ನೀರಿನ ಮಹತ್ವ ಅರಿತುಕೊಂಡು ಮಿತಿಯಿಂದ ಬಳಿಸಿ: ಮೋಳವಾಡ ಗ್ರಾಮಕ್ಕೆ ಭೇಟಿ ನೀಡಿದ ರವಿ ಬಂಗಾರಪನ್ನವರ ಕರೆ

ಕಾಗವಾಡ 15: ಕಳೆದ ಅನೇಕ ವರ್ಷಗಳ ಬಳಿಕ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದಲ್ಲಿಯ ಕುಸನಾಳ, ಮೋಳವಾಡ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಅಥಣಿ ಪೂರ್ವ ಭಾಗದ ಗ್ರಾಮಗಳಿಗೆ ಟ್ಯಾಂಕರ್ದಿಂದ ನೀರು ಪೂರೈಸಲಾಗುತ್ತಿತ್ತು. ಈಗ ನದಿ ತೀರದ ಗ್ರಾಮಗಳಿಗೆ ಈ ವ್ಯವಸ್ಥೆ ಒದಗಿಸಲಾಗುತ್ತಿದೆ. ನೀರಿನ ಸಮಸ್ಯೆ ಗಂಭೀರಗೊಳ್ಳುತ್ತಿದ್ದು, ಜನರು ನೀರಿನ ಮಹತ್ವ ಅರಿತುಕೊಂಡು ಮಿತಿಯಿಂದ ಬಳಿಸಬೇಕೆಂದು ಅಥಣಿ ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪನ್ನವರ ಮೋಳವಾಡದಲ್ಲಿ ಹೇಳಿದರು.

ಬುಧವಾರ ದಿ. 15ರಂದು ಕಾಗವಾಡ ತಾಲೂಕಿನ ಮೋಳವಾಡ ಗ್ರಾಮಕ್ಕೆ ಭೇಟಿನೀಡಿ, ಅಲ್ಲಿಯ ಜನರ ಕುಡಿಯುವ ನೀರಿನ ಸಮಸ್ಯೆ ಆಲಿಸಿ ಅವರು ಮಾತನಾಡಿದರು.

ಕಳೆದ ಎರಡು ತಿಂಗಳುಗಳಿಂದ ಕೃಷ್ಣಾ ನದಿ ಬತ್ತಿಹೋಗಿದ್ದು ಜನ-ಜಾನುವಾರಗಳಿಗೆ ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಮೇರಿಗೆ ತಾಲೂಕಿನ ದಂಡಾಧಿಕಾರಿಗಳು, ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಒಂದುಗೂಡಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಜಾನುವಾರಗಳು ವನಮೇವು ಸೇವಿಸುತ್ತಿದ್ದರಿಂದ ಮತ್ತು ಬೇಸಿಗೆಯಿರುವದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುತ್ತಿವೆ. ಇದರೊಂದಿಗೆ ಈವರೆಗೆ ಪ್ರತಿಯೊಬ್ಬ ನಾಗರಿಕರಿಗೆ 40 ಲೀಟರ್ ನೀಡುವ ಸಕರ್ಾರದ ಧೋರಣೆ ಈಗ ಮೀರುತ್ತಿದೆ ಎಂದು ಹೇಳಿ ಮೋಳವಾಡದಲ್ಲಿ ಹೊಸದಾಗಿ ಎರಡು ಕೊಳವೆಬಾವಿಗಳು, ನಾಲ್ಕು ಟ್ಯಾಂಕರ್ ನೀರಿನ ವ್ಯವಸ್ಥೆಗೆ ಮಂಜೂರಾತಿ ನೀಡಿದ್ದು ಜನರು ಸಹಕರಿಸಬೇಕೆಂದು ರವಿ ಬಂಗಾರಪನ್ನವರ ಹೇಳಿದರು.

ನಮ್ಮ ಇಡಿ ಜೀವನದಲ್ಲಿ ಮೋಳವಾಡ ಗ್ರಾಮಕ್ಕೆ ನೀರಿನ ಕೊರತೆ ಈ ರೀತಿ ಇರಲಿಲ್ಲಾ. ನದಿಗೆ ಸಾಕಷ್ಟು ನೀರು ಇರುತಿದ್ದರಿಂದ ಸಮಸ್ಯೆ ಬರಲಿಲ್ಲಾ. ಇಲ್ಲಿಗೆ ಬಾವಿ, ಕೊಳವೆಬಾವಿ ಅವಶ್ಯಕತೆಯೂ ಕೂಡಯಿರಲಿಲ್ಲಾ. ಆದರೆ, ನದಿ ಬತ್ತಿಹೋಗಿ ಎರಡು ತಿಂಗಳು ಗತಿಸಿದ್ದು ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಳ್ಳುತ್ತಿದೆ. ತಾಪಂ ಎಇಒ ಭೇಟಿನೀಡಿ, ನಮ್ಮ ಸಮಸ್ಯೆ ಈಡೇರಿಸಿದ್ದಾರೆ. ಈ ಬೇಸಿಗೆ ಎಲ್ಲರು ಒಂದುಗೂಡಿ ಸಮರ್ಥವಾಗಿ ಎದುರಿಸೋಣ ಎಂದು ಮೋಳವಾಡ-ಕುಸನಾಳ ಗ್ರಾಪಂ ಅಧ್ಯಕ್ಷ ಜೈಪಾಲ ಯರೆಂಡೊಲೆ ಹೇಳಿದರು.

ನೀರಿನ ಸಮಸ್ಯೆ ಬಗ್ಗೆ ಚಚರ್ಿಸಲು ಗ್ರಾಪಂ ಸದಸ್ಯರಾದ ಚಿದಾನಂದ ಅಥಣಿ, ಅಮೀತ ಪಾಟೀಲ, ಸಂಜಯ ಮಾಂಜರೆ, ರಾಜು ದುಗ್ಗೆ, ವಿವೇಕ ಬಿರಾದಾರ, ಬಾಳು ಪಾಟೀಲ, ವರ್ಧಮಾನ ಚೌಗಲಾ, ರಾಜು ಕಾಗವಾಡೆ, ರಾಜು ಕಾಂಬಳೆ, ಚಿದಾನಂದ ಸಂತೋಷ, ಸೇರಿದಂತೆ ಅನೇಕರು ಅಧಿಕಾರಿಗಳಿಗೆ ಮನವರಿಕೆ ಮಾಡುವಾಗ ನೀರಿಗಾಗಿ ಸಾಲಿನಲ್ಲಿಯಿಟ್ಟಿರುವ ಖಾಲಿ ಕೊಡಗಳ ಮಧ್ಯೆ ನಿಲ್ಲಿಸಿ, ಚಚರ್ಿಸಿದರು.

ಪಿಡಿಒ ಪ್ರೀಯಂಕಾ ಗುರವ್, ಕಾರ್ಯದಶರ್ಿ ವೆಂಕಟೇಶ ಕುಲಕಣರ್ಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.