ತಂಗಡಗಿ ಉಸ್ತುವಾರಿಯಲ್ಲಿ ವ್ಯಕ್ತಿಗತ ಕೆಲಸಕ್ಕಿಂತ ಸಾಮೂಹಿಕ ಅಭಿವೃದ್ಧಿ ಕಂಡ - ಶಿವರಾಜ
ಕೊಪ್ಪಳ 08: ಮಾರ್ಚ್ 8, ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಯವರ ಉಸ್ತುವಾರಿಯಲ್ಲಿ ವ್ಯಕ್ತಿಗತ ಕೆಲಸಕ್ಕಿಂತ ಸಾಮೂಹಿಕ ಅಭಿವೃದ್ಧಿ ಯತ್ತ ಕೊಪ್ಪಳ ಜಿಲ್ಲೆ ಸಾಗಿದೆ ಎಂದು ಹೇಳಬಹುದಾಗಿದೆ, ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರಕ್ಕೆ ಸೂಕ್ತವಾದ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಮತ್ತು ಪ್ರಯತ್ನ ನಿರಂತರವಾಗಿ ನಡೆಸಿದ್ದಾರೆ ,ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು, ಏನೇ ಸಮಸ್ಯೆಗಳು ಎದುರಾದರು ಅದಕ್ಕೆ ನೇರ ಸ್ಪಂದನೆ ನೀಡಿ ಅದರ ಇತ್ಯರ್ಥಕ್ಕಾಗಿ ಶ್ರಮಿಸುತ್ತಿದ್ದಾರೆ, ಜನರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾ ಸಂಬಂಧಿಸಿದ ಇಲಾಖಾಧಿಕಾರಿ ಗಳ ಮೇಲೆ ಹಿಡಿತ ಸಾಧಿಸುವಲ್ಲಿ ಮತ್ತು ಅವರಿಂದ ಜನರ ಕೆಲಸ ಕಾರ್ಯಗಳನ್ನು ಪೂರೈಕೆ ಮಾಡುವಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದು ಜನರ ವಲಯದಿಂದ ಕೇಳಿ ಬರುತ್ತಿವೆ,ಸಚಿವರಾದವರು ಅತಿ ಹೆಚ್ಚು ಸಮಯ ಬೆಂಗಳೂರಿನಲ್ಲಿ ಕಳೆಯುತ್ತಾರೆ.
ಆದರೆ ಇವರು ವಾರಕ್ಕೊಮ್ಮೆ ಒಂದಲ್ಲ ಒಂದು ರೀತಿಯ ಭೇಟಿ ,ಸಭೆ ಸಮಾರಂಭ, ಸಾರ್ವಜನಿಕರ ಕುಂದು ಕೊರತೆಗಳ ಆಹವಾಲು ,ಇತ್ಯಾದಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಸಾಮಾನ್ಯ ಜನರ ,ವಿಶೇಷವಾಗಿ ತೊಂದರೆ ಮತ್ತು ಸಮಸ್ಯೆಕ್ಕಿಡಾದ ಜನರ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನರ ,ಅದರಲ್ಲೂ ವಿಶೇಷವಾಗಿ ಸಾಮಾನ್ಯ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಶಿವರಾಜ್ ತಂಗಡಗಿ ಒಳ್ಳೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರೀತಿಯ ಸಚಿವರ ತಂಡದಲ್ಲಿ ಇವರು ಕೂಡ ಒಬ್ಬರು ಎಂದು ಹೇಳಬಹುದು , ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಲ್ಲಿ ಕೊಪ್ಪಳ ಜಿಲ್ಲೆಗೆ ಹೆಚ್ಚಿನ ಪಾಲು ದೊರಕಿದೆ ನೆನೆಗುದಿಗೆ ಬಿದ್ದಿರುವ ಬಹುತೇಕ ಜನಪರ ಅಗತ್ಯ ಅವಶ್ಯಕತೆಯುಳ್ಳ ಕಾಮಗಾರಿಗಳ ಬಗ್ಗೆ ವಿಶೇಷ ಅನುದಾನ ಮೀಸಲಿಡುವಲ್ಲಿ ಸಚಿವ ಶಿವರಾಜ್ ತಂಗಡಗಿ ಯಶಸ್ವಿಯಾಗಿದ್ದಾರೆ ,ಇದು ಕೂಡ ಉತ್ತಮ ಬೆಳವಣಿಗೆ ಎಂದು ಜನ ಮಾತನಾಡಕೊಳ್ಳುತ್ತಿದ್ದಾರೆ, ಒಟ್ಟಾರೆಯಾಗಿ ಕೊಪ್ಪಳ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡ ಇವರ ನೇತೃತ್ವದ ಆಡಳಿತದಲ್ಲಿ ವ್ಯಕ್ತಿಗತ ಕೆಲಸಕ್ಕಿಂತ ಸಾಮೂಹಿಕ ಅಭಿವೃದ್ಧಿ ಕಂಡ ಕೊಪ್ಪಳ ಜಿಲ್ಲೆ ಎಂದು ಹೇಳಬಹುದು ,ಹಂತ ಹಂತವಾಗಿ ಕೊಪ್ಪಳ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಇವರ ಅಧಿಕಾರ ಅವಧಿಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲಿ ಎಂದು ಪ್ರಜ್ಞಾವಂತ ಜನರ ಆಸೆ ಮತ್ತು ಅಂಬೋಣ ವಾಗಿದೆ.