ಬಾಲಕಿಗೆ ವಿಷಪೂರಿತ ಹಾವು ಕಡಿತ

ಕಾರವಾರ 30: ವಿಷಪೂರಿತ ಹಾವೊಂದು ಕಡಿದು ಬಾಲಕಿಯೊಬ್ಬಳು ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಗುರುವಾರ ಸಾಯಂಕಾಲ  ನಡೆದಿದೆ. 

ತೇಜು ರೋಹಿದಾಸ ನಾಯ್ಕ (12) ಹಾವು ಕಡಿತಕ್ಕೊಳಗಾದ ಬಾಲಕಿ. ಈಕೆ ಹಟ್ಟಿಕೇರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿ. ಗುರುವಾರ ಸಾಯಂಕಾಲ ಮನೆಯಿಂದ ದೇವಸ್ಥಾನಕ್ಕೆ ತೆರಳುತ್ತಿರುವಾಗ ದಾರಿ ಮಧ್ಯದಲ್ಲಿ ಬಾಲಕಿಯ ಕಾಲಿಗೆ ಹಾವು ಕಡಿದಿದೆ. ಆಗ ಬಾಲಕಿಯ ಬೊಬ್ಬೆಗೆ ಕೂಡಲೇ ಸಾರ್ವಜನಿಕರು ಸುತ್ತುವರೆದು ರಸ್ತೆ ಪಕ್ಕದ ಪೊದೆಯೊಂದರಲ್ಲಿದ್ದ ಆ ಹಾವನ್ನು ಜೀವಂತವಾಗಿ ಹಿಡಿದು, ಬಾಲಕಿಯ ಜೊತೆಗೆ ಕಾರವಾರ ವೈದ್ಯಕೀಯ ಕಾಲೇಜಿಗೆ ತಂದಿದ್ದರು. 

ಈ ವಿಷಪೂರಿತ ಹಾವು ಆಫ್ರಿಕಾ ಮತ್ತು ಭಾರತ ಸೇರಿದಂತೆ ಕೆಲ ಏಷ್ಯಾಖಂಡದಲ್ಲಿ ಮಾತ್ರ ಕಂಡು ಬರುವ ಅಪರೂಪದ ಹಾವು. ಈ ಹಾವಿನ ಕಡಿತದಿಂದ ಗಾಂಗ್ರಿನ್ಗೊಳಗಾಗುವ ಸಾಧ್ಯತೆ ಹೆಚ್ಚು. ಬಾಲಕಿಗೆ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.  ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆಂದು ತಿಳಿದುಬಂದಿದೆ.