ಬ್ರೈಟ್‌ವೇ ಶಾಲೆಯಿಂದ 200 ಆಡಿಗಳ ತ್ರಿವರ್ಣ ಧ್ವಜದ ಮೆರವಣಿಗೆ
Tricolor flag parade of 200 Audis from Brightway School
ಕಂಪಿ 27: ಪಟ್ಟಣದ ನಿವೇದಿತ ಶಿಕ್ಷಣ ಸಂಸ್ಥೆಯ ಬ್ರೈಟ್‌ವೇ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜರೋಹಣ ನೆರವೇರಿಸಿದರಲ್ಲದೆ, ವೈದ್ಯಕೀಯ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಸನ್ಮಾನಿಸಿದ್ದಲ್ಲದೆ, ಪಟ್ಟಣದ ಪ್ರಮುಖ ಬೀದಿಯಲ್ಲಿ 200 ಅಡಿಗಳ ಬೃಹತ್ ತ್ರಿವರ್ಣ ಧ್ವಜವನ್ನು ಮೆರವಣಿಗೆ ಮಾಡಿದರು.ಪಟ್ಟಣದ ಬ್ರೈಟ್‌ವೇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು. ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್ ಸೇರಿದಂತೆ ವಿವಿದ ವೈದ್ಯಕೀಯ ಸೀಟುಗಳನ್ನು ಹಲವಾರು ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜಾರೋಹಣವನ್ನು ನೇರವೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಗೌರವವನ್ನು ಸಲ್ಲಿಸಿದ್ದು ವಿಶೇಷವಾಗಿತ್ತು.ಪಟ್ಟಣದ ಪ್ರಮುಖ ಬೀದಿಯಲ್ಲಿ ಸುಮಾರು 200 ಅಡಿಗಳಷ್ಟು ಬೃಹತ್ ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳು ತಮ್ಮ ಭುಜದ ಮೇಲೆ ಹೊತ್ತು ಪಟ್ಟಣದ ಶ್ರೀ ಉದ್ಬವ ಮಹಾಗಣಪತಿ ದೇವಸ್ಥಾನದಿಂದ ಕುರುಗೋಡು ರಸ್ತೆಯಲ್ಲಿರುವ ಬ್ರೈಟ್ ವೇ ಶಾಲೆಯವರೆಗೂ ಜಾನಪದ ಕಲಾತಂಡಗಳೊಂದಿಗೆ ಅದ್ದುರಿಮೆರವಣಿಗೆ ನಡೆಸಿದರು.
ನಂತರ ನಡೆದ ಸಮಾರಂಭದಲ್ಲಿ ತಮ್ಮ ಶಾಲೆಯಲ್ಲಿ ಹತ್ತನೇ ತರಗತಿರೆಗೆ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಸೀಟುಗಳನ್ನು ಪಡೆದ ಹಲವಾರು ವಿದ್ಯಾರ್ಥಿಗಳನ್ನು ಮತ್ತು ಆವರ ಪಾಲಕರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಯು.ವಿನುತಾ ಶಿವರಾಜ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಯು.ಶಿವರಾಜ, ಮುಖ್ಯ ಗುರುಗಳಾದ ಕೆ.ಚಂದ್ರಶೇಖರ್, ಸಹ ಶಿಕ್ಷಕರಾದ ಮಹಮದ್ ಷರೀಫ್ ಕಲಂದರ್, ಭವ್ಯ, ಭಾಗ್ಯ, ರಜನಿ, ಪ್ರಿಯಾಂಕ್, ಭುವನೇಶ್ವರಿ, ಶ್ರೀಲತಾ, ವಿದ್ಯಾರ್ಥಿಗಳ ಪಾಲಕರಾದ ಡಾ.ಮಂಜುನಾಥ್, ಅಶೋಕ ಹಂದ್ರಾಳ್, ವಿರೇಶ್, ನಾಗರಾಜ, ಎಸ್.ಎಸ್. ಅಜ್ಜಪ್ಪ, ವಿಶ್ವನಾಥ್, ಶ್ರೀಧರ ಶೆಟ್ಟಿ, ಅನುಪಮಾ, ಸ್ಮಿತಾ, ವೈದ್ಯಕೀಯ ವಿದ್ಯಾರ್ಥಿಗಳಾದ ತನು, ಶ್ರಾವಣಿ, ಸಂಜನಾ, ಮನೋಜ, ಪ್ರೀತಮ್, ಸಾನಿಕ, ಜ್ಯೋತಿ, ಉಗಾದಿ ವೈಶಾಕ್, ಗುಂಡಿಧೀರಜ್ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 