ಕಾರವಾರ 14: ಎಲ್ಲಾ ಭಾರತೀಯರಿಗೂ ಮತ ಚಲಾಯಿಸುವ ಹಕ್ಕು ನೀಡಿ, ಬಡವನಿಗೂ,ಶ್ರೀಮಂತನಿಗೂ ಒಂದೇ ವೋಟು, ಒಂದು ವೋಟಿಗೆ ಒಂದೇ ಮೌಲ್ಯ ಎಂಬ ಸಮಾನತೆಯನ್ನು ತಂದು ಕೊಟ್ಟಂತಹ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವಿಂದು ಸ್ಮರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ಅವರ 128ನೇ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳಲಾಗುತ್ತದೆ. ಸರಿಯಾದ ಪ್ರತಿನಿಧಿಯನ್ನು ಆರಿಸುವ ಹಕ್ಕು ಪ್ರಜೆಗಳಿಗೆ ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಬಳಸಬೇಕು ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರು ಅಪಾರ ಜ್ಞಾನ ಬಂಡಾರವನ್ನು ಹೊಂದಿದವರು. ಅವರು ಗಳಿಸಿದ ಸಂಪತ್ತು ಪುಸ್ತಕಗಳು ಮತ್ತು ಜ್ಞಾನ ಮಾತ್ರವಾಗಿತ್ತು. ಅದನ್ನು ಕೂಡಾ ಸಂವಿಧಾನ ರಚಿಸಿ ದೇಶದ ಜನರಿಗೆ ಬಿಟ್ಟು ಹೋದಂತವರು. ವಿಶ್ವ ಸಂಸ್ಥೆಗಳು ಡಾ. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರನ್ನು ವಿಶ್ವ ಮಾನವರು ಎಂದು ಒಪ್ಪಿಕೊಂಡಿವೆ. ಶೋಷಿತರ ಧ್ವನಿಯಾಗಿ ಹೋರಾಡಿದ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಬೇಕಾಗಿದೆ. ಅವರ ತತ್ವಸಿದ್ದಾಂತಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಎಮ್. ರೋಶನ್ ಅವರು ಮಾತನಾಡಿ, ಅಂಬೇಡ್ಕರ್ ಅವರು ನಮ್ಮ ಸಂವಿಧಾನ ಶಿಲ್ಪಿಯಾಗಿದ್ದಾರೆ. ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಹೇಗೆ ಇರಬೇಕು ಎಂಬುದನ್ನು ರಚಿಸಿಕೊಟ್ಟಿದ್ದಾರೆ. ಚುನಾವಣಾ ರೂಪುರೇಶಗಳನ್ನು ರಚಿಸಿದಂತಹ ಅಂಬೇಡ್ಕರ್ ಅವರ ಕನಸನ್ನು, ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ನನಸಾಗಿ ಮಾಡಬೇಕು ಎಂದು ತಿಳಿಸಿದರು
ಅಂಬೇಡ್ಕರ್ ಯಾವುದೇ ಒಂದು ವರ್ಗ ಅಥವಾ ಒಂದು ಸಮುದಾಯಕ್ಕೆ ಸೇರಿದವರಲ್ಲ. ದೇಶದ ಎಲ್ಲ ವರ್ಗದವರ ಮೇರು ನಾಯಕ. ಅವರಜೀವನ ಮೌಲ್ಯಗಳನ್ನು ನಮ್ಮ ಬದುಕಿಗೂ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ್ ವಿ.ಪಾಟೀಲ್ ಅವರು ಮಾತನಾಡಿ, ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಜನರಿಗೆ ಜ್ಞಾನ ಸಂಪಾದಿಸಿ, ಒಗ್ಗಟ್ಟಾಗಿ, ಸಂಘಟನೆ ಕಟ್ಟಿಕೊಳ್ಳಿ ಎಂದು ಹೇಳಿದರು. ಅಂಬೇಡ್ಕರ್ ಅವರನ್ನು ಕೇವಲ ಒಂದು ದಿನಕ್ಕೆ ಸೀಮಿಗೊಳಿಸದೇ ಪ್ರತಿ ದಿನ ನೆನೆಯಬೇಕು. ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳನ್ನು ಪ್ರತಿಯೊಬ್ಬರೂ ತಮ್ಮಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜದ ನಿಮರ್ಾಣಕ್ಕೆ ಕೈ ಜೋಡಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕ ಪುರುಷೋತ್ತಮ್. ಎಸ್. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ನಿದರ್ೇಶಕ ಪ್ರವಿಣ ಪಾಟೀಲ, ವಾತರ್ಾ ಇಲಾಖೆ ಅಧಿಕಾರಿ ಹಿಮಂತರಾಜು. ಜಿ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಬಡಿಗೇರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.