ಅನಧಿಕೃತವಾದ ಮನೆಗಳ ವಿದ್ಯುತ್ ಸಂಪರ್ಕ ಕಡಿತ: ವಸ್ತುಗಳು ವಶ
Unauthorized power disconnection of houses: Items seized
ಸಿಂದಗಿ 06; ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ನಾಯಕ್ ಹಾಗೂ ಆಲಮೇಲ ಗ್ರಾಮೀಣ ಶಾಖೆಯ ಶಾಖಾಧಿಕಾರಿ ಎಚ್.ಎಂ. ಮುಲ್ಲಾರವರ ಆದೇಶದ ಮೇರೆಗೆ ರಾಂಪುರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮೇಲೆ ಬೆನಕೋಟಗಿ ಮತ್ತು ಬೆನಕೋಟಗಿ ತಾಂಡಾ ಗ್ರಾಮಗಳ ಮೇಲೆ ಅನಧಿಕೃತವಾದ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸಿ ಮನೆಯ ಸರ್ವಿಸ್ ವಯರ್, ನೀರಿನ ಮೋಟಾರ್, ಹಿಟರ್, ಗೃಹ ಬಳಕೆಯ ಇತ್ಯಾದಿ ವಸ್ತುಗಳು ವಶಪಡಿಸಿಕೊಂಡು ವಿದ್ಯುತ್ ಬಿಲ್ ಸಂದಾಯ ಮಾಡುವಂತೆ ಗ್ರಾಹಕರಿಗೆ ತಿಳಿಸಿದರು.
ಊರಿನಲ್ಲಿ ಲೈನ್ ಮ್ಯಾನ್ ಹೈದರ್ ಚಟ್ಟರಕಿ ಮಾತನಾಡಿ, ಪ್ರತಿಯೊಬ್ಬರು ಮನೆಯ ವಿದ್ಯುತ್ ಪರವಾನಿಕೆ ಪಡೆದುಕೊಂಡು ವಿದ್ಯುತ್ತನ್ನು ಉಪಯೋಗಿಸಬೇಕು ಯಾರೂ ಕೂಡ ಕಳ್ಳತನ ಮಾಡಬಾರದು ಕಳ್ಳತನ ಮಾಡಿದರೆ ದಂಡವಿರುತ್ತದೆ ಹಾಗೂ ಜೈಲು ವಾಸವಿರುತ್ತದೆ ಹೀಗಾಗಿ ಎಲ್ಲರೂ ಪರವಾನಿಗೆ ಪಡೆದುಕೊಂಡು ಬಳಕೆ ಮಾಡಬೇಕು ಊರಿನ ಎಲ್ಲಾ ವಿದ್ಯುತ್ ಗ್ರಾಹಕರಿಗೆ ತಿಳಿ ಹೇಳಿದರು ಈ ಕಾರ್ಯಚರಣೆಯಲ್ಲಿ ಆಲಮೇಲ ಶಾಖೆಯ ಲೈನ್ ಮ್ಯಾನ್ ರಾದ ಹೈದರ್ ಚಟ್ಟರಕಿ, ಎಂ.ಡಿ. ಪೂಜಾರಿ, ಜಿ.ಎಂ. ಶಿರೂರ್, ಚಂದ್ರು ಪೂಜಾರಿ, ಆಶಾದುಲ್ಲಾ ಕಮತಗಿ, ರಾಜು ಮೋರಟಗಿ, ಸದಾಶಿವು ದಳವಾಯಿ, ಸಂದೀಪ್ ದೊಡಮನಿ, ಕಾಶಿಮ್ ದೇವರಮನಿ ಈ ಎಲ್ಲಾ ಲೈನ್ ಮ್ಯಾನ್‌ಗಳು ಹಾಗೂ ಅಶೋಕ್ ಪೂಜಾರಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 