ಕೊಪ್ಪಳ 06: ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ ಅವರು ಸೋಮವಾರ (ಆಗಸ್ಟ್.05) ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಂಚಾಯತ್ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.
ಪಂಚಾಯತ್ ರಾಜ್ ಇಂಜನಿಯರಿಂಗ್ ಉಪವಿಭಾಗ ಕೊಪ್ಪಳದ ವತಿಯಿಂದ ಅನುಷ್ಠಾನಗೊಂಡ ಬಹುಮಾದರಿಯ ಚೆಕ್ ಡ್ಯಾಂ (ಮಲ್ಟಿಅರ್ಚ ಚೆಕ್ ಡ್ಯಾಂ) ಕಾಮಗಾರಿಗಳನ್ನು ವೀಕ್ಷಿಸಿದ ಅವರು ಕಾಮಗಾರಿಗಳಿಗೆ ಸಂಬಂಧಿಸಿದ ವಿವರವನ್ನು ತಾಲ್ಲೂಕಾ ಕಾರ್ಯನಿವರ್ಾಹಕ ಅಧಿಕಾರಿಗಳಿಂದ ಪಡೆದುಕೊಂಡರು. ಉದ್ಯೋಗ ಖಾತ್ರಿ ಯೋಜನೆಯಡಿ ಕಿನ್ನಾಳ ಗ್ರಾಮ ಪಂಚಾಯತಿಯಿಂದ ಬುಡಶೆಟ್ನಾಳ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿಯಲ್ಲಿ 750 ಕೂಲಿಕಾರರು ಕೂಲಿ ಕೆಲಸ ನಿರ್ವಹಿಸಿದ್ದು. ಇಲ್ಲಿ ನಿರಂತರವಾಗಿ ಗ್ರಾಮ ಪಂಚಾಯತಿಯಿಂದ ಕೂಲಿ ಕೆಲಸ ನೀಡುತ್ತಿರುವದರಿಂದ ಕೂಲಿಕಾರರು ಗುಳೆ ಹೋಗುವ ಪ್ರಸಂಗ ಉದ್ಭವಿಸಿರುವದಿಲ್ಲ. 2019-20ನೇ ಸಾಲಿಗೆ ಮಾನವ ದಿನಗಳ ವಾಷರ್ಿಕ ಗುರಿ 27120 ಇದ್ದು ಇಲ್ಲಿಯವರೆಗೆ 13886 ಮಾನವ ದಿನಗಳನ್ನು ಸೃಜಿಸಿ 51.20% ರಷ್ಟು ಪ್ರಗತಿ ಸಾಧಿಸಿರುವ ಕುರಿತು ಕಾರ್ಯನಿವರ್ಾಹಕ ಅಧಿಕಾರಿಗಳು ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ವಿವರಿಸಿದರು.
ಕಿನ್ನಾಳ ಗ್ರಾಮವು ಕೊಪ್ಪಳ ತಾಲೂಕಿನಲ್ಲಿ ಬಹುದೊಡ್ಡ ಗ್ರಾಮವಾಗಿದ್ದು ಇಲ್ಲಿ ಗ್ರಾಮ ಪಂಚಾಯತಿಯಿಂದ ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದ್ದು ಗ್ರಾಮದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆಯೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ವಿವರಿಸಿದರು.
ನಂತರ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗ್ರಾಮದ ಅಂಗನವಾಡಿ ಕೇಂದ್ರ, ಕಿನ್ನಾಳ ಕಲೆಯ ಕುರಿತು ಚಿತ್ರಗಾರರ ಕುಟುಂಬಗಳ ಮನೆಗೆ ಭೇಟಿ ನೀಡಿದರು. ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿ ಎನ್.ಕೆ.ತೊರವಿ, ತಾಲ್ಲೂಕಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಕೃಷ್ಣಮೂತರ್ಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ವೀರನಗೌಡ ಚೆನ್ನವೀರನಗೌಡ್ರ, ಗ್ರಾಮ ಪಂಚಾಯತ ಕಾರ್ಯದಶರ್ಿ ನೀಲಮ್ಮ, ದ್ವಿತೀಯ ದಜರ್ೆ ಲೆಕ್ಕ ಸಹಾಯಕ ಬಸಯ್ಯ ಕೆಂಬೋಡಿಮಠ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.