ವಿರುಪಾಕ್ಷ ಮತದಾರ ಅವರಿಂದ ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿಗೆ ಚಾಲನೆ

Virupaksha voter launches Gram Panchayat building work

ವಿರುಪಾಕ್ಷ ಮತದಾರ ಅವರಿಂದ ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿಗೆ ಚಾಲನೆ  

ಮಾಂಜರಿ, 10; ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಅಡಿ ಮತ್ತು 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ  ಗ್ರಾಮದ ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿರುಪಾಕ್ಷ ಮತದಾರ ಇವರು ಇಂದು ಚಾಲನೆ ನೀಡಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧುರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅನಿತಾ ದಯಾರ್ಕರ್ ವಿಹಿಸಿದ್ದರು  

ಅತಿಥಿಯಾಗಿ ಉಪಾಧ್ಯಕ್ಷರಾದ ಸಂಜಯ್ ನರವಾಡೆ ಮಾಜಿ ಜಿ ಪ ಸದಸ್ಯ ಹಾಗು ಹಾಲಿ ಗ್ರಾಮ್ ಪಂಚಾಯತ್ ಸದಸ್ಯರಾದ ಪಾಂಡುರಂಗ ಮನೆ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳಾದ ಮನೋಜ್ ಕಾಂಬಳೆ ಗ್ರಾ ಪ   ಸದಸ್ಯ ಶೀತಲ್ ಮಗೆನವರ್ ಶಕೀಲ್ ಮುಲ್ಲಾ ಸುಶಾಂತ ಲಂಬುಗೊಳ್ ಹಾಜರಿದ್ದರು  

 ಗ್ರಾಮ ಪಂಚಾಯತ್ ಅಧಿಕಾರಿಗಳಾದ ಶೇಖರ್ ಪಾಟೀಲ್ ಸ್ವಾಗತಿಸಿ ಬಹಳ ದಿನಗಳಿಂದ ಗ್ರಾಮ ಪಂಚಾಯತ್ ಕಟ್ಟಡ ಆಗಬೇಕೆಂಬ ಎಲ್ಲ ಜನರ ಆಸೆಯಿದ್ದು ಅದು ಎಂದು ನನಸಾಗುತ್ತದೆ ಮುಂದಿನ ದಿನಮಾನಗಳಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಲಾಗುವುದೆಂದು ಪಾಂಡುರಂಗ ಮಾನ ಹೇಳಿದರು ಈ ವೇಳೆ ಗ್ರಾ ಪ ಸದಸ್ಯರಾದ ಅಶೋಕ್ ಹವಳೆ ಚಿದಾನಂದ ಪೂಜಾರಿ ಶಶಿಕಾಂತ್ ಪಾಟೋಳೆ ಶೀತಲ್ ಯಾದವ್ ವೈಭವ್ ಇಂಗಳೆ ಶ್ರೀಶೈಲ ಕೋಟಿವಾಲೆ  ಭವನ ಭೀಲವಡೆ ಬಾಳಸಾಹೇಬ ಗಾಯಗೋಳ ಸಾಗರ್ ಯಾದವ್ ಅನಿಲ್ ವಗ್ಗೆ ಸಂಜಯ್ ನಂದ್ರೆ ಇನ್ನುಳಿದ ಸದಸ್ಯರು ಗ್ರಾಮಸ್ಥರು ಹಾಜರಿದ್ದರು