ವಿಜಯನಗರ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

ವಿಜಯನಗರ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ Vijayanagara District Level Talent Fountain and Art Festival Program


ಹೊಸಪೇಟೆ. 15 : ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಎಂ.ಪಿ ಪ್ರಕಾಶ್ ನಗರದಲ್ಲಿರುವ ಮಾಕಂರ್ಡೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವಿಜಯನಗರ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ವಿಜಯನಗರ ಇವರ ವತಿಯಿಂದ 2025-26ನೇ ಸಾಲಿನ ವಿಜಯನಗರ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರು ಹಾಗು ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಹೆಚ್‌. ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕ್ಲಸ್ಟರ್ ಮಟ್ಟವನ್ನು ಹಾಗು ತಾಲ್ಲೂಕು ಮಟ್ಟವನ್ನು ಮುಗಿಸಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುವ ವಿಧ್ಯಾರ್ಥಿ ಹಾಗು ವಿಧ್ಯಾರ್ಥಿನಿಯರಿಗೆ ಹಾಗು ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೂ ಪಾಲಕ ಪೋಷಕರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಹಾಗು ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಹಾಗು ರಾಷ್ಟ್ರಮಟ್ಟದಲ್ಲಿ ಬೆಳೆದು ವಿಜಯ ನಗರ ಕ್ಷೇತ್ರದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ ಎಂದು ಹಾರೈಸಿದರು. 

ಜೀವನದಲ್ಲಿ ಅಂಕಗಳೇ ಅಂತಿಮ ಅಲ್ಲ, ಅಂಕಗಳು ಹಾಗು ಪುರಸ್ಕಾರಗಳ ಜೊತೆಗೆ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಸಬೇಕು. ಇಂದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟ ಸೌಲಭ್ಯಗಳನ್ನು ಒದಗಿಸಿದೆ ಅದನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಶಿಕ್ಷಣವನ್ನು ಪೂರ್ತಿಗೊಳಿಸಬೇಕು ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು. ಉತ್ತಮ ಸುಶಿಕ್ಷಕರಾಗಿ ಉತ್ತಮ ನಾಗರಿಕರಾಗಿ ರಾಜ್ಯದ ಅಭಿವೃದ್ಧಿಗೆ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗ ಬೇಕಾಗಿರುತ್ತದೆ. ಹಾಗೂ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ನಾಣ್ಣುಡಿಯಂತೆ ಮಕ್ಕಳ ಒಳಗಿರುವ ಪ್ರತಿಭೆಯನ್ನು ಪಾಲಕರು ಪೋಷಕರು ಮತ್ತು ಶಿಕ್ಷಕರು ಗುರುತಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ.  

ವಿಶೇಷವಾಗಿ ವಿದ್ಯಾರ್ಥಿಗಳು ಸಹ ಅನಾವಶ್ಯಕ ಸಮಯವನ್ನ ವ್ಯರ್ಥ ಮಾಡದೆ ಮೊಬೈಲ್ ಗಳಿಗೆ ಅಡಿಕ್ಟ್‌ ಆಗದೆ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ದಿನನಿತ್ಯದ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಆಟ ಪಾಠ ಕ್ರೀಡೆಗಳಲ್ಲಿ ಹೆಸರು ಮಾಡಿ ಜನ್ಮ ಕೊಟ್ಟ ತಂದೆ ತಾಯಿಗಳಿಗೂ ಹಾಗೂ ಪಾಲಕರಿಗೂ ಪೋಷಕರಿಗೂ ವಿದ್ಯೆ ಕಲಿಸಿದ ಶಿಕ್ಷಕರಿಗೂ ಗೌರವ ತರುವಂತ ಕೆಲಸ ಮಾಡಬೇಕೆಂದು ಕರೆ ನೀಡಿದರು  

ಈ ಒಂದು ಕಾರ್ಯಕ್ರಮದಲ್ಲಿ ಅಪರ ಪೋಲೀಸ್ ಅಧೀಕ್ಷಕರಾದ ಮಂಜುನಾಥ ಹಾಗು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷನಾಧಿಕಾರಿಗಳಾದ ಪುರುಷಪ್ಪ ಭಜಂತ್ರಿ, ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇಖರ​‍್ಪ ಹೊರಪೇಟೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಾನಂದ, ತಾಲ್ಲೂಕು ಸಮಿತಿಯ ಅಧ್ಯಕ್ಷರಾರ ತಿಮ್ಮಪ್ಪ, ವಿಜಯನಗರ ಜಿಲ್ಲಾ ಫ್ರೌಡ ಶಾಲಾ ಮುಖ್ಯ ಗುರುಗಳ ಸಂಗದ ಅಧ್ಯಕ್ಷರಾದ ಅಕ್ಕ ಮಹಾದೇವಿ, ರಾಜಶೇಖರ, ವಿಶ್ವನಾಥ್, ಬಸವಂತಯ್ಯ ಹಿರೇಮಟ್, ಹಾಗು  ಮಾಕಂರ್ಡೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಡಳಿತಾಧಿಕಾರಿಗಳಾದ ಜಯರಾಮ್, ಹಾಗು ಮುಖ್ಯಗುರುಗಳು, ಹಾಗು ಸಿಬ್ಬಂದಿವರ್ಗದವರು, ಈ ಬಾಗದ ಹಿರಿಯ ಮುಖಂಡರು ಹಾಗೂ ಪಾಲಕರು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದರು.