ವಿಶ್ವಗುರು ಬಸವಣ್ಣ ಮಹಾನ್ ದಾರ್ಶನಿಕರಾಗಿದ್ದರು: ಶಿವಾನಂದ ಪಟ್ಟಿಹಾಳ
Vishwaguru Basavanna was a great philosopher: Shivananda Pattihala
ಬೆಟಗೇರಿ 10 : ವಿಶ್ವಗುರು ಬಸವಣ್ಣನವರ ಕುರಿತು ರಚಿಸಿದ ಗ್ರಂಥವನ್ನು ಇಂದು ಪ್ರತಿ ಮನೆ, ಮನೆಗೆ ನೀಡಬೇಕಿದೆ. ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮಲ್ಲಿ ಅಳವಡಿಕೊಳ್ಳಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯ ಹಾಗೂ ಬೆಂಗಳೂರು ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯ ಶಿವಾನಂದ ಪಟ್ಟಿಹಾಳ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯ ಪತ್ರಕರ್ತ ಅಡಿವೇಶ ಮುಧೋಳ ಅವರ ಪತ್ರಿಕಾ ಕಾರ್ಯಾಲಯಕ್ಕೆ ಡಿ.10ರಂದು ಭೇಟಿ ನೀಡಿ ಬೆಂಗಳೂರು ಕೇಂದ್ರ ಬಸವ ಸಮಿತಿ ಪ್ರಕಟಿಸಿದ ಮಹಾನ್ ದಾರ್ಶನಿಕ ಬಸವಣ್ಣ ಎಂಬ ಗ್ರಂಥವನ್ನು ಅಡಿವೇಶ ಮುಧೋಳ ಅವರಿಗೆ ನೀಡಿದ ಬಳಿಕ ಮಾತನಾಡಿ, 12 ನೇ ಶತಮಾನದಲ್ಲಿಯೇ ಸಮಾನತೆ ತರುವಲ್ಲಿ ಹೊರಾಡಿದ ಮಹಾನ್ ಪುರುಷ, ಬಸವಣ್ಣನವರು ಮಹಾನ್ ದಾರ್ಶನಿಕರು ಸಹ ಆಗಿದ್ದರು ಎಂದರು.
ಈ ವೇಳೆ ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕ, ಸಾಹಿತಿ ಬಾಳೇಶ ಫಕೀರ್ಪನವರ, ಮನ್ನಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಭಿಸಾಬ ನದಾಫ, ಹರೀಶ ದೇಯಣ್ಣವರ, ಪ್ರಮೋಧ ಮುಧೋಳ, ಸಂತೋಷ ಬಡಿಗೇರ ಸೇರಿದಂತೆ ಮತ್ತೀತರರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 