ವಿಜಯಪುರ: ಮಹಿಳೆಯರು ಆತ್ಮವಿಶ್ವಾಸದಿಂದ ಆಥರ್ಿಕವಾಗಿ ಸಬಲರಾಗಬೇಕು: ಆರತಿ

ಲೋಕದರ್ಶನ ವರದಿ

ವಿಜಯಪುರ 14: ಮಹಿಳೆಯರು ಸ್ವಾಲಂಬನೆ ಮತ್ತು ಆತ್ಮವಿಶ್ವಾಸದಿಂದ ಆಥರ್ಿಕವಾಗಿ ಸಬಲರಾಗಬೇಕು ಎಂದು ಬೆಂಗಳೂರಿನ ದೂರದರ್ಶನ ಕೇಂದ್ರದ ಕಾರ್ಯಕ್ರಮನಿರ್ಮಾಪಕಿ  ಎಚ್.ಎನ್.ಆರತಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಮಹಿಳಾ ವಿವಿ ಜ್ಷಾನಶಕ್ತಿ ಆವರಣದ ನೂತನ ಆಡಳಿತ ಭವನದ ಹೊರಾಂಗಣದಲ್ಲಿ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿದ್ಯಾಥರ್ಿ ಕ್ಷೇಮಪಾಲನ ನಿರ್ದೇಶನಾಲಯ , ಕ್ರೀಡಾ ನಿದರ್ೇಶನಾಲಯ ಹಾಗೂ ವಸತಿ ನಿಲಯ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಕ್ರೀಡೆ, ವಸತಿ ನಿಲಯ ಮತ್ತು ಸಾಂಸ್ಕೃತಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಜೀವನದಲ್ಲಿ ಯಾವುದೇ ಅಡೆತಡೆಗಳು ಬಂದರೂ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ನಿಮ್ಮಲ್ಲಿರಬೇಕು. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ವಿದ್ಯಾಥರ್ಿನಿಯರು ಭಾಗವಹಿಸಬೇಕು. ಕಲಿಕೆಯ ಉದ್ದೇಶವು ಪ್ರತಿದಿನ ಮತ್ತು ಪ್ರತಿಕ್ಷಣ ಕಲಿಯುವುದಾಗಿದೆ. ವಿದ್ಯಾಥರ್ಿನಿಯರು ತಾವು ಕಲಿತ ವಿದ್ಯೆಯನ್ನು ವ್ಯರ್ಥ ಮಾಡಬಾರದು. ಅದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ಮಹಿಳಾ ವಿವಿಯು ವಿದ್ಯಾರ್ಥಿನಿಯರ  ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದು ಹರ್ಷವ್ಯಕ್ತಪಡಿಸಿದರು. ವಿದ್ಯಾಥರ್ಿಗಳೆಲ್ಲರೂ ಒಟ್ಟುಗೂಡಿ ಪರಸ್ಪರವಾಗಿ ಹೊಂದಾಣಿಕೆಯಿಂದ ಉತ್ಸಾಹದಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳಿಗೆ  ಶಿಕ್ಷಕರು ಪ್ರೊತ್ಸಾಹಿಸಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕ್ರೀಡಾ ಕಾರ್ಯದಶರ್ಿ ಶಾಂತವ್ವ ಮೇಟ್ಟಿ ಮತ್ತು ವಸತಿ ನಿಲಯದ ವರದಿಯನ್ನು ವಸತಿ ಮತ್ತು ಆರೋಗ್ಯ ಕಾರ್ಯದಶರ್ಿ ಸರಸ್ವತಿ ಸಬರದ ಹಾಗೂ ವಿದ್ಯಾರ್ಥಿ  ಕ್ಷೇಮಪಾಲನ ನಿದರ್ೇಶನಾಲಯದ ಆಪ್ತ ಸಮಾಲೋಚಕಿ ಭಾರತಿ ಹಿರೇಮಠ ವಾರ್ಷಿಕ ವರದಿ ಮಂದಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಸ್ಪರ್ಧೆಯ  ವಿಜೇತರಿಗೆ ಫಲಕ, ಪದಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ಕ್ರೀಡಾ ಸ್ಪರ್ಧೆಯಲ್ಲಿ ಶಿಕ್ಷಣ ಅಧ್ಯಯನ ವಿಭಾಗವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತು. 

ಈ ಕಾರ್ಯಕ್ರಮದಲ್ಲಿ ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಭಾಗವಹಿಸಿದ್ದರು.ವಿದ್ಯಾರ್ಥಿನಿಯರ  ಒಕ್ಕೂಟದ ಮುಖ್ಯ ಕಾರ್ಯದಶರ್ಿ ನಾಜಮೀನ ನಮಾಜಿ ಅನಿಸಿಕೆ ಹಂಚಿಕೊಂಡರು. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು  ಮಹಿಳಾ ಗೀತೆ ಹಾಡಿದರು. ಕ್ರೀಡಾ ನಿರ್ದೇಶನಾಲಯ ನಿದರ್ೇಶಕಿ ಡಾ.ಜ್ಯೋತಿ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ನಿಲಯ ಪಾಲಕಿ ಡಾ.ಶ್ವೇತಾ ಬೆಂಗಾಲೆ ಪರಿಚಯಿಸಿದರು. ವಿದ್ಯಾರ್ಥಿ  ಕ್ಷೇಮಪಾಲನ ನಿದರ್ೇಶನಾಲಯದ ನಿದರ್ೇಶಕ ಡಾ.ಯು.ಕೆಕುಲಕರ್ಣಿ ವಂದಿಸಿದರು. ವಿದ್ಯಾರ್ಥಿ  ಕ್ಷೇಮಪಾಲನ ನಿರ್ದೇಶನಾಲಯ ಅಧಿಕಾರಿ ಅಶ್ವಿನಿ ಕೆ.ಎನ್. ನಿರೂಪಿಸಿದರು.