ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಮೌಲ್ಯ ಶಿಕ್ಷಣ ಅಗತ್ಯ
Value education is necessary in the education system today
ಇಂದಿನ ಮಕ್ಕಳಲ್ಲಿ ಮೌಲ್ಯಗಳು ಕಡಿಮೆಯಾಗಿವೆ. ಮೌಲ್ಯ ಶಿಕ್ಷಣವು ಒಂದು ಪಠ್ಯವಾಗಿ ಜಾರಿಗೋಳಿಸಬೇಕು. ಹಾಗೂ ಶಿಕ್ಷಣದೊಂದಿಗೆ ಸಮಾಜಮುಖಿ ಸೇವಾ ಮನೋಭಾವನೆಯನ್ನು ಬೆಳಿಸಿಕೋಳ್ಳಬೇಕೆಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾದ ಡಾ. ತೇಜಸ್ವಿವಿ ನಾರಾಯಣಕರ ಅಭಿಪ್ರಾಯಪಟ್ಟರು.
ಮಾಳಮಡ್ಡಿಯ ಕೆ.ಇ. ಬೋಡಿನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ನೂತನ ಘಟಕದ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಕೇಂದ್ರಿಕರಿಸಿ ಗ್ರಾಮೀಣ ಪ್ರದೇಶಗಳ ಅಭಿವೃದಿಗೆ ಪೂರಕವಾಗಿವೆ. ಸಮಾಜದಲ್ಲಿ ಸ್ವಚ್ಛತೆ ಕಾಪಾಡುವುದು, ವಯೋವೃದ್ದರಿಗೆ ಸಹಾಯ ಮಾಡುವುದು ರಾಷ್ಟ್ರೀಯ ವಿಪತ್ತುಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಸ್.ಎಸ್. ಹನುಮಂತಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜ ಸೇವೆ ಮೂಲಕ ವ್ಯಕ್ತಿತ್ವ ವಿಕಸನ, ರಾಷ್ಟ್ರ ನಿರ್ಮಾಣ, ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸಾಮಾಜಿಕ ಜವಾಬ್ಬಾರಿಗಳನ್ನು ಹೊಂದಿ ಒಳ್ಳೆಯ ನಾಗರಿಕರಾಗಬೇಕೆಂದು ತಿಳಿಸಿದರು.
ಧಾರವಾಡ ಜಿಲ್ಲಾ ನೊಡಲ್ ಅಧಿಕಾರಿ ಶ್ರೀ. ರಾಜಕುಮಾರ ಭಜಂತ್ರಿ ಮಾತನಾಡಿ ಗಾಂಧೀಜಿಯವರ ಸರ್ವೋದಯ ತತ್ವದ ಆಧಾರದ ಮೇಲೆ ಎನ್.ಎಸ್.ಎಸ್. ಕಾರ್ಯ ನಿರ್ವಹಿಸುತ್ತದೆ ಸಮೂದಾಯದ ಅಹತ್ಯತೆಗಳು ಮತ್ತು ಸಮಸ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುವ ಮತ್ತು ಜವಾಬ್ಬಾದಾರಿ ಹಂಚಿಕೊಳ್ಳುವ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಸುನಿತಾ ಕಡಪಟ್ಟಿ ಮಾತನಾಡಿ ಶಿಕ್ಷಣದೊಂದಿಗೆ ಸೇವೆ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆ, ಚಕ್ರದ ಗುರುತು ಯಾವತ್ತೂ ಚಲನಶೀಲವಾಗಿದ್ದು ಚಲಿಸುತ್ತಾ ಬೆಳವಣಿಗೆ ಹೊಂದುವುದನ್ನು ತಿಳಿಸುತ್ತದೆ. ಈ ಚಲನಶೀಲತೆ ವಿದ್ಯಾರ್ಥಿ ಬದುಕಿನಲ್ಲೂ ಕಾಣಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಅಧಿಕಾರಿ ಜಿ.ಚಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ಎಸ್. ಎಲ್. ಶೇಖರಗೊಳ ಅತಿಥಿಗಳನ್ನು ಪರಿಚೆಸಿದರು. ಎಚ್.ಎಮ್. ಕಳಸಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಮ್. ಗುಗ್ಗರಿ ವಂದಿಸಿದರು.
ಈ ಸಂದರ್ಭದಲ್ಲಿ ಹೇಮಲಲಾ ಕರಿಗಾರ, ಲಕ್ಷ್ಮೀ ಮುಗಳಿ, ಭುವನಾ ಪೂಜಾರ, ಅಂಕಿತಾ ಕಲಾಲ, ಭಾರ್ಗವಿ ಬಿ. ಪಿ. ಸಂತೋಷ ಒಕ್ಕುಂದ, ಬಸಲಿಂಗಯ್ಯಾ ಕುಲಕರ್ಣಿ, ನಾಗರಾಜ ಇಟಗಿ, ಸಮೀನಾ ಶೇಖ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 