ಲೋಕ ಅದಾಲತ್ ನಲ್ಲಿ ಒಂದಾದ ಎರಡು ಜೋಡಿಗಳು
Two couples united in Lok Adalat
ಲೋಕ ಅದಾಲತ್ ನಲ್ಲಿ ಒಂದಾದ ಎರಡು ಜೋಡಿಗಳು
ಹೂವಿನಹಡಗಲಿ 14: ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಡಗಲಿಯ ಜೆ.ಎಂ.ಎಫ್. ಸಿ. ನ್ಯಾಯಾಲದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಬಾಕಿ ಉಳಿದಿದ್ದ 535 ಪ್ರಕರಣಗಳಲ್ಲಿ 529 ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಹಾಗೂ 55 ಲಕ್ಷ ಪರಿಹಾರ ರಾಜಿ ಮೂಲಕ ಮುಕ್ತಾಯ ವಾಯಿತು.ವಿವಾಹ ವಿಚ್ಚೇದನ ಮತ್ತು ಜೀವನಾಂಶ ಕೋರಿ ಹೂವಿನಹಡಗಲಿ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಬಸಮ್ಮ ಗಂಡ ಶಾಂತಕುಮಾರ ಅರ್ಜಿ ಸಲ್ಲಿಸಿ ನ್ಯಾಯಾಲಯ ಕ್ಕೆ ಅಲೆದಾಡುತ್ತಿದ್ದ ಗಂಡ ಹೆಂಡತಿಯನ್ನು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಮರು ಹೊಂದಾಣಿಕೆ ಮಾಡಿ ಒಂದು ಗೂಡಿಸಲಾಯಿತು.ಇದೇ ವೇಳೆ ಇನ್ನೊಂದು ಜೋಡಿ ಪಿಂಜಾರ ಫರ್ಜಾನ ಮೈಲಾರ ಗಂಡ ಪಿಂಜಾರ ಸುಭಾನ ಸಾಬ್ ಕೊಳಚಿ ಜೀವನಾಂಶಕ್ಕೆ 2021ರಲ್ಲಿ ಅರ್ಜಿ ಸಲ್ಲಿಸಿದರು. ವಕೀಲರಾದ ಶಾನುಬೊಗರ ಸುಧಾಕರ.ಅಂಬುಜಾ ಮತ್ತು ಎದುರದಾರ ವಕಿಲರಾದ ಹೆಚ್.ಎಸ್.ಛಬ್ಬಿ.ಹನುಮಂತಪ್ಪ ವಾದ ಮಂಡಿಸಿದ್ದರು. ನ್ಯಾಯಾಧೀಶರು ರ ಸಮ್ಮುಖದಲ್ಲಿ ಒಟ್ಟಿಗೆ ಬಾಳುವಂತೆ ಬುದ್ದಿ ಹೇಳಿ ರಾಜಿ ಮೂಲಕ ಗಂಡ ಹೆಂಡತಿ ಯನ್ನು ಒಂದು ಮಾಡಲಾಯಿತು. ವಕೀಲರಾದ ಅರಣಿ ರುದ್ರಜ್ಜ , ಹೆಚ್. ನಾಗೇಶ ವಾದ ಮಂಡಿಸಿ ಪರಸ್ಪರ ರಾಜೀ ಮಾಡಿದರು. ಮತ್ತೊಂದು ಪ್ರಕರಣದಲ್ಲಿ ಪಿಂಜಾರ ಫರ್ಜಾನ ಮೈಲಾರ ಗಂಡ ಪಿಂಜಾರ ಸುಭಾನ್ ಸಾಬ್ ಕೊಳಚಿ ಜೀವನಾಠಕ್ಕಾಗಿ 2021 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಇವರಿಗೆ ಪರಾಸ್ ಎಂಬ 8 ನೇ ತರಗತಿ ಓದುವ ಮಗನಿದ್ದಾನೆ. ಅರ್ಜಿದಾರರ ಪರ ಶ್ರೀ ಸುಧಾಕರ್ ಶಾನಭೋಗ್ ವಕೀಲರು ಮತ್ತು ಅಂಬುಜಾ ವಕೀಲರು ಎದುರುದಾರರ ಪರ ಶ್ರೀ ಎಸ್. ಹೆಚ್. ಛಬ್ಬಿ ವಕೀಲರು, ಹನುಮಂತಪ್ಪ ವಕೀಲರು ವಾದ ಮಂಡಿಸಿದ್ದರು. ಶನಿವಾರ ನಡೆದ ಲೋಕ ನ್ಯಾಯಾಧೀಶರಾದ ಶ್ರೀಮತಿ ಅಕ್ಷತಾ ಟಿ . ಹಿರಿಯ ವಕೀಲರಾದ ಯಂ. ಪರಮೆಶ್ವರ್ಪ,ವಸಂತಕುಮಾರ್, ಜ್ಯೋತಿಮಲ್ಲಣ್ಣ, ಎಸ್. ಹೆಚ್. ಛಬ್ಬಿ, ಸುಧಾಕರ್ ಶಾನಭೋಗ್ ಇದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 