ಗೃಹ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ವಿನಯಕುಮಾರ ಪಾಟೀಲ

ಗೃಹ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ವಿನಯಕುಮಾರ ಪಾಟೀಲ Vinay Kumar Patil receiving the award from the Home Minister

ವಿಜಯಪುರ 07 :  2022ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿದ ಗುರಿಗಿಂತ  ಅತಿ  ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹ ಮಾಡಿದ ಹೆಗ್ಗಳಿಕೆಗೆ  ವಿಜಯಪುರ ಜಿಲ್ಲೆಯು ಪ್ರಶಸ್ತಿಗೆ ಭಾಜನವಾಗಿದ್ದು, ಸಶಸ್ತ್ರ ಪಡೆಗಳ ದ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ರಾಜಭವನದಲ್ಲಿ ಡಿಸೆಂಬರ್ 7ರಂದು ನಡೆದ ಸಮಾರಂಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರೂ ಆದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರೂ ಆದ ವಿನಯಕುಮಾರ ಪಾಟೀಲ ಅವರು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.  

ಕಳೆದ ವರ್ಷವೂ ಕೂಡಾ ವಿಜಯಪುರ ಜಿಲ್ಲೆಗೆ ಪ್ರಶಸ್ತಿಗೆ ಭಾಜನವಾಗಿತ್ತು. ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ.ಶರತ್‌ಚಂದ್ರ, ಏರ್ ವೈಸ್ ಮಾಶಲ್ ಕೆ.ಎನ್‌. ಸಂತೋಷ (ವಿಎಸ್‌ಎಂ ನಿವೃತ್ತ), ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ ನಿರ್ದೇಶಕರಾದ ಫ್ಲೈಟ್ ಲೆಫ್ಟಿನಂಟ್ ಎಂ.ಎಸ್‌.ಲೋಕಾಕ್ಷ ಉಪಸ್ಥಿತರಿದ್ದರು.