ದಾಂಡೇಲಿಯ ಏಳು ಸ್ಥಳಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ

ಲೋಕದರ್ಶನ ವರದಿ

ದಾಂಡೇಲಿ 06: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಗೂ ಗ್ರಾಮೀಣ ಪ್ರದೇಶದಿಂದ ಹರಿದು ಹೋಗುವ ಕಾಳಿ ನದಿಯ ನೀರು ಕಲುಷಿತವಾಗಿದೆ ಎಂದು ಘೋಷಣೆಯಾಗಿದೆ. ದಾಂಡೇಲಿ ನಗರ ಪ್ರದೇಶದಿಂದ ಚರಂಡಿಯ ಮೂಲಕ ಹಾದು ಹೋಗುವ ತ್ಯಾಜ್ಯ ನೀರು ಕಾಳಿ ನದಿಯ ಒಡಲನ್ನು ಸೇರುತ್ತಿದ್ದು ಇದು ನೀರು ಕಲುಷಿತಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಾಂಡೇಲಿ ತಾಲೂಕಿನ 7 ನಿದರ್ಿಷ್ಟ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿ ಚರಂಡಿಯ ಮೂಲಕ ಹಾದು ಹೋಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಾಳಿ ನದಿಗೆ ಬಿಡುವ ಯೋಜನೆಗೆ ಈಗಾಗಲೇ ಹಣ ಮಂಜೂರಾಗಿದ್ದು ಇನ್ನೂ ಕೆಲವೆ ದಿನಗಳಲ್ಲಿ ಈ ಯೋಜನೆಯ ಕಾರ್ಯ ಆರಂಭವಾಗಲಿದೆ. 1) ಅಂಬೇವಾಡಿ ಆದರ್ಶ ವಿದ್ಯಾಲಯದ ಕೊನೆಯ ಭಾಗ 2) ಬಚರ್ಿ ರಸ್ತೆ ಹನುಮಂತ ಕಲಾಲ ನಾಲಾ ಪಕ್ಕದಲ್ಲಿ. 3) ಹಳೇ ದಾಂಡೇಲಿ ಬೈಲಪಾರ ಹೋಗುವ ರಸ್ತೆ ಎಡಗಡೆ ನದಿಯ ಪಕ್ಕದಲ್ಲಿ 4) ಹಳಿಯಾಳ ರಸ್ತೆ ಪಂಪಹೌಸ ಹತ್ತಿರ ಕಾಳಿ ನದಿ ಪಕ್ಕದಲ್ಲಿ 5) ಹಳಿಯಾಳ ರಸ್ತೆ ದಾಂಡೇಲಪ್ಪ ದೇವಸ್ಥಾನ ಹತ್ತಿರ 6) ಲೋಕೋಪಯೋಗಿ ಇಲಾಖೆ ಪರೀವಿಕ್ಷಣಾ ಮಂದಿರ ಹತ್ತಿರ 7) ನಿರ್ಮಲ ನಗರ ಜನತಾ ಕಾಲೋನಿ ಕೊನೆಯ ರಸ್ತೆಯ ತುದಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಲಿವೆ ಅನಂತರ ಕೆರವಾಡ ಹಾಳಮಡ್ಡಿ ಪ್ರದೇಶದಲ್ಲಿ ಎಫ್.ಟಿ.ಪಿ ಮುಖಾಂತರ ಚರಂಡಿಯ ಎಲ್ಲಾ ತ್ಯಾಜ್ಯ ನೀರುಗಳನ್ನು ಸಂಸ್ಕರಿಸಿ ನದಿಗೆ ಬೀಡಲಾಗುತ್ತದೆ ಇದು 146.51 ಕೋಟಿ ರೂ ಗಳ ಕಾಮಗಾರಿಯಾಗಿದೆ.

ದಾಂಡೇಲಿ ತಾಲೂಕಿನ ನದಿಯ ದಂಡೆಯಲ್ಲಿರುವ ಅನೇಕ ರೆಸಾರ್ಟ ಹಾಗೂ ಹೋಂಸ್ಟೇಗಳು ತಮ್ಮಲ್ಲಿ ಉತ್ಪತ್ತಿಯಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗೆ ಬಿಡುತ್ತಿರುವುದು ಪರಿಸರಕ್ಕೆ ಮಾರಕವಾಗಿದೆ. ಅಲ್ಲದೆ ನೀರು ಕಲುಷಿತಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಬಯಲು ಬಹೀದರ್ೆಸೆ ಮುಕ್ತ ಜಿಲ್ಲೆಯೆಂದು ಘೋಷಣೆ ಮಾಡಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ ಏಕೆಂದರೆ ದಾಂಡೇಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ನದಿಯ ದಡದ ಪ್ರದೇಶಗಳು ಬಹೀದರ್ೆಸೆಗೆ ಉಪಯೋಗಿಸಲಾಗುತ್ತಿದ್ದು ಇದರಿಂದ ನದಿಯ ನೀರು ಕಲುಷಿತಕ್ಕೆ ಒಳಗಾಗುತ್ತಿದ್ದು ಪ್ರವಾಸಿ ತಾಣವೆಂದು ಗುರುತಿಸಬೇಕಾಗಿದ್ದ ನದಿಯ ದಡಗಳು ದುನರ್ಾತ ಬೀರಿ ವಾಯುಮಾಲಿನ್ಯಕ್ಕೂ ಕಾರಣವಾಗಿವೆ ಇದನ್ನೂ ನಿಯಂತ್ರಿಸುವುದು ದಾಂಡೇಲಿ ನಗರಾಡಳಿತದ ಆದ್ಯ ಕರ್ತವ್ಯವಾಗಿದೆ ಹಾಗೂ ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಜಾಗೃತರಾಗುವುದು ತೀರಾ ಅವಶ್ಯಕವಾಗಿದೆ.

ಸಂತಸದ ಸಂಗತಿಯೆಂದರೆ ದಾಂಡೇಲಿ ತಾಲೂಕಿನ ನದಿಯ ದಡದಲ್ಲಿರುವ ಪಟೇಲನಗರದ ಪಂಪಹೌಸ ಹತ್ತಿರ ಹಾಗೂ ಜೋಯಡಾ ತಾಲೂಕಿನ ಕರಿಯಂಪಾಲಿಯಲ್ಲಿ ಅತ್ಯಾಧುನಿಕ ಮಾಲಿನ್ಯ ಪತ್ತೆ ಶೋಧನಾ ಕೇಂದ್ರ ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಡಾ.ವಿಜಯಾ ಹೆಗಡೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಇದು ಪರಿಸರ ಪ್ರೇಮಿಗಳು ಸಂತಸ ಪಡುವಂತೆ ಮಾಡಿದೆ ಇದರಿಂದ ಇನ್ನು ಮುಂದಾದರು ಸಂಸ್ಕರಿಸಿದ ಶುದ್ಧವಾದ ಕಾಳಿನದಿಯ ಜೀವ ಜಲವನ್ನು ಜನಸಾಮಾನ್ಯರು ಸೇವಿಸಬಹುದಾಗಿದೆ ಎಂದು ಹೇಳಬಹುದು.