ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ
Visit of the Managing Director of North West Karnataka Road Transport Corporation
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ
ಕಾರವಾರ, ಜು.31:- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಜು.30 ರಂದು ಕಾರವಾರ ಹಾಗೂ ಅಂಕೋಲಾ ಘಟಕಗಳಿಗೆ ಮತ್ತು ಗೋಕರ್ಣ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಂಪೂರ್ಣ ಸ್ವಚ್ಛತೆ ಹಾಗೂ ನಿಯಮಿತ ನಿರ್ವಹಣೆಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ಅಂತರರಾಜ್ಯ ಬಸ್ಸುಗಳು ಸಮಯ ಪಾಲಿತವಾಗಿ ಹಾಗೂ ನಿರಂತರವಾಗಿ ಚಲಾಯಿಸಬಹುದಾಗುವಂತೆ ಸಮರ್ಕ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಬಸ್ಸುಗಳನ್ನು ನಿರಂತರವಾಗಿ ತಾಂತ್ರಿಕ ನಿರ್ವಹಣೆಗೆ ಒಳಪಡಿಸಿ, ಅಗತ್ಯ ಸೇವೆ ಹಾಗೂ ತಾತ್ಕಾಲಿಕ ದುರಸ್ತಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಸ್ಸುಗಳಲ್ಲಿ ರೂಫ್ ಲೀಕೆಜ್ ಇದ್ದರೆ ಅವುಗಳನ್ನು ಪರೀಶೀಲಿಸಿ ಶೀಘ್ರದಲ್ಲೇ ದುರಸ್ತಿ ಮಾಡಬೇಕು. ಇತರೆ ಸಣ್ಣ ತಾಂತ್ರಿಕ ದೋಷಗಳು ಮತ್ತು ನಿರ್ವಹಣಾ ಸಮಸ್ಯೆಗಳಿಗೆ ಕೂಡ ತಕ್ಷಣ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ, ಅಧಿಕಾರಿಗಳಾದ ಆರ್. ಎಲ್ ಕುಮಾರಸ್ವಾಮಿ, ವಿನೋದ ನಾಯಕ್, ರವಿ ಅಂಚಗಾವಿ ಹಾಗೂ ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.ಮಳೆ ವಿವರಕಾರವಾರ, ಜು.31 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 9, ಮಿಮೀ, ಭಟ್ಕಳದಲ್ಲಿ 11.1, ಹಳಿಯಾಳ 2.1, ಹೊನ್ನಾವರ 22.5, ಕಾರವಾರ 12.6, ಕುಮಟಾ 6.7,ಮುಂಡಗೋಡ 1.6, ಸಿದ್ದಾಪುರ 12.1, ಶಿರಸಿ 9.5, ಸೂಪಾ 11.1, ಯಲ್ಲಾಪುರ 6.7, ದಾಂಡೇಲಿಯಲ್ಲಿ 3.1,ಮಿಲಿ ಮೀಟರ್ ಮಳೆ ಸುರಿದಿದೆ. 6 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 