ಲಂಡನ್, ಜೂ 12: ಭಾರತೀಯ ಬ್ಯಾಂಕುಗಳಿಗೆ ವಂಚನೆವೆಸಗಿ ಇಂಗ್ಲೆಂಡ್ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಜಾಮೀನು ನೀಡಲು ಬುಧವಾರ ಯುಕೆ ಹೈಕೋರ್ಟ್ ನಿರಾಕರಿಸಿದೆ .
ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಸಾಕ್ಷಿಗಳಿಗೆ ಪ್ರಭಾವ ಬೀರುವ ಕುರಿತಂತೆ ಅರ್ಜಿದಾರರು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು, ಬಲವಾದ ಪುರಾವೆಗಳನ್ನು ನೀಡಿದ್ದಾರೆ. ಜಾಮೀನು ನೀಡಿದರೆ, ತನಿಖೆಗೆ ಹಸ್ತಕ್ಷೇಪ ಮತ್ತು ಅಡಚಣೆ ಉಂಟಾಗಬಹುದು ಎಂದು ನ್ಯಾಯಾಧೀಶರು ಬುಧವಾರ ಹೇಳಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ಗೆ ಸುಮಾರು 2 ಬಿಲಿಯನ್ ಡಾಲರ್ಗಳಷ್ಟು ಹಣವನ್ನು ವಂಚನೆ ಮಾಡಿದ ಮತ್ತು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಬ್ರಿಟನ್ನಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ಕೆಳ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ನೀರವ್ ಮೇಲ್ಮನವಿ ಸಲ್ಲಿಸಿದ್ದಾರೆ.