ವೀರ ನಾರಿ ರತ್ನ ಪ್ರತಿಷ್ಠಾನ: ಸೈನಿಕರ ಕುಟುಂಬಗಳ ಶ್ರೇಯೋಭಿವೃದ್ದಿ ಶಕ್ತಿ ಕಿರಣ
ಧಾರವಾಡ 28: ನಗರದ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ “ವೀರ ನಾರಿ ರತ್ನ ಪ್ರತಿಷ್ಠಾನ,” ( ಯೋಧರ ಪತ್ನಿಯರ ಸಂಘ) ಕಾರ್ಯಕ್ರಮ ಆಯೋಜಿಸಿದ ಕುರಿತು. ನಾಯಾಬ್ ಸುಬೇದಾರ್ ಯಲ್ಲಪ್ಪ ಪುಣ್ಣಪ್ಪ ಜಗ್ರುಂಜಿ ರವರು ಮಾತನಾಡಿ “ವೀರ ನಾರಿ ರತ್ನ ಪ್ರತಿಷ್ಠಾನ ಸಂಘವು ಎಲ್ಲಾ ಸೈನಿಕರ ಪತ್ನಿಯರಿಗೂ ಈ ಸಂಘದಿಂದ ಸೂಕ್ತ ವೇದಿಕೆ ದೊರೆಯುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರವಾಧ್ಯಕ್ಷರು ವೀರ ನಾರಿ ಪ್ರತಿಷ್ಠಾನ, ಧಾರವಾಡ ಹಾಗೂ ಸಾಯಿ ಪಿ ಯು ಕಾಲೇಜಿನ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ, ರವರು ಸೈನಿಕರ ಪತ್ನಿಯರ ಕಲ್ಯಾಣ ಸಂಘವಾದ ಸೈನಿಕರ ಕುಟುಂಬಗಳ ಶೃಯೋಭಿವೃಧ್ದಿ, ಮಹಿಳಾ ಸಬಲೀಕರಣ, ಇದು ಕರ್ನಾಟಕದಲ್ಲಿ ಮೊಟ್ಟ ಮೊದಲ ಸೈನಿಕ ಪತ್ನಿಯರ ಸಂಘ ಇದಾಗಿರುವುದು ಹೆಮ್ಮೆಯ ವಿಷಯ. ಸೈನಿಕರ ಪತ್ನಿಯರ ಹಾಗೂ ಕುಟುಂಬಗಳ ಆರ್ಥಿಕ ಸ್ವಾವಲಂಬನೆ, ಶಿಕ್ಷಣ, ಕೌಶಲ್ಯ, ಮಕ್ಕಳ ಪ್ರೋತ್ಸಾಹ ಇತ್ತಾದಿ ಯೋಚನೆ ಇಟ್ಟುಕೊಂಡು ಈ ಸೈನಿಕ ಪತ್ನಿಯರ ಸಂಘ ಸ್ಥಾಪಿಸಲಾಯಿತು.
ಅದರಂತೆ ಸೈನಿಕ ಪತ್ನಿಯರ ಕಲ್ಯಾಣ ಸಂಘವು ಸೈನಿಕರ ಶ್ರೇಯೋಭಿವೃದ್ದಿ ಮಹಿಳಾ ಶಕ್ತಿ ಕಿರಣ, ಸಮಾಜಮುಖಿ ಸೇವೆ ಮತ್ತು ಆರ್ಥಿಕ ಪ್ರಗತಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ಇನ್ನು ಹತ್ತು ಹಲವಾರು ಕಾರ್ಯಕ್ರಮ ರೂಪಿಸುವ ದೂರ ದೃಷ್ಟಿ ಇಟ್ಟು ಮುಂದೆ ಎಲ್ಲರೂ ಒಗ್ಗಟ್ಟಾಗಿ ಹೆಜ್ಜೆ ಹಾಕೋಣ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ, ನಾಯಾಬ್ ಸುಬೇದಾರ್ ಯಲ್ಲಪ್ಪ ಪುಣ್ಣಪ್ಪ ಜಗ್ರುಂಜಿ ನಿವೃತ್ತ ನಿರ್ದೇಶಕರು ವೆಂಕಟೇಶ್ವರ ಕೋ ಆಫರೇಟಿವ್ ಪಾವರ ಆ್ಯಂಡ್ ಅಗ್ರೋ ಪ್ರೋಸೆಸಿಂಗ್ ಲಿಮಿಟೆಡ್. ಡಾ ಎಚ್ ಎಚ್ ಕುಕನೂರ ಜಿಲ್ಲಾ ಪಂಚಾಯತ, ಧಾರವಾಡ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ದಾರವಾಡ, ಅಧ್ಯಕ್ಷತೆ ಅನ್ನಪೂರ್ಣಾ ಎಸ್ ಜಿ ಅಧ್ಯಕ್ಷರು ವೀರ ನಾರಿ ಪ್ರತಿಷ್ಠಾನ, ಧಾರವಾಡ. ಹಾಗೂ ವೀರ ನಾರಿ ಪ್ರತಿಷ್ಠಾನ ಪದಾಧಿಕಾರಿಗಳಾದ ರೇಣುಕಾ ಎಮ್ ಬಿ, ಉಮಾ ಎಸ್ ಕೆ, ಪುಷ್ಪಾ ಎಸ್ ಎಚ್, ಮಂಜುಳಾ ಕಟ್ಟಿಮನಿ, ಎಚ್ ಬಿ ಪಾಟೀಲ ಜಿಲ್ಲಾ ಪ್ಯಾರಾಮಿಟರಿ ಸಂಘದ ಅಧ್ಯಕ್ಷರು, ವೀರ ನಾರಿ ಪ್ರತಿಷ್ಠಾನ ಎಲ್ಲಾ ಸಹೋದರಿಯರು ಹಾಗೂ ಸಾಯಿ ಮಾಹಾವಿದ್ಯಾಲಯದ ಸಿಬ್ಬಂದಿ ವರ್ಗ ದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.