ಸಂಘದ ಬೆಳವಣಿಗೆಗೆ ಒಗ್ಗಟ್ಟು ಮುಖ್ಯ: ನಾವದಗಿಶ್ರೀ
Unity is important for the growth of the association: Navadagisree
ಸಂಘದ ಬೆಳವಣಿಗೆಗೆ ಒಗ್ಗಟ್ಟು ಮುಖ್ಯ: ನಾವದಗಿಶ್ರೀ
ತಾಳಿಕೋಟಿ 24: ಸಂಘಗಳು ಬೆಳವಣಿಗೆಯಾಗಲು ಸಂಘದ ಸದಸ್ಯರ ಪರಸ್ಪರ ಸಹಕಾರ ಮತ್ತು ಒಗ್ಗಟ್ಟು ಅತಿ ಮುಖ್ಯವಾಗಿದೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಂಘಗಳು ಬೆಳವಣಿಗೆ ಹೊಂದುತ್ತವೆ ಎಂದು ನಾವದಗಿ ಬ್ರಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಹೇಳಿದರು.
ಮಂಗಳವಾರ ತಾಲೂಕಿನ ನಾವದಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 67ನೇ ವಾರ್ಷಿಕ ಮಹಾಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಹಕಾರಿ ಸಂಘಗಳು ಕೇವಲ ರೈತರ ಆರ್ಥಿಕ ಸಹಾಯಕ್ಕಾಗಿರುವ ಸಂಸ್ಥೆಗಳು ಅವರು ಇದರಿಂದ ಸಹಾಯವನ್ನು ಪಡೆದುಕೊಂಡು ಅದರ ಅಭಿವೃದ್ಧಿಗಾಗಿ ಸಹಕರಿಸಬೇಕು. ಈ ಸಂಘವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ ತಾಲೂಕಿನಲ್ಲಿಯೇ 7ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿರುವ ಆಡಳಿತ ಮಂಡಳಿಯ ಅಧ್ಯಕ್ಷರು ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದ ಕಳಕಳಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷರಾದ ಬಸನಗೌಡ ವಣಿಕ್ಯಾಳ ಮಾತನಾಡಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ನಮ್ಮ ಸಂಘವು ಈ ವರ್ಷದಲ್ಲಿ 3.65 ಲಕ್ಷ ಲಾಭವನ್ನು ಗಳಿಸಿದೆ. ಸಂಘದ ಆವರಣದಲ್ಲಿ ನಮ್ಮ ತಂದೆಯವರ ಸ್ಮರಣಾರ್ಥವಾಗಿ ಒಂದು ಸಭಾಂಗಣ ಹಾಗೂ ಐದು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಇದರಿಂದ ಬರುವ ಲಾಭವನ್ನೂ ಸಂಘಕ್ಕೆ ತೆಗೆದುಕೊಳ್ಳಲಾಗುತ್ತದೆ, ನಮ್ಮ ಸಂಘವು ತಾಲೂಕಿನಲ್ಲಿಯೇ 7ನೇ ಸ್ಥಾನದಲ್ಲಿದೆ ಇದಕ್ಕೆ ಕಾರಣ ನಿಮ್ಮೆಲ್ಲರ ಸಹಕಾರವಾಗಿದೆ. ಇದೀಗ ನಾವು ಸಂಘದಿಂದ ರೈತರಿಗೆ ಟ್ರ್ಯಕ್ಟರ್ ಸಾಲಗಳನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಕೊಡುತ್ತಿದ್ದೇವೆ ಇದರ ಸದುಪಯೋಗ ಮಾಡಿಕೊಳ್ಳಬೇಕು. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಮುಖ್ಯ ಕಾರ್ಯನಿರ್ವಣಾಧಿಕಾರಿ ಎಂ.ಪಿ.ದೊಡಮನಿ ವಾರ್ಷಿಕ ವರದಿ ವಾಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರಭುಗೌಡ ಕಾಟಮಳ್ಳಿ, ನಿರ್ದೇಶಕರಾದ ಪರ್ಪಗೌಡ ಪಾಟೀಲ, ನಿಂಗಣ್ಣ ಮಾಲಗತ್ತಿ, ಶಿವಲಿಂಗಯ್ಯ ಹಿರೇಮಠ, ಭೀಮನಗೌಡ ಸಲಗುಂದಿ, ಸಂಗನಗೌಡ ಇಬ್ರಾಹಿಂಪೂರ, ಮಲ್ಲಮ್ಮ ಪಾಟೀಲ, ದೇವಮ್ಮ ಸಂಕನಾಳ ಖಾದರಪಟೇಲ ನಾವದಗಿ, ಚಂದಪ್ಪ ಸಾಲವಾಡಗಿ, ಧರ್ಮಪ್ಪ ಮಾದರ, ವೃತ್ತಿಪರ ನಿರ್ದೇಶಕ ಚಂದ್ರಶೇಖರ ಮಕಾಶಿ, ಕ್ಷೇತ್ರಾಧಿಕಾರಿ ಎಸ್.ಬಿ.ಬಿರಾದಾರ, ಗುಂಡಕನಾಳ ಪಿಕೆಪಿಎಸ್ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ರಾಮಗಿರಿಮಠ, ಸಿಬ್ಬಂದಿ ವರ್ಗದ ಪಿ.ಬಿ.ಬಿರಾದಾರ, ಬಿ.ಸಿ. ನಂದಿಕೋಲ, ಎಂ.ಎಂ.ನಿಡುಗುಂದಿ ಹಾಗೂ ಸಂಘದ ಸದಸ್ಯರು ಇದ್ದರು. ಶಿಕ್ಷಕ ಅಶೋಕ ಪತ್ತಾರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 