ಕೊಡಗಾನೂರ ಗ್ರಾಪಂ ಉಪಾಧ್ಯಕ್ಷರಾಗಿ ವಿರೇಶಗೌಡ ಅವಿರೋಧ ಆಯ್ಕೆ
Viresh Gowda elected unopposed as Kodaganur Gramam Vice President
ಕೊಡಗಾನೂರ ಗ್ರಾಪಂ ಉಪಾಧ್ಯಕ್ಷರಾಗಿ ವಿರೇಶಗೌಡ ಅವಿರೋಧ ಆಯ್ಕೆ
ತಾಳಿಕೋಟಿ: ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಕೊಡಗಾನೂರ ಗ್ರಾಮ ಪಂಚಾಯತ್ ಇದರ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾರಗನೂರ ಗ್ರಾಮದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೀರೇಶಗೌಡ ಶ್ರೀಮಂತಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ವೀರೇಶಗೌಡ ಪಾಟೀಲ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಚುನಾವಣಾಧಿಕಾರಿಯೂ ಆದ ತಾಪಂ ಇಒ ನಿಂಗಪ್ಪ ಮಸಳಿ ಅವರು ವೀರೇಶಗೌಡ ಶ್ರೀಮಂತಗೌಡ ಪಾಟೀಲ ( ಕಾರಗನೂರ) ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಒಟ್ಟು 21 ಜನ ಸದಸ್ಯ ಬಲ ಹೊಂದಿರುವ ಕೊಡಗಾನೂರ ಗ್ರಾಪಂ ನ ಉಪಾಧ್ಯಕ್ಷರ ಈ ಚುನಾವಣೆಯಲ್ಲಿ 13 ಜನ ಸದಸ್ಯರು ಹಾಜರಿದ್ದು 8 ಜನ ಸದಸ್ಯರು ಗೈರಾಗಿದ್ದರು.ತಾಪಂ ನ ಬಸನಗೌಡ ಚೌದ್ರಿ, ಮಹಾಂತಗೌಡ ದೊರಗೋಳ, ಪಿಡಿಒ ಅನೀಲಕುಮಾರ್ ಕಿರಣಗಿ ಕಾರ್ಯದರ್ಶಿ ಎಚ್.ಜಿ. ಚೌದ್ರಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ವಿಜಯೋತ್ಸವ: ಜೆಡಿಎಸ್ ಮುಖಂಡರಾದ ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಮಡು ಸಾಹುಕಾರ ಬಿರಾದಾರ ಇವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷರಾದ ಶಾಂತಮ್ಮ ಎಂ. ಪಾಟೀಲ, ಮುಖಂಡರಾದ ಶಾಂತಗೌಡ ಇಬ್ರಾಹಿಂಪೂರ,ಪ್ರಭುಗೌಡ ಪಾಟೀಲ (ಲಕ್ಕುಂಡಿ), ಮಲ್ಲನಗೌಡ ಪಾಟೀಲ (ನಾವದಗಿ), ಸಿದ್ದನಗೌಡ ಪಾಟೀಲ ಲಕ್ಕುಂಡಿ, ಹಣಮಂತರಾಯಗೌಡ ವಣಿಕ್ಯಾಳ, ಮಾಜಿ ಅಧ್ಯಕ್ಷ ಬಸನಗೌಡ ಕಿರಸಾಲ ಪಾಟೀಲ,ಮಾಜಿ ಉಪಾಧ್ಯಕ್ಷ ಬಾಬುಗೌಡ ಪಾಟೀಲ,ರಾಜು ಕಟ್ಟಿಮನಿ, ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 