ವಿದ್ಯಾಥರ್ಿನಿ ಮಧು ಸಾವು ಶೀಘ್ರನ್ಯಾಯಕ್ಕಾಗಿ ಜಂಬಗಿ ಆಗ್ರಹ

ಲೋಕದರ್ಶನವರದಿ

ರಾಣೇಬೆನ್ನೂರ 27: ರಾಯಚೂರಿನ ಇಂಜನೀಯರಿಂಗ್ ವಿದ್ಯಾಥರ್ಿನಿ ಮಧು ಪತ್ತಾರ ಅವರ ನಿಗೂಢಸಾವಿನ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ಸೇರಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ ಕೂಡಲೇ ದುಷ್ಕಮರ್ಿಗಳನ್ನು ಬಂಧಿಸಿ ಕಠಿಣ ಕಾನೂನು ಜರುಗಿಸಿ ಮತ್ತೆ ಇಂತಹ ಪ್ರಕರಣಗಳಿಗೆ ತೆರೆ ಎಳೆಯುವಂತೆ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದು ಸಮಾಜ ಸೇವಕಿ ಭಾರತಿ ಜಂಬಗಿ ಹೇಳಿದರು.

     ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಧುನಿಕತೆಯ ಯುಗದಲ್ಲಿ ಇಂದಿಗೂ ಸಹ ಇಂತಹ ಅಮಾನವೀಯ ಪ್ರಕರಣಗಳನ್ನು ನಡೆಯುತ್ತವೆ ಎಂದರೆ ನಿಜಕ್ಕೂ ನಾಚಿಗೇಡಿತನವಾಗಿದೆ. ಮಹಿಳೆಯರ ಬಗ್ಗೆ ಸ್ವಲ್ಪನೂ ಗೌರವವಿಲ್ಲದ ದುಷ್ಕಮರ್ಿಗಳು ಇಂತಹ ಕೃತ್ಯಗಳನ್ನು ಎಸೆಗುತ್ತಾ ಬಂದಿದ್ದಾರೆ. ಇವರಿಗೆ ಮುಲಾಜಿಲ್ಲದೆ ಕಠಿಣ ಶಿಕ್ಷೆಗೆ ಗುರಿಪಡಿಸಿ ಶೀಘ್ರವೇ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಮಹಿಳೆ ಮತ್ತು ವಿದ್ಯಾಥರ್ಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಅನೇಕ ಭಾಗಗಳಲ್ಲಿ ನಡೆಯುತ್ತಿದ್ದರೂ ಸಹ ಕೆಲ ಪ್ರಭಾವಿ ವ್ಯಕ್ತಿಗಳಿಂದ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ಹಾಗೂ ವಿದ್ಯಾಥರ್ಿನಿಯರಿಗೆ ನ್ಯಾಯ ಸಿಗದೆ ಸಾವು ಮತ್ತು ಬದುಕಿನ ಮಧ್ಯ ಹೋರಾಡಿ ಕೊನೆಯುಸಿರೆಳೆಯುವಂತಾಗಿದೆ. ಇಂತಹ ವೈಮನಸ್ಸಿನ ಪೈಶಾಚಿಕ ಕೃತ್ಯಗಳಲ್ಲಿ ತೊಡಗುವವರಿಗೆ ಹಾಗೂ ಬೆಂಬಲಿಸುವವರಿಗೆ ಸಕರ್ಾರ ಸೂಕ್ತ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂದರು.

     ರಾಜ್ಯದಲ್ಲಿ ಇಂತಹ ಪ್ರಕರಣಗಳು ಅಧಿಕವಾಗಿ ನಡೆಯುತ್ತಿದ್ದರೆ ಶಾಲಾ ಕಾಲೇಜುಗಳಿಗೆ ಮಹಿಳೆಯರನ್ನು ಕಳುಹಿಸುವುದಕ್ಕೆ ಪಾಲಕರು ಮತ್ತು ಪೋಷಕರು ಹಿಂದೇಟು ಹಾಕುತ್ತಾರೆ. ಗ್ರಾಮೀಣ ಭಾಗಗಳಲ್ಲಂತೂ ಬಸ್ಗಳಿಲ್ಲದೆ ಕೆಲವಡೆ ನಡೆದುಕೊಂಡು ಗ್ರಾಮಗಳಿಗೆ ತೆರಳುವ ಸಂದರ್ಭ ಕಂಡು ಬರುತ್ತದೆ. ಇಂತಹ ಪ್ರಕರಣಗಳಿಂದ ಗಾಬರಿಗೊಂಡು ವಿದ್ಯಾಥರ್ಿನಿಯರನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವಲ್ಲಿ ಹಿಂದು ಮುಂದು ನೋಡುತ್ತಾರೆ ಎಂದರು.

     ಮಧು ಪತ್ತಾರ ಸಾವಿನ ಬಗ್ಗೆ ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರ ತಂದೆ ತಾಯಿಗೆ ನ್ಯಾಯ ಒದಗಿಸಿಕೊಡಬೇಕು. ರಾಜ್ಯದಲ್ಲಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸರಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮುನ್ನಡೆಯಬೇಕು. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡದೆ ದುಷ್ಕಮರ್ಿಗಳಿಗೆ ಮರಣ ದಂಡನೆ ವಿಧಿಸುವಲ್ಲಿ ಮುಂದಾಗಬೇಕು ಎಂದರು.