ಹಳೆ ಕನಕಪುರದ ಹತ್ತಿರ , ಕೋಳಿ ತ್ಯಾಜ್ಯ, ಕೂದಲು ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಹಾಕುವುದನ್ನು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
Villagers protest against dumping of chicken waste, hair waste, and hospital waste near Old Kanakap
ಹಳೆ ಕನಕಪುರದ ಹತ್ತಿರ , ಕೋಳಿ ತ್ಯಾಜ್ಯ, ಕೂದಲು ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಹಾಕುವುದನ್ನು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
ಕೊಪ್ಪಳ 16: ಹಳೆಕನಕಪುರ ಗ್ರಾಮದ ಸುತ್ತಲೂ ಕಾರ್ಖಾನೆಗಳ ಹೊಗೆ, ಸಿಮೆಂಟ್ ದೂಳು, ಗೊಬ್ಬರ ಕಂಪನಿ ದುರ್ವಾಸನೆ, ಕಲುಷಿತ ನೀರು, ಕಲುಷಿತ ಗಾಳಿಯಿಂದ ಜನರ ಆರೋಗ್ಯ ದಿನ ನಿತ್ಯ ಹದೆಗೆಡುತ್ತಿದೆ.ಇದು ಒಂದು ಕಡೆ ಸಮಸ್ಯೆಯಾದರೆ ಗ್ರಾಮದ ಹತ್ತಿರದಲ್ಲೇ ಕೋಳಿ ತ್ಯಾಜ್ಯ, ಕೂದಲು ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಹಾಕುವುದು ಜನರ ಬದುಕನ್ನು ದುಸ್ಥಿತಿ ತಳ್ಳಿದೆ. ಗ್ರಾಮಸ್ಥರಿಗೆ ಒಂದಾನೊಂದು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ಟಿ ಬಿ, ಅಸ್ತಮಾ, ಕ್ಯಾನ್ಸರ್ ಚರ್ಮ ರೋಗ, ಮರಣಾಂತಿಕಾ ರೋಗಗಳಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳಿಗೆ ವೃದ್ಧರಿಗೆ ನೆಗಡಿ, ಕೆಮ್ಮು, ಜ್ವರ ಸರ್ವೇ ಸಾಮಾನ್ಯವಾಗಿದೆ.ಅಸಹಜ ಸಾವುಗಳು ಊರನ್ನೇ ಬೆಚ್ಚಿಬೀಳಿಸಿದೆ.ಈ ಕಾರ್ಖಾನೆಗಳು ಬಿಡುವ ವಿಷ ಗಾಳಿ, ಕಲಿಷಿತ ನೀರು, ಜನರ ಆರೋಗ್ಯಕ್ಕೆ ಮಾರಕವಾಗಿರುವ ಇಂತ ವಾತಾವರಣ ವಿರುದ್ಧ ಜನ ರೋಸಿಹೋಗಿದ್ದಾರೆ.ಊರಿನ ಪಕ್ಕದಲ್ಲೇ ಸಿಮೆಂಟ್ ಕಂಪನಿ ಯಾಡ್,ಕಲ್ಯಾಣಿ ಸ್ಟೀಲ್ ಕಂಪನಿ ಫೈನ್ಸ್ ಯಾಡ್, ಕಿರ್ಲೊಸ್ಕರ ಸ್ಲ್ಯಾ ಗ್ ಯಾಡ್ ನಿಂದ ಬರುವ ದೂಳು ಉರಿರಾಟ ತೊಂದರೆಯಾಗಿ ಜನ ಊರು ಬಿಡುವಂತ ಪರಿಸ್ಥಿತಿ ಆಗಿದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮ ಪಂಚಾಯತ್ ಗೆ ಹಲವಾರು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕಾಗಿ ಕೇಳಿಕೊಂಡರು ಯಾವುದೇ ಪರಿಹಾರ ಆಗಿಲ್ಲ. ಹಳೆ ಕನಕಪುರ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚ್ಚವೋ ಆಂದೋಲನ ಸಮಿತಿ ಮುಖಾಂಡರಾದ ಶರಣು ಗಡ್ಡಿ, ಕೆ ಬಿ ಗೋನಾಳ್,ಶರಣು ಶೆಟ್ಟರ್, ಶರಣು ಪಾಟೀಲ್, ಮಂಗಳೇಶ ರಾತೋಡ್,ಗ್ರಾಮದ ಹಿರಿಯ ಮುಖಾಂಡರಾದ ಕಲ್ಲಯ್ಯ ಇಂದರಗಿ ಮಠ, ವಜ್ರ್ಪ ಕಮಲಾಪುರ,ಶರಣಯ್ಯ ಕಲಾಲಬಂಡಿ ಸುರೆಪ್ಪ ಗದಗ್, ಶರಣಯ್ಯ ಗೌಡ್ರು, ಗುಡದಪ್ಪ ಕೆರೆ, ಕಲ್ಲಯ್ಯ ಹಿರೇಮಠ, ಹನುಮೇಶ್ ಕೂಕನೂರ್, ವಿಜಯಪ್ಪ ಅಮೀನಗಡ, ಹನುಮಂತು ಕೂಕನೂರ್,ವಸಂತ, ದ್ಯಾಮಣ್ಣ ಇಟಗಿ, ರಾಚಪ್ಪ ವಾರದ ಇನ್ನು ಅನೇಕರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 