲನ ಹೊಂದಿ ಉತ್ತಮ ನಾಯಕರಾಗಬೇಕೆಂದರು.ಗ್ರಾಮೀಣ ಸಮುದಾಯದ ಸಮಸ್ಯೆಯನ್ನು ಹೋಗಲಾಡಿಸಿ ಜನರಲ್ಲಿ ಉತ್ತಮ ಗುಣಮಟ್ಟದ ಜೀವನ ಶೈಲಿ ರೂಪಿಸಲು ಯುವಜನತೆ ಮುಂದಾಗಬೇಕು,ಯುವಜನತೆ ಸಮಾಜದಲ್ಲಿನಜನರ ಕಷ್ಟಗಳಿಗೆ ಸಹಕರಿಸಬೇಕು.
ಯುವಕರ ಜೀವನದಲ್ಲಿ ಸಮುದ್ರದ ಅಲೆಗಳಂತೆ ಕಷ್ಟ-ಸುಖಗಳು ಹರಿದು ಬರುತ್ತವೆ.ಎಲ್ಲವನ್ನು ನಿಭಾಯಿಸುವ ಶಕ್ತಿ ಒಗ್ಗೊಡಿಸಿಕೊಳ್ಳಬೇಕು. ಯುವಕರು ಉತ್ತಮ ಮಾನವೀಯ ಮೌಲ್ಯಗಳನ್ನು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಧೃಡ ರಾಷ್ಟ್ರಕಟ್ಟುವ ನೇತಾರರಾಗಬೇಕು, ಇಂದಿನ ಯುವಜನತೆಯನ್ನು ಜಾಗೃತರನ್ನಾಗಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದೆ, ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಾರುತಿ ಹರಿಜನ ಇವರು ಮಾತನಾಡುತ್ತಾ ಗ್ರಾಹಕರ ಹಿತರಕ್ಷಣಾ ಕಾಯ್ದೆ 1986ರಲ್ಲಿ ನೀಡಿರುವ ಗ್ರಾಹಕರ ಹಕ್ಕುಗಳಾದ "ಅಪಾಯವನ್ನುಂಟು ಮಾಡುವ ಸರಕುಗಳ ವಿರುದ್ಧ ರಕ್ಷಣೆ ಪಡೆಯುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಶೋಷಣೆಗೆ ಒಳಪಡುವುದರ ವಿರುದ್ಧ ಪರಿಹಾರ ಪಡೆಯುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣ ಪಡೆಯುವ ಹಕ್ಕು"ಗಳನ್ನು ಪ್ರತಿಯೊಬ್ಬರೂ ಬಳಸಿ ತಮಗೆ ಆದ ನಷ್ಟದ ವಿರುದ್ಧ ಗ್ರಾಹಕನು ಸಹಿ ಮಾಡಿದ ದೂರನ್ನು ಅಗತ್ಯ ಪ್ರತಿಗಳೊಂದಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಸಂಬಂಧಿಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರನ್ನು ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು, ಪ್ರತಿಯೊಬ್ಬ ಗ್ರಾಹಕರು ತಾವು ಪಡೆಯುವ ವಸ್ತುಗಳಿಗೆ ರಶೀದಿ ಪಡೆಯುವುದು ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಾಳಾಗಿ ಭಾಗವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಎಂ.ಎಸ್. ಕೆಂಚನಗೌಡರ, ಶಿಕ್ಷಕರಾದ ಸಿ.ಜಿ.ಚಿಕ್ಕಮಠ ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.