ವಚನ ಸಂಗೀತ ಸಂಜೆ ಕಾರ್ಯಕ್ರಮ

ಲೋಕದರ್ಶನ ವರದಿ

ಹಾವೇರಿ03 : ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಗಾಯಕರುಗಳಾದ ಹೂವಿನಹಡಗಲಿಯ ಪ್ರಕಾಶ ಜೈನ ಮತ್ತು ಬ್ಯಾಡಗಿಯ ಪ್ರಕಾಶ ಕೊರಮರವರುಗಳ ವಚನ ಸಂಗೀತ ಸಂಜೆ ಜರುಗಿತು.

  ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ರಾಜ್ಯ  ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಬಸವರಾಜ ಸಾದರ ಅವರು ಮನಸ್ಸನ್ನು ಶುದ್ಧಗೊಳಿಸುತ್ತ ವಿವೇಕ ಹೆಚ್ಚಿಸುವ ಶಕ್ತಿ ವಚನ ಸಂಗೀತಕ್ಕಿದೆ. ಮನಸ್ಸಿನ್ನೊಳೆಗೆ ನಡೆಯುವ ತುಮುಲಗಳಿಗೆ ವಚನಗಳು ಸರಿಯಾದ ಉತ್ತರ ಕೊಡಬಲ್ಲವು ಎಂದು ಹೇಳಿದರು. 

  ಮುಖ್ಯ ಅತಿಥಿಯಾಗಿ ಪದವಿ ಪೂರ್ವ ಕಾಲೇಜುಗಳ ಉಪನಿದರ್ೇಶಕರಾದ ಎಸ್ಸಿ ಪೀರಜಾದೆ ಅವರು ಮಾತನಾಡಿ  ತಪ್ಪಿಗೆ, ಶಿಕ್ಷೆಗಿಂತ ಪ್ರಾಯಶ್ಚಿತವೇ ಸಾಂತ್ವನ ಕೊಡಬಲ್ಲದು. ಶರಣರ ವಚನಗಳನ್ನು ಓದಿ ಅರಗಿಸಿಕೊಂಡವರು ತಪ್ಪುಗಳನ್ನು ಮಾಡುವುದು ಕಡಿಮೆ ಎಂದರು. 

 ವಚನ ಸಂಗೀತ ಸಂಜೆಯ ಅಧ್ಯಕ್ಷತೆಯನ್ನು ಕಾರಾಗೃಹದ ಅಧೀಕ್ಷಕರಾದ ಟಿ.ಬಿ ಭಜಂತ್ರಿಂ ವಹಿಸಿ,  ಸಾಂಸ್ಕೃತಿಕ ಚಟುವಟಿಕೆಗಳನ್ನು ತೋರಿಸುವ ಮತ್ತು ಆಲಿಸುವ ಮೂಲಕ ಸಾಧ್ಯವಾದಷ್ಟು ಒತ್ತಡದಲ್ಲಿರುವ ಬಂಧಿಗಳ ಮನಸ್ಸನ್ನು ತಿಳಿಗೊಳಿಸುವ ಪ್ರಯತ್ನ ವಚನ ಸಂಗೀತದಂತಹ ಕಾರ್ಯಕ್ರಮಗಳು ಮಾಡಬಲ್ಲವು ಎಂದರು. 

  ಡಾ. ಬಸವರಾಜ ಸಾದರವರನ್ನು ಈ ಸಂದರ್ಭದಲ್ಲಿ ಕಾರಾಗೃಹದ ಅಧಿಕರಿಗಳಾದ ಟಿ. ಬಿ ಭಜಂತ್ರಿಯವರು ಸನ್ಮಾನಿಸಿದರು.

 ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕ ಭಾಷಣ ಮಾಡಿದರು. ಈಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಶ್ರೀಮತಿ ದಾಕ್ಷಾಯಿಣಿ ಗಾಣಗೇರ, ಅಮೃತಕ್ಕ ಶೀಲವಂತರ, ಅಪಾಧ್ಯಕ್ಷರಾದ ಚಂದ್ರಶೇಖರ ಮಾಳಗಿ, ಕಾರ್ಯದಶರ್ಿ ಎಸ್. ಆರ್. ಹಿರೇಮಠ, ಕೃಷ್ಣಾ ಜವಳಿ, ಲಲಿತಕ್ಕಾ ಹೊರಡಿ, ಆರ್ ಎನ್ ಗುಡಿಮನಿ ಹಾಗೂ ರಾಜೇಶ್ವರಿ ಸಾರಂಗಮಠ ಇದ್ದರು.