ಬಾಗಲಕೋಟೆ29 : ವಿಶ್ವ ಮಾಧ್ವ ಮಹಾಪರಿಷತ್, ನಗರದ ಉತ್ತರಾಧಿ ಮಠದ ಸಹಯೋಗದಲ್ಲಿ ನಡೆದ ಉಪನೀತ ಬಾಲಕರ ತರಬೇತಿ ಶಿಬಿರ ಸಮಾರೋಪಗೊಂಡಿತು. ಇದೇ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣ ಪ್ರವಚನ ಮಾಲಿಕೆ ಮಂಗಲಗೊಂಡಿತು.
ನವನಗರದ 63ಎ ಸೆಕ್ಟರನಲ್ಲಿರುವ ಸತ್ಯಭೋದರಾಯರ ಮಠದಲ್ಲಿ ದಿ.19ರಿಂದ ದಿ.25ರವರೆಗೆ ನಡೆದ ತರಬೇತಿ ಶಿಬಿರದಲ್ಲಿ 25ಕ್ಕೂ ಹೆಚ್ಚು ಬಾಲಕರು ಪಾಲ್ಗೊಂಡಿದ್ದು ಅವರಿಗೆ ಸಂಧ್ಯಾವಂದನೆ, ಯೋಗಾಸನ, ಸಂಸ್ಕೃತ ಕಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ನೀಡಲಾಗಿದ್ದು ಪುಟ್ಟ ಪುಟ್ಟ ಮಕ್ಕಳು ಈಗ ಸಂಧ್ಯಾವಂದನೆಯನ್ನು ಸಂಪೂರ್ಣವಾಗಿ ಕಲಿತುಕೊಂಡಿದ್ದಾರೆ.
ಪಂಡಿತರಾದ ಭೀಮಸೇನಾಚಾರ್ಯ ಪಾಂಡುರಂಗಿ, ರಘೋತ್ತಮಾಚಾರ್ಯ ನಾಗಸಂಪಿಗೆ, ಬಿಂದಾಚಾರ್ಯ ನಾಗಸಂಪಿಗಿ, ಬಿ.ಎನ್.ಶ್ರೀನಿವಾಸಾಚಾರ್ಯ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಆರ್,ಎಸ್.ಕುಲಕಣರ್ಿ ಉಪಸ್ಥಿತರಿದ್ದರು.