ಹೊಂಡದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
Veerabhadreshwara Jatra Festival in Honda
ಧಾರವಾಡ 02 : ಇಲ್ಲಿಯ ಜೆ.ಎಸ್.ಎಸ್. ಕಾಲೇಜ್ ಹಿಂಭಾಗದಲ್ಲಿರುವ ಹೊಂಡದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುವುದು.
ಜಾತ್ರಾ ಅಂಗವಾಗಿ ಇದೇದಿನಾಂಕ: 3ರಂದುಬುಧವಾರ ಬೆಳಿಗ್ಗೆ 6 ಗಂಟೆಗೆ ಗುಗ್ಗಳವು ದೇವಸ್ಥಾನದಿಂದ ಹೊರಟು ತುರಮರಿ ಮಠ, ವಾಲ್ಮಿಕಿಓಣಿ, ಮಟ್ಟಿಪರ್ಪನಕೂಟ, ನಗರೇಶ್ವರ ದೇವಸ್ಥಾನ, ರವಿವಾರ ಪೇಟ, ಪಂಚ ಕಛೇರಿ ಓಣಿ, ಕಾಮನಕಟ್ಟಿ, ಹೊಸಯಲ್ಲಾಪುರ ಮೂಲಕ ಕಲ್ಮೇಶ್ವರ ದೇವಸ್ಥಾನಕ್ಕೆ ತಲುಪುವುದು. ಇದರಲ್ಲಿ ಯಾರಾದರೂ ಗುಗ್ಗಳ ಕಾರ್ಯವನ್ನುತಿರಿಸಿ ಕೊಳ್ಳಬಯಸಿದಲ್ಲಿ ಉಚಿತವಾಗಿ ಮಾಡಿಕೊಳ್ಳಬಹುದು.
ದಿನಾಂಕ: 4 ರಂದು ಗುರುವಾರ ಬೆಳಗಿನ 5 ಗಂಟೆಗೆ ರುದ್ರಾಭಿಷೇಕ ನಂತರ 12 ಗಂಟೆಗೆಅನ್ನ ಸಂತರೆ್ಣ ಹಾಗೂ ಸಾಯಂಕಾಲ 4-30 ಕ್ಕೆ ರಥೋತ್ಸವ ಜರುಗುವದು. ಭಕ್ತರು ಭಾಗವಹಿಸಿ ವೀರಭದ್ರೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಹೊಂಡದ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 