ಶಿರವಾಡ ಚರ್ಚನಲ್ಲಿಟ್ಟು ಗೌರವ: ರಾತ್ರಿ ಅಂತಿಮ ಸಂಸ್ಕಾರ

ಕಾರವಾರ: ಭಾರತೀಯ ಭೂ ಸೇನೆಯಲ್ಲಿದ್ದ  ಯೋಧ ದುಮ್ಮಿಂಗ್ ಎಂ.ಸಿದ್ದಿ(39) ಅವರ ಪಾಥರ್ಿವ ಶರೀರ ಕಾರವಾರದ ಮಖೇರಿಯಲ್ಲಿನ ಅವರ ಮನೆಗೆ ಬೆಳಿಗ್ಗೆ ತಲುಪಿತು. ದುಮ್ಮಿಂಗ್ ಪಾಥರ್ಿವ ಶರೀರ ಬರುತ್ತಿದ್ದಂತೆ ಕುಟುಂಬದವರ ಹಾಗೂ ಸಂಬಂಧಿಕರ ರೋಧನ ಮುಗಿಲು ಮುಟ್ಟಿತು. ಕಳೆದ ಶನಿವಾರ ಪಠಾಣ್ ಕೋಟ್ ನಿಂದ ರೈಲಿನಿಂದ ಹೊರಟಿದ್ದ ದುಮ್ಮಿಂಗ್ ಸಿದ್ದಿ ರೈಲಿನಿಂದ  ಬಿದ್ದು ಮೃತಪಟ್ಟಿದ್ದರು. ಆತನ ಜೊತೆ ಪಯಣಿಸುತ್ತಿದ್ದ ಸೈನಿಕರು ಕಾರವಾರ ಮಕೇರಿ ಗ್ರಾಮದಲ್ಲಿನ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದರು. 

ದುಮಿಂಗ್ ಎಂ.ಸಿದ್ದಿ ಕಳೆದ 15 ವರ್ಷಗಳಿಂದ ಸೇನೆಯಲ್ಲಿ ಯೋಧನಾಗಿದ್ದ. ದುಮಿಂಗ್ ಸಿದ್ದಿ  ಪಿಯು ಓದಿದ್ದು ಕಾರವಾರದ ಸಕರ್ಾರಿ ಪಿಯು ಕಾಲೇಜಿನಲ್ಲಿ. ಮೂಲತಃ ಯಲ್ಲಾಪುರದವರು. 

ದುಮ್ಮಿಂಗ್ ಕುಟುಂಬ ಕಳೆದ ಎರಡು ದಶಕಗಳ ಹಿಂದೆ ಕಾರವಾರ ಸಮೀಪದ ಮಖೇರಿ ಗ್ರಾಮದಲ್ಲಿ ನೆಲೆ ನಿಂತಿತ್ತು.

ಪೊಲೀಸ್ ಗೌರವ :

ದುಮ್ಮಿಂಗ್ ಶವಕ್ಕೆ ತಾಲೂಕಾ ಆಡಳಿತ ಗೌರವ ಸೂಚಿಸಿತು. ಅಲ್ಲದೇ ಪೊಲೀಸರು ಸಹ ಗೌರವ ನೀಡಿದರು. ಸಂಜೆ ಶಿರವಾಡ ಚರ್ಚನಲ್ಲಿ ದುಮ್ಮಿಂಗ್ ಶವವನ್ನು ಇಟ್ಟು ಗೌರವ ಸಲ್ಲಿಸಲಾಯಿತು. ಪಾದ್ರಿಗಳು ಕ್ರಿಶ್ಚಿಯನ್ನ ಸಂಪ್ರದಾಯದಂತೆ ಪ್ರಾರ್ಥನೆಗಳನ್ನು ಸಲ್ಲಿಸಿದರು.

ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು :

ದುಮ್ಮಿಂಗ್ ಸೋಮವಾರ ಸಂಜೆ ಅಥವಾ ಮಂಗಳವಾರ ಕಾರವಾರಕ್ಕೆ ತಲುಪಲಿದ್ದರು. ಆತನ ಮಗನ ಹುಟ್ಟಿದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಬೇಕಿದ್ದ ಅವರು ಶವವಾಗಿ ಮನೆ ತಲುಪಿದ್ದು ಇಡೀ ಕುಟುಂಬದಲ್ಲಿ ಅಪಾರ ಮೌನವನ್ನು ತುಂಬಿತ್ತು. ಆಕಾಶ ಕಳಚಿಬಿದ್ದ ಅನುಭವ ಅವರ ಮಕ್ಕಳಿಗೆ ಹಾಗೂ ಪತ್ನಿಗೆ ಆಗಿತ್ತು.  ದುಮ್ಮಿಂಗ್ ಅವರು ಹೊಸ ಮನೆ ಕಟ್ಟಿಸುತ್ತಿದ್ದು ಅದು ಸಹ ಮುಕ್ತಾಯ ಹಂತದಲ್ಲಿತ್ತು. ಕ್ರಿಸ್ಮಸ್ ವೇಳೆಗೆ ಹೊಸ ಮನೆ ಪ್ರವೇಶಕ್ಕೆ ಅವರು ಕನಸು ಕಂಡಿದ್ದರು. 

ದೇಶದ ವಿವಿದೆಡೆ ಸೇವೆ:

ಪಂಜಾಬ್ ಪಠಾಣಕೋಟ್ನಲ್ಲಿ ಸೈನಿಕ ಕ್ಯಾಂಪ್ನಲ್ಲಿ ದುಮ್ಮಿಂಗ್ ಸೈನಿಕನಾಗಿ ಕರ್ತವ್ಯ  ಮಾಡುತ್ತಿದ್ದರು. ಪಿಯುಸಿ ಶಿಕ್ಷಣದ ನಂತರ ಬೆಂಗಳೂರಿನಲ್ಲಿ ಸೈನ್ಯಕ್ಕೆ ಸೇರಿದ್ದ ದುಮ್ಮಿಂಗ್ ಅಪ್ಪಟ ದೇಶಪ್ರೇಮಿಯಾಗಿದ್ದರು. ಜಮ್ಮು ಕಾಶ್ಮೀರ್, ಅಸ್ಸಾಂನಲ್ಲಿ ಕೆಲ ಸಮಯ ಸೈನಿಕನಾಗಿ ಕೆಲಸ ಮಾಡಿದ್ದರು. ಸದ್ಯದಲ್ಲೇ ಸೈನ್ಯದಿಂದ ನಿವೃತ್ತಿ ಹೊಂದಿ ಅವರು ನಾಡಿಗೆ ಬರಲಿದ್ದರು. 

ದುಮ್ಮಿಂಗ್ ಸಿದ್ದಿ ಸಾವು ದುಮ್ಮಿಂಗ್ ಅವರ  ತಂದೆ ಮೊಹತೀಸ್ ಸಿದ್ದಿ ಹಾಗೂ ಆತನ ಪತ್ನಿ , ಮಕ್ಕಳಲ್ಲಿ ಹಾಗೂ ಸಹೋದರರಲ್ಲಿ ನೋವು ತಂದಿದೆ. ಸೈನ್ಯದಿಂದ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ನೆರವುಗಳು ಸಿಗಲಿವೆ ಎಂದು ಪಠಾಣ್ ಕೋಟ್ ಕ್ಯಾಂಪ್ ನಿಂದ ಬಂದಿದ್ದ ಸೈನಿಕ ಅಧಿಕಾರಿಗಳು ಹಾಗೂ ದುಮ್ಮಿಂಗ್ ಸಿದ್ದಿ ಮಿತ್ರರು ತಿಳಿಸಿದ್ದಾರೆ. 

ಕಾರವಾರ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ದುಮ್ಮಿಂಗ್ ಸಿದ್ದಿ ಮನೆಯಲ್ಲಿ ಉಪಸ್ಥಿತರಿದ್ದು, ಕುಟುಂಬದವರಿಗೆ ಸಾಂತ್ವಾನ ಹೇಳಿದರು.