ಸಮಾಜೋದ್ಧಾರಕ್ಕೆ ಶ್ರಮಿಸಿದ ತ್ಯಾಗವೀರ ಶಿರಸಂಗಿ ಲಿಂಗರಾಜರು: ಪ್ರೊ.ಕೌಜಲಗಿ
ಲೋಕದರ್ಶನ ವರದಿ
ಹಾವೇರಿ 10: ಸಮಾಜ ಸೇವೆಯೇ ಪರಮ ಕರ್ತವ್ಯವೆಂದು ಪರಿಭಾವಿಸಿ ಸರ್ವಸ್ವವನ್ನೂ ಸಮಜಕ್ಕೋಸ್ಕರ ಧಾರೆ ಎರೆದ ಶಿರಸಂಗಿಯ ದೇಸಾಯಿ ಮನೆತನದ ಲಿಂಗರಾಜರು ಸಮಾಜೋದ್ಧಾರಕ್ಕಾಗಿ ಪರಿಶ್ರಮಿಸಿದ ತ್ಯಾಗವೀರರು ಎಂದು ಹುಬ್ಬಳ್ಳಿ ಕೆ.ಎಲ್.ಇ. ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಮಹಾವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಎಸ್. ಕೌಜಲಗಿ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಹಾವೇರಿ ಕೆ.ಎಲ್.ಇ. ಅಂಗಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ತ್ಯಾಗವೀರ ಶಿರಸಂಗಿ ಲಿಂಗರಾಜರ 158 ನೇ ಜಯಂತಿ ಸಮಾರಂಭ ಜರುಗಿತು.
ವ್ಯಕ್ತಿ ತಾನು ಬದುಕಿನಲ್ಲಿ ಒಂದು ಇತಿಹಾಸವಾದರೂ ಆಗಬೇಕು ಇಲ್ಲವೇ ಇತಿಹಾಸವನ್ನು ಸೃಷ್ಠಿಸಿ ತೆರಳಬೇಕು. ಅಂದಾಗ ವ್ಯಕ್ತಿತ್ವಕ್ಕೊಂದು ಘನತೆ ತುಂಬಿ ಬರುವುದು. ಒಂದು ಸಂಸ್ಥಾನದ ಪಾಳೇಗಾರರಾಗಿದ್ದರೂ ಸಹ ಶಿಕ್ಷಣ, ಸಂಸ್ಕೃತಿ, ಕೃಷಿ ಮತ್ತು ಸಾಮಾಜಿಕ ವಲಯಗಳು ಉನ್ನತಗೊಳ್ಳಲು ತನು, ಮನ, ಧನ ಸೇವೆಗಳನ್ನು ನೀಡಿ ಆದರ್ಶಯುತ ಬದುಕನ್ನು ಬಾಳಿ ಆದರ್ಶವಾದವರು ಶಿರಸಂಗಿ ಲಿಂಗರಾಜರು. ಅವರ ಜೀವನವೇ ಒಂದು ಹೋರಾಟವಾಗಿದ್ದಿತು. ಮುಳ್ಳಿನ ಹಾದಿಯಿಂದ ತುಂಬಿದ್ದ ಜೀವನವನ್ನು ಸುಗಮತೆಯ ದಾರಿಯಲ್ಲಿ ತಂದುಕೊಂಡು ಸರ್ವರಿಂದ ಮಾನ್ಯನಾಗಿ ವಿವೇಕ, ತ್ಯಾಗ, ಔದಾರ್ಯಗಳ ಮೂಲಕ ಸಮಾಜಿಕರಿಗೊಂದು ವಿಶೇಷ ಕೊಡುಗೆ ಕೊಟ್ಟ ಮಹಾನ್ ಚೇತನ ಲಿಂಗರಾಜರು. ಅವರು ಯೋಚಿಸಿ, ಯೋಜಿಸಿದ ಕಾರ್ಯಗಳು ಇಂದಿಗೂ ಇತಿಹಾಸವಾಗುಳಿದು ಅಚ್ಚಳಿಯದ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ. ಕೆ.ಎಲ್.ಇ. ಸಂಸ್ಥೆಯ ಕಾರ್ಯಕ್ಕೂ ಸೇವೆ ಸಲ್ಲಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಒಂದು ಸಂಸ್ಥಾನದ ಒಡೆಯರಾಗಿದ್ದುಕೊಂಡು ಎಲ್ಲ ವರ್ಗದ ಜನರ ಮನಸ್ಸು ಗೆದ್ದ ಘನ ವ್ಯಕ್ತಿತ್ವ ಶಿರಸಂಗಿ ಲಿಂಗರಾಜರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ಮಾತನಾಡಿ ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದ ಶಿರಸಂಗಿ ಲಿಂಗರಾಜರು ತಮ್ಮ ಸಂಸ್ಥಾನವನ್ನು ನೋಡಿಕೊಳ್ಳುವಲ್ಲಿ ಪಟ್ಟ ಶ್ರಮ, ಕಷ್ಟದ ಸಂದರ್ಭಗಳು ಅನೇಕ. ಏನೆಲ್ಲ ತೊಂದರೆಗಳು ಇದ್ದರೂ ಸಮಾಜವನ್ನು ಸಂಘಟಿಸಿ ಅಕ್ಷರಸ್ಥರನ್ನು ಬೆಳೆಸಬೇಕೆಂಬ ಹಂಬಲ, ಅವರಲ್ಲಿನ ಸೇವಾಭಾವ ಕಾರ್ಯ ವಿಶಾಲತೆಯನ್ನು ತಿಳಿಸುತ್ತದೆ. ಅವರು ತಮ್ಮ ಮರಣದವರೆಗೂ ಮಾಡಿದ ಉತ್ತಮ ಕಾರ್ಯಗಳೇ ನಮ್ಮಗಳಿಗೆಲ್ಲ ಆದರ್ಶ ದಾರಿಗಳಾಗಿವೆ ಎಂದರು. ವಿಶೇಷ ಆಹ್ವಾನಿತರಾಗಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ. ಡಿ. ಶಿರೂರ ಲಿಂಗರಾಜರ ಬದುಕು-ಬವಣೆಗಳನ್ನು ವಿವರಿಸಿದರು.
ವೇದಿಕೆಯ ಮೇಲೆ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ನ ಪ್ರಾಚಾರ್ಯ ಪ್ರೊ. ಬಿ. ಚನ್ನಪ್ಪ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾಯರ್ೆ ರಾಣಿ ಯೋಹಾನನ್, ಸ್ಥಾನಿಕ ಮಂಡಳಿ ಸದಸ್ಯರಾದ ಸಿ. ಬಿ. ಹಿರೇಮಠ, ಎಸ್. ಜೆ. ಹೆರೂರ, ಬಸವರಾಜ ಮಾಸೂರ, ಜೆ. ಎಸ್. ಅರಣಿ, ಎಸ್. ಎಮ್. ಹುರಳಿಕುಪ್ಪಿ ಉಪಸ್ಥಿತರಿದ್ದರು.
ಆರಂಭದಲ್ಲಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು. ಪದವಿ ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಸ್ವಾಗತಿಸಿದರು. ಪ್ರೊ. ಡಿ. ಎ. ಕೊಲ್ಲಾಪುರೆ ಪರಿಚಯಿಸಿದರು. ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ನಿರೂಪಿಸಿದರು. ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ ವಂದಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 