ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ: ಪೂರ್ವಭಾವಿ ಸಭೆ
Veerarani Kittur Chennamma Jayanti: Preparatory meeting
ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ: ಪೂರ್ವಭಾವಿ ಸಭೆ
ಇಂಡಿ 17: ವೀರರಾಣಿ ಕಿತ್ತೂರ ಚನ್ನಮ್ಮನವರ ಜಯಂತೋತ್ಸವ ಕಾರ್ಯಕ್ರಮವನ್ನು ಅ.23 ರಂದು ಗುರುವಾರ ಎಲ್ಲ ಗ್ರಾಮ ಪಂಚಾಯತ, ತಾಲೂಕಾ ಆಡಳಿತ ಕಛೇರಿಗಳು, ಅಂಗನವಾಡಿ ಕೇಂದ್ರಗಳಲ್ಲಿ, ಸೇರಿದಂತೆ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ಸರಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಹೇಳಿದರು.
ಅವರು ಪಟ್ಟಣದ ತಹಸೀಲದಾರ ಕಛೇರಿಯ ಸಭಾಭವನದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತೋತ್ಸವ ಕಾಯಕ್ರಮದ ಕುರಿತು ಏಪ9ಡಿಸಿದ ಪೂವ9ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂದು ಎಲ್ಲ ಇಲಾಖೆಗಳಲ್ಲಿ ಭಾವಚಿತ್ರ ಪೂಜೆ ಸಲ್ಲಿಸಿ ನಂತರ ಸರಿಯಾಗಿ 10 ಘಂಟೆಗೆ ಮಿನಿ ವಿಧಾನ ಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ಏಪ9ಡಿಸಿದ ಚನ್ನಮ್ಮ ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಪಂಜಮಸಾಲಿ ಸಮಾಜದ ಇಂಡಿ ತಾಲೂಕು ಅಧ್ಯಕ್ಷರಾದ ವ್ಹಿ.ಎಚ್.ಬಿರಾದಾರ, ಜಿಲ್ಲಾ ಯುವಘಟಕದ ಅಧ್ಯಕ್ಷರಾದ ಸೋಮು ದೇವರ, ಕಾರ್ಯದರ್ಶಿ ಶಿವಾನಂದ ಚಾಳಿಕಾರ, ಬಾಳು ಮುಳಜಿ, ಸುಧಾಕರಗೌಡ ಬಿರಾದಾರ, ಶರಣಗೌಡ ಬಂಡಿ ಮಾತನಾಡಿ,ರಾಣಿ ಚನ್ನಮ್ಮನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ.
ಈ ಸಭೆಯಲ್ಲಿ ತಾಲೂಕಾ ಅಧಿಕಾರಿಗಳಾದ ಧನಪಾಲಶೇಟ್ಟಿ ದೇವೂರ, ಎಸ್.ಆರ್.ಗದ್ಯಾಳ, ಸಂತೋಷ ಹೋಟಗಾರ, ಕ್ರೀಡಾಧಿಕಾರಿ ಪೂಜಾರಿ ಸರ್, ಮೆಂಡೆಗಾರ ಸರ್, ಸುನೀಲಗೌಡ ಬಿರಾದಾರ, ಶಿವಾನಂದ ದೇವರ, ಈರನೌಡ ಪಾಟೀಲ, ನಿಂಗನಗೌಡ ಬಿರಾದಾರ, ವೈ.ಜಿ.ಬಿರಾದಾರ, ರಾಮಸಿಂಗ್ ಕನ್ನೊಳ್ಳಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮಾಜ ಬಾಂಧವರು ಉಪಸ್ತಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 