ಜನಪ್ರಿಯ ಮಾಜೀ ನಗರಸಭೆ ಸದಸ್ಯರಾದ ಗಿರಿಧರಸಿಂಗ್ ಬ್ಯಾಳಿಯವರ ಜನ್ಮ ದಿನಾಚರಣೆಯ ಅಂಗವಾಗಿ ಸನ್ಮಾನ
Tributes paid to popular former municipal council member Giridhar Singh Bayli on his birth annivers
ಜನಪ್ರಿಯ ಮಾಜೀ ನಗರಸಭೆ ಸದಸ್ಯರಾದ ಗಿರಿಧರಸಿಂಗ್ ಬ್ಯಾಳಿಯವರ ಜನ್ಮ ದಿನಾಚರಣೆಯ ಅಂಗವಾಗಿ ಸನ್ಮಾನ
ಬೆಟಗೇರಿ 3:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ಬೆಟಗೇರಿ ಭಾಗದಲ್ಲಿರುವ 3 ನೇ ವಾರ್ಡಿನ ಜನಪ್ರಿಯ ಮಾಜೀ ನಗರಸಭಾ ಸದಸ್ಯರು ಹಾಗೂ ಕಾಂಗ್ರೇಸ್ ಮುಖಂಡರಾದ ಗಿರಿಧರಸಿಂಗ್ ಬ್ಯಾಳಿ ಯವರ 69 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೆಟಗೇರಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಗದಗ ಶಹರ ಕಾಂಗ್ರೇಸ್ ಸಮಿತಿಯ ತಂಡದ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಅವರ ಜನ್ಮ ದಿನಾಚರಣೆಯ ಶುಭಹಾರೈಸಲಾಯಿತು. ವಿಶೇಷವಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ.ಎಚ್.ಕೆ.ಪಾಟೀಲ ಸಾಹೇಬರು ದೂರವಾಣಿ ಮೂಲಕ ಶ್ರೀಯುತ ಗಿರಿಧರಸಿಂಗ್ ಬ್ಯಾಳಿಯವರಿಗೆ ಜನ್ಮ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿರುವದು ಅವಿಸ್ಮರಣೀಯವಾಗಿದೆ ಈ ಸಂಧರ್ಭದಲ್ಲಿ ಗದಗ ಬೆಟಗೇರಿ ನಗರಸಭೆಯ ಮಾಜೀ ಅಧ್ಯಕ್ಷರು ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ಹನಮಂತಪ್ಪ ಗರಗ, ಪ್ರಕಾಶ ಬೊಮ್ಮನಹಳ್ಳಿ, ಕಾಂಗ್ರೇಸ್ ಮುಖಂಡರು ಹಾಗೂ ಹಿರಿಯ ದರ್ಜೆಯ ಗುತ್ತಿಗೆದಾರರಾದ ಆಂಜನೇಯ ಕಟಗಿ, ಶಾಂತಣ್ಣ ಮುಳವಾಡ, ಉದಯಸಿಂಗ್ ಬ್ಯಾಳಿ, ಅರವಿಂದ್ ಸಿಂಗ್ ಬ್ಯಾಳಿ, ಕರಮುಡಿ ಸರ್, ಚಿನ್ನು ಕಟಗಿ, ಚಾಂದಸಾಬ್ ಕೊಟ್ಟೂರ್, ಬಸವರಾಜ ಗೌರಿಗುಡಿ, ಮತ್ತು ಗದಗ ಬೆಟಗೇರಿ ನಗರಸಭೆಯ ಮಾಜೀ ಅಧ್ಯಕ್ಷರು ಹಾಗೂ ಗದಗ ಶಹರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರು ಮತ್ತು ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿ, ನಗರಸಭೆ ಸದಸ್ಯರಾದ ಜನಾಬ್ ಬರಕತ್ ಅಲಿ ಮುಲ್ಲಾ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 