ಸ್ವಯಂಪ್ರೇರಿತ ರಕ್ತದಾನ ಶಿಬಿರ
ಕೊಪ್ಪಳ 24: ಕೊಪ್ಪಳ ಜಿಲ್ಲಾ ಓಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳ ಇವರು ಆಲ್ ಇಂಡಿಯಾ ಆರ್ಗನೈಜೆಷನ್ ಆಫ್ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಇದರ 50ನೇ ವರುಷದ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕೃಪಾರ್ಶಿವಾದ ದಿಂದ ನೆರವೇರಿಸಲಾಯಿತು. ಈ ಶಿಬಿರದಲ್ಲಿ ಒಟ್ಟು 60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದ ಉಧ್ಘಾಟನೆಯನ್ನು ಜಿಲ್ಲಾ ಓಷಧ ನಿಯಂತ್ರಣ ಅಧಿಕಾರಿಗಳಾದ ವೆಂಕಟೇಶ ರಾಠೋಡ ನೆರವೇರಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶ್ರೀನಿವಾಸ ಹ್ಯಾಟಿ, ನಿರ್ದೇಶಕರಾದ ಡಾ. ಗವಿಸಿದ್ದನಗೌಡ ಜಿ. ಪಾಟೀಲ್, ಜಿಲ್ಲಾ ಓಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಕೊಟ್ರ್ಪ ಕೊರ್ಲಹಳ್ಳಿ ಸದಸ್ಯರಾದ ಹನುಮೇಶ ಇಲ್ಲೂರ, ಅರುಣಕುಮಾರ ಶೆಟ್ಟರ್, ಸುರೇಂದ್ರ ಪಾಟೀಲ್, ಶ್ರೀಕಾಂತಗೌಡ.ಬಿ ಚಿಕ್ಕನಗೌಡ್ರ, ರಾಜೂ ಪಾಟೀಲ್ ಹಲಗೇರಿ, ನಾಗರಾಜ ಬಳ್ಳಾವಳ್ಳಿ ಮತ್ತು ರಕ್ತದಾನಿಗಳು ಉಪಸ್ಥಿತರಿದ್ದರು.