ಡಿ.7 ರಂದು ವೃಕ್ಷಥಾನ್ ಹೆರಿಟೇಜ್ ರನ್‌-2025: ಅಧಿಕಾರಿಗಳು ಕುಟುಂಬ ಸಮೇತ ಭಾಗಿ

ಡಿ.7 ರಂದು ವೃಕ್ಷಥಾನ್ ಹೆರಿಟೇಜ್ ರನ್‌-2025: ಅಧಿಕಾರಿಗಳು ಕುಟುಂಬ ಸಮೇತ ಭಾಗಿ Vrikshathan Heritage Run-2025 on December 7th: Officials participate with their families

ಡಿ.7 ರಂದು ವೃಕ್ಷಥಾನ್ ಹೆರಿಟೇಜ್ ರನ್‌-2025: ಅಧಿಕಾರಿಗಳು ಕುಟುಂಬ ಸಮೇತ ಭಾಗಿ

          ವಿಜಯಪುರ 29: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌-2025 ನಲ್ಲಿ ರಾಜ್ಯದ ನಾನಾ ಭಾಗಗಳ ಜನರು ಕುಟುಂಬ ಸಮೇತ ಪಾಲ್ಗೋಳ್ಳಲು ಉತ್ಸುಕರಾಗಿದ್ದಾರೆ ಎಂದು ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.ಮಂಗಳವಾರ ನಗರದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್(ವಿಸಿಜಿ) ನಡೆಸಿದ ಹೆರಿಟೇಜ್ ರನ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.  ಈ ಬಾರಿ 21 ಕಿ. ಮೀ. ಓಟದಲ್ಲಿ ಕಳೆದ ಬಾರಿಗಿಂತಲೂ ಅತೀ ಹೆಚ್ಚು ಜನ ಪಾಲ್ಗೋಳ್ಳುವ ನೀರೀಕ್ಷೆ ಇದೆ.  ನಾನಾ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿ ಮತ್ತು ಕುಟುಂಬ ಸಮೇತ ಪಾಲ್ಗೋಳ್ಳಲು ಹೆಸರು ನೋಂದಾಯಿಸಿದ್ದಾರೆ.  ಬೇರೆ ರಾಜ್ಯಗಳಿಂದಲೂ ಕ್ರೀಡಾಪಟುಗಳು ಪಾಲ್ಗೋಳ್ಳಲಿದ್ದಾರೆ.  ಈಗಾಗಲೇ ಸುಮಾರು ಒಂದು ಸಾವಿರ ಜನರು 5 ಕಿ. ಮೀ., 10 ಕಿ. ಮೀ ಹಾಗೂ 21 ಕಿ. ಮೀ. ಓಟದಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.  ಈ ಸಲದ ಓಟದಲ್ಲಿ ಕ್ರೀಡಾಪಟುಗಳು ಪ್ರತಿಯೊಂದು ವಿಭಾಗದ ಓಟಗಳಿಗೆ ಬೇರೆ ಬೇರೆ ಬಣ್ಮದ ಟಿ- ಶರ್ಟ್‌ ಧರಿಸಲಿದ್ದಾರೆ.  ಸ್ವಯಂ ಸೇವಕರಿಗೂ ಪ್ರತ್ಯೇಕ ಬಣ್ಣದ ಟಿ- ಶರ್ಟ್‌ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯ ಮತ್ತು ಉಪನ್ಯಾಸಕ ಸಂದೀಪ ಮಡಗೊಂಡ ನವೆಂಬರ್ 22 ರಂದು ಚಿಕ್ಕಮಗಳೂರು ಜಿಲ್ಲೆಯ ಮಳಂದೂರಿನಲ್ಲಿ ನಡೆಯಲಿರುವ ಮತ್ತು ಕಠಿಣವಾಗಿರುವ ಮಲೆನಾಡ ಅಲ್ಟ್ರ ರನ್ 100 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿದ್ದಾರೆ. 

   ಅಲ್ಲದೇ, ವಿಸಿಜಿ ಗ್ರುಪ್ ಸದಸ್ಯರಾದ ರಘು ಸಾಲೋಟಗಿ ಮತ್ತು ಡಾ. ರಾಜು ಯಲಗೊಂಡ, ಶಿವು ಕುಂಬಾರ 50 ಕಿ. ಮೀ ಹಾಗೂ ವೀರೇಂದ್ರ ಗುಚ್ಚೆಟ್ಟಿ ಮತ್ತು ನಂದೀಶ ಹುಂಡೆಕಾರ 30 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವುದು ಓಟಗಾರರಿಗೆ ಸ್ಪೂರ್ತಿ ನೀಡಿದೆ ಎಂದು ಅವರು ತಿಳಿಸಿದರು.ಗುಂಪುಗಳಲ್ಲಿ ಹೆಸರು ನೋಂದಾಯಿಸುವ ತಂಡಗಳಿಗೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ.  ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.  ಇದೇ ವೇಳೆ ಸಂದೀಪ ಮಡಗೊಂಡ ಅವರನ್ನು ವಿಸಿಜಿ ಗ್ರುಪ್ ಸದಸ್ಯರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ, ಸೈಕ್ಲಿಂಗ್ ಗ್ರುಪ್ ಸದಸ್ಯರಾದ ಶಿವನಗೌಡ ಪಾಟೀಲ, ಅಪ್ಪು ಭೈರಗೊಂಡ, ಸಂತೋಷ ಅವರಸಂಗ, ವೀರೇಂದ್ರ ಗುಚ್ಚೆಟ್ಟಿ, ಸಮೀರ ಬಳಿಗಾರ, ಡಾ. ಪ್ರವೀಣ ಚೌರ, ಸೋಮಶೇಖರ ಸ್ವಾಮಿ, ಕಾರ​‍್ೋರೇಟರ್ ಅಶ್ಪಾಕ್ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.ಧನ್ಯವಾದಗಳು. ಟಿ: ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌-2025 ಅಂಗವಾಗಿ ವಿಜಯಪುರ ಸೈಕ್ಲಿಂಗ್ ಗ್ರುಪ್ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.  ಈ ಸಭೆಯಲ್ಲಿ ಮಲೆನಾಡ ಅಲ್ಟ್ರ ಮ್ಯಾರಾಥಾನ್ ನಲ್ಲಿ 100 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವ ಸಂದೀಪ ಮಡಗೊಂಡ ಅವರನ್ನು ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಸಂತೋಷ ಅವರಸಂಗ, ಅಪ್ಪು ಭೈರಗೊಂಡ, ಶಿವನಗೌಡ ಪಾಟೀಲ, ಡಾ. ರಾಜು ಯಲಗೊಂಡ ಮುಂತಾದವರು ಉಪಸ್ಥಿತರಿದ್ದರು.