ಅದ್ದೂರಿಯಾಗಿ ವೀರಭದ್ರೇಶ್ವರ ಜಾತ್ರೆ: ದಾಸೋಹ ಚಕ್ರವರ್ತಿ ಅನ್ನದಾನೇಶ್ವರರಿಗೆ ಪ್ರಶಸ್ತಿ ಪ್ರದಾನ
Veerabhadreshwara Fair celebrated in grand style: Dasoha Chakravarthy Annadaneshwar presented with
ಅದ್ದೂರಿಯಾಗಿ ವೀರಭದ್ರೇಶ್ವರ ಜಾತ್ರೆ: ದಾಸೋಹ ಚಕ್ರವರ್ತಿ ಅನ್ನದಾನೇಶ್ವರರಿಗೆ ಪ್ರಶಸ್ತಿ ಪ್ರದಾನ
ಯರಗಟ್ಟಿ 08: ಪಟ್ಟಣದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ಅದ್ದೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ಬೆಳಗ್ಗೆ ರುದ್ರಾಭೀಷೇಕ, ಮಹಾಪೂಜೆ ಹಾಗೂ ಭಕ್ತರ ಹರಕೆ ತೀರಿಸುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಹತ್ತು ಗಂಟೆಗೆ ವೀರಭದ್ರೇಶ್ವರ ಮೂರ್ತಿಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ಕರಡಿ ಮಜಲು, ಭಜನಾ ಮೇಳ, ಡೊಳ್ಳು ಮೇಳ, ಕುಂಭ ಹೊತ್ತ ನೂರಾರು ಮುತ್ತೈದೆಯರು ಪಾಲ್ಗೊಂಡಿದ್ದರು. ಪುರವಂತರ ಕುಣಿತ ಬೀದಿಯುದ್ದಕ್ಕೂ ಪಲ್ಲಕ್ಕಿ ಉತ್ಸವವು ಜನರ ಗಮನ ಸೆಳೆಯಿತು.
ನಂತರ ನಡೆದ ಅಗ್ನಿ ಪ್ರವೇಶ ಕಾರ್ಯಕ್ರಮಕ್ಕೆ ತೋರಣಗಟ್ಟಿ ಪುರವಂತರಾದ ಪರ್ಪ ಶಿಂಗಾರಗೊಪ್ಪ ಹಾಗೂ ತಂಡದವರು ಪಾಲ್ಗೊಂಡಿದ್ದರು. ಅಗ್ನಿ ಪ್ರವೇಶದಲ್ಲಿ ಹಲವು ಭಕ್ತರು ಕೆಂಡ ಹಾಯ್ದು ತಮ್ಮ ಹರಕೆ ತೀರಿಸಿದರು. ನಂತರ ಬಂಡಿಗಣಿ ಮಠದ ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಪೂಜ್ಯರನ್ನು ಸಕಲ ವಾದ್ಯಗೋಷ್ಠಿ ಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ಜಾತ್ರಾ ಮಹೋತ್ಸವ ಕಮೀಟಿ ವತಿಯಿಂದ ಬಂಡಿಗಣಿ ಮಠದ ಪೂಜ್ಯ ದಾಸೋಹ ಚಕ್ರವರ್ತಿ ಅನ್ನದಾನೇಶ್ವರಿಗೆ ವೀರಭದ್ರೇಶ್ವರ ಕುಲಪುತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈರ್ಪ ಹಾದಿಮನಿ ಹಾದಿಮನಿ, ಕುಮಾರ ಹಿರೇಮಠ, ಈರಣ್ಣಾ ಮಠಪತಿ, ದುಂಡಯ್ಯ ಹಿರೇಮಠ, ಶಿವಲಿಂಗಪ್ಪ ವಾಲಿ, ಬಾಬು ಪಟ್ಟೇದ, ಶಿವಾನಂದ ಕರ್ಜಗಿಮಠ, ಸದಾನಂದ ಹಣಬರ, ಬಸವರಾಜ ವಾಲಿ, ಶಿವಾನಂದ ಬಳಿಗಾರ, ಶಂಕರ ಇಟ್ನಾಳ, ರಫೀಕ ಬಾಂಬೆ, ಮೋಹನ ಹಾದಿಮನಿ, ಗೌಡಪ್ಪ ಸವದತ್ತಿ, ಪ್ರವೀಣ ಬೆಣ್ಣಿ, ಸಂತೋಷ ವಾಲಿ, ಸೇರಿದಂತೆ ತೋರಣಗಟ್ಟಿ, ಮುಗಳಿಹಾಳ, ಹಳ್ಳೂರ ಪುರವಂತರು ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 