ವಿಶ್ವಕರ್ಮ ಸಮಾಜಕ್ಕೆ ಸೀಮಿತರಾಗದೇ ಇಡೀ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು :ಡಾ.ನೀಲಕಂಠಾಚಾರ್ಯ ಮಹಾಸ್ವಾಮಿಗಳು

ವಿಶ್ವಕರ್ಮ ಸಮಾಜಕ್ಕೆ ಸೀಮಿತರಾಗದೇ  ಇಡೀ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು :ಡಾ.ನೀಲಕಂಠಾಚಾರ್ಯ ಮಹಾಸ್ವಾಮಿಗಳು Vishwakarma is not limited to society but worked for the welfare of the entire humanity: Dr. Neelka


ರಾಣೆಬೆನ್ನೂರ 28 :  ಮೌನೇಶ್ವರ ಸ್ವಾಮೀಜಿಯವರು ಕೇವಲ ವಿಶ್ವಕರ್ಮ ಸಮಾಜಕ್ಕೆ ಸೀಮಿತರಾಗದೇ  ಇಡೀ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು ಎಂದು ನಿಟ್ಟರಹಳ್ಳಿ ಸಂಸ್ಥಾನದ ಡಾ.ನೀಲಕಂಠಾಚಾರ್ಯ ಮಹಾಸ್ವಾಮಿಗಳು ಹೇಳಿದರು.  ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಏರಿ​‍್ಡಸಿದ್ದ ಜಗದ್ಗುರು ಮೌನೇಶ್ವರರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  

 ಭಾರತ ದೇಶದಲ್ಲಿ ಜಕಣಾಚಾರ್ಯರಿಂದ ನಿಮಾರ್ಣವಾದ ಶಿಲ್ಪಕಲೆಗಳುಳ್ಳ ದೇವಾಲಯಗಳು ಇಂದು ಹಿಂದೂ ಪರಂಪರೆಯನ್ನು ಜೀವಂತವಾಗಿರಿಸಿವೆ. ಈಗಲೂ ಅಯೋಧ್ಯೆಯಲ್ಲಿ ನಿಮಾರ್ಣವಾದ ಬಾಲರಾಮನ ನಿಮಾರ್ತೃ ವಿಶ್ವಕರ್ಮರೇ ಎಂಬುದನ್ನು ಮರೆಯುವಂತಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ದ್ವಾರಿಕೆಯಿಂದ ಪುರಿ ತನಕ ನಿಮಾರ್ಣವಾದ ದೇವಾಲಯಗಳು ವಿಶ್ವಕರ್ಮರು ಶಿಲ್ಪಕಲೆಗೆ ನೀಡಿದ ಕೊಡುಗೆಯನ್ನು ಮುಂದಿನ ಮನುಕುಲವೂ ಈ ಸಮಾಜಕ್ಕೆ ಚಿರಋಣಿಯಾಗಿಸಿದೆ.   

ಇಂತಹ ಪರಂಪರೆ ಇರುವ ನೀವುಗಳು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಿ ಸಮಾಜದ ಸಂಘಟನೆಗೆ ಮುಂದಾಗಬೇಕು ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ ದೇಶದ ಸಂಸ್ಕೃತಿ, ಕಲೆ, ಸಂಪ್ರದಾಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದವರು ವಿಶ್ವಕರ್ಮರು. ವಿಶ್ವಕರ್ಮರು ತಮ್ಮ ಮಕ್ಕಳಿಗೆ ಅವಶ್ಯಕವಾಗಿ  ಶಿಕ್ಷಣ ನೀಡಲು ಮುಂದಾಗಬೇಕು ಎಂದರು.  

ಮಾಜಿ ಶಾಸಕ ಅರುಣಕುಮಾರ ಪೂಜಾರ, ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥವಗೌಡಶಿವಣ್ಣನವರ,  ಮೌನೇಶ್ವರ ಕಮಿಟಿ  ಗೌರವಾಧ್ಯಕ್ಷ  ದೇವೆಂದ್ರ​‍್ಪ ಅರ್ಕಾಚಾರ, ಅಧ್ಯಕ್ಷ ಅಧ್ಯಕ್ಷ ಓಂಕಾರೆಪ್ಪ ಅರ್ಕಾಚಾರ ಮಾತನಾಡಿದರು.  

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ದೇವೇಂದ್ರಾಚಾರ್ ಬಡಿಗೇರ, ಮಾನಪ್ಪ ಬಡಿಗೇರ, ಡಾ. ಉಮೇಶ್ ದೈವಜ್ಞ, ನಾಗಲಿಂಗ ಬಡಿಗೇರ, ಗುಡ್ಡಪ್ಪ ಕಮ್ಮಾರ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿಯ  ವೀರಣ್ಣ  ಅರ್ಕಾಚಾರಿ, ರಾಘವೇಂದ್ರ  ಕಮ್ಮಾರ, ನಾಗರಾಜ ಬಡಿಗೇರ, ಚಿದಾನಂದ ಬಡಿಗೇರ,  ನಾಗರಾಜಚಾರಿ ಅರ್ಕಾಚಾರಿ,  ಹೇಮಾಚಾರ ಬಡಿಗೇರ,  ಶಂಕ್ರರ ಬಡಿಗೇರ, ಶ್ರೀಧರ ಬೆಳ್ಳೂಡಿ,  ಪ್ರಶಾಂತ ಬೆಳ್ಳೂಡಿ, ಚಂದ್ರು ಹುಲ್ಲತ್ತಿ, ಬಸವರಾಜ ಬಡಿಗೇರ, ಶೋಭಾ ಅರ್ಕಾಚಾರ,, ಪರಮೇಶ್ವರಾಚಾರ್ ಬಡಗೇರ, ಸೇರಿದಂತೆ ಸಮಾಜದ ಮುಖಂಡರುಗಳು ಇದ್ದರು.