ದತ್ತಿ ನಿಧಿ ಕಾರ್ಯಕ್ರಮದಲ್ಲಿ ಮೌಲ್ಯ ಸಂದೇಶ ಮುಂಡಗೋಡ ರೋಟರಿ ಶಾಲೆಯಲ್ಲಿ ಅರ್ಥಪೂರ್ಣ ಆಚರಣೆ
Value message at endowment fund program, meaningful celebration at Mundagoda Rotary School
ಮುಂಡಗೋಡ 22: ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದ ವತಿಯಿಂದ ರೋಟರಿ ಪ್ರೌಢಶಾಲೆಯಲ್ಲಿ ನೀಲಮ್ಮಗೌಡ್ ಚಾಲಿ ಹಾಗೂ ದಿವಂಗತ ಶಿವನಗೌಡ ಪಾಟೀಲ್ ಅವರ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆದು ನಾಡು, ನುಡಿಗೆ ಸೇವೆ ಸಲ್ಲಿಸಬೇಕು, ತಂದೆ-ತಾಯಿಯನ್ನು ಗೌರವಿಸಬೇಕು ಎಂದು ತಿಳಿಸಿದರು. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಸಂಸ್ಕಾರ ಬೆಳೆಸಬೇಕು ಎಂದರು. ಮುಖ್ಯ ಅತಿಥಿಗಳಾದ ಡಾ. ಎಂ.ಸಿ. ಜಂಬಗಿ ಮಾತನಾಡಿ, ದಿವಂಗತ ನೀಲಮ್ಮಗೌಡ್ ಚಾಲಿ ಹಾಗೂ ಶಿವನಗೌಡ ಪಾಟೀಲ್ ಅವರ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮವನ್ನು ಪ್ರೌಢಶಾಲೆಯಲ್ಲಿ ಆಯೋಜಿಸಿರುವುದು ಸಂತಸದ ವಿಚಾರ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಂಡಗೋಡ ಘಟಕದ ಅಧ್ಯಕ್ಷರಾದ ವಸಂತ ಕೊಣಸಾಲಿ ಮಾತನಾಡಿ, “ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮಾದರಿಯಾಗಿವೆ. ತಂದೆ-ತಾಯಿಯ ಗೌರವವನ್ನು ಉಳಿಸಿಕೊಂಡು ಬೆಳೆಸಬೇಕು.
ದತ್ತಿ ನಿಧಿ ಕಾರ್ಯಕ್ರಮಗಳು ನಮ್ಮ ಪರಿಷತ್ತಿನ ವತಿಯಿಂದ ಪ್ರತಿವರ್ಷವೂ ಆಚರಿಸಿ ಅವರ ನೆನಪನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚಿನ ಗಮನಹರಿಸಿ ಆದರ್ಶ ವಿದ್ಯಾರ್ಥಿಗಳಾಗಬೇಕು. ಮಾತೃಭಾಷೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ” ಎಂದರು. ಕಾರ್ಯಕ್ರಮದಲ್ಲಿ ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜಿ.ಎನ್. ಕುಲಕರ್ಣಿ, ಸಂಗಪ್ಪ ಕೊಳೂರು, ಎಸ್. ಬಿ. ಹೂಗಾರ, ಸುಭಾಸ್ ವಡ್ಡರ, ಸಿ. ಎನ್. ಸುರಕೋಡ, ನಾಗರಾಜ ಅರ್ಕಸಾಲಿ, ಎಸ್.ಡಿ. ಮುಡೆಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಸ್ವಾಗತ ಹಾಗೂ ಪ್ರಸ್ತಾವನೆಯನ್ನು ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ ನೆರವೇರಿಸಿದರು. ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಕೊನೆಯಲ್ಲಿ ವಿ.ಎಸ್. ಪಾಟೀಲ್, ಡಾ.ಎಂ.ಸಿ. ಜಂಬಗಿ ಹಾಗೂ ಜಿ.ಎನ್. ಕುಲಕರ್ಣಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 