ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ರವರ68 ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಗೌರವ ಸಮರೆ​‍್ಣ

Tribute to Dr. B.R. Ambedkar on 68th Maha Parinirvana Day at Dimhans Institute

ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ರವರ68 ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಗೌರವ ಸಮರೆ​‍್ಣ

ಧಾರವಾಡ 07: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ಡಿಮ್ಹಾನ್ಸ್‌) ಸಭಾಂಗಣದಲ್ಲಿ ಬಾಬಾ ಸಾಹೇಬ ಡಾ.ಬಿ.ಆರ್‌.ಅಂಬೇಡ್ಕರ ಅವರ 68ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕ ಡಾ.ಅರುಣಕುಮಾರ ಸಿ ಅವರು ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರವರ ತತ್ವ, ಆದರ್ಶಗಳನ್ನು ನಾವೇಲ್ಲರೂ ಅಳವಡಿಸಿಕೊಳ್ಳೋಣ ಮತ್ತು ಅವರ ಚಿಂತನಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆಯೆಂದರು.  ಪ್ರತಿ ವ್ಯಕ್ತಿಗೂ ಕೂಡ ಸಮಾನತೆ, ಶಿಕ್ಷಣ ಸಿಗಬೇಕೆನ್ನುವುದು ಅವರ ಕನಸಾಗಿತ್ತು. ಶಿಕ್ಷಣದಿಂದಲೇ ಪ್ರಗತಿ ಸಾದ್ಯವೆಂದು ನಂಬಿದ್ದರು. ಸಂವಿಧಾನದಿಂದಲೇ ಜನರಿಗೆ ಸಿಗಬೇಕಾದ ಸಮಾನವಾದ ಹಕ್ಕುಗಳು ಹಾಗೂ ನ್ಯಾಯವನ್ನು ಒದಗಿಸಲು ತೋರಿಸಿದ್ದಾರೆ. ಇವರ ಸಾಧನೆಗಳು ನಮಗೆ ದಾರಿಯನ್ನು ತೋರಿಸುತ್ತದೆ.ಡಾ.ಬಿ.ಆರ್‌.ಅಂಬೇಡ್ಕರ್‌ರವರು ಆರ್ಥಿಕ ತಜ್ಞರಾಗಿದ್ದು, ಭಾರತದಲ್ಲಿ ಆರ್ಥಿಕ ಭದ್ರತೆಗೆ ಬುನಾದಿಯನ್ನು ಹಾಕಿದ್ದರು. ಕಾನೂನು ತಜ್ಞರಾಗಿದ್ದು, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಹಕ್ಕುಗಳನ್ನು ಒದಗಿಸಲು ಶ್ರಮಿಸಿದರು. ಸಮಾನತೆಯ ಸಮಾಜ, ಬಡತನ ಮುಕ್ತ ಸಮಾಜ, ನ್ಯಾಯಯುತ ಪ್ರಜಾಪ್ರಭುತ್ವ ಇವರ ಕನಸುಗಳಾಗಿದ್ದವು. ಈ ಕನಸುಗಳನ್ನು ನನಸು ಮಾಡಲು ಇವರು ಶ್ರಮಿಸಿದ್ದಾರೆ. ದೀನ ದಲಿತರು, ಹಿಂದುಳಿದವರು, ಶೋಷಿತ ವರ್ಗದವರನ್ನು ಉದ್ದಾರ ಮಾಡಿದ ಮಹಾನುಭವ ಡಾ.ಬಿ.ಆರ್‌.ಅಂಬೇಡ್ಕರ್‌. ಮೇಲು ಕೀಳು, ಬಡವ ಬಲ್ಲಿದ, ಶ್ರೇಷ್ಠ ಕನಿಷ್ಠ, ಎಂಬ ತಾರಮತ್ಯವನ್ನು ದೂರ ಮಾಡಲು ತಮ್ಮ ಇಡೀ ಜೀವನವನ್ನು ಸವೆಸಿದ್ದರು.ಇವರು ಒಬ್ಬ ಅರ್ಥಶಾಸ್ತ್ರಜ್ಞರಾಗಿ, ನ್ಯಾಯ ಶಾಸ್ತ್ರಜ್ಞರಾಗಿ, ಪರ್ತಕರ್ತರಾಗಿ, ಸಾಹಿತಿಗಳಾಗಿ, ಸಮಾಜ ಸುಧಾರಕರಾಗಿ, ಕಾನೂನು ತಜ್ಞರಾಗಿ ಮತ್ತು ಸಂವಿಧಾನ ಶಿಲ್ಪಿಗಳಾಗಿ ಭಾರತಕ್ಕೆ ನೀಡಿದ ಕೊಡುಗೆ ಅಪಾರ, ಇವರ ವಿದ್ವತ್ತಿಗೆ ಅಂದಿನ ದಿನಗಳಲ್ಲಿ ವಿದೇಶದಲ್ಲಿ ಡಾಕ್ಟರೇಟ್ ಪದವಿಯನ್ನು ಇವರಿಗೆ ನೀಡಿದ್ದರ ಬಗ್ಗೆ ತಿಳಿಸಿದರು. ಮಹಾ ಪರಿನಿರ್ವಾಣದ ದಿನದಂದು ನಾವು ಅವರ ಆದರ್ಶಗಳನ್ನು ಪಾಲಿಸುವುದು ಅವರಿಗೆ ನಿಡುವ ಬಹು ಮುಖ್ಯ ಗೌರವವಾಗಿದೆ. ಇವರ ಚಿಂತನೆಗಳು ಯಾವಾಗಲೂ ಜೀವಂತ ಮತ್ತು ಮರೆಯಲಾಗದಂತಹವು ಆಗಿವೆ. ಇವರು ನೀಡಿದ ಮುಖ್ಯ ವಿಚಾರ ನಾವೆಲ್ಲರೂ ಮೊದಲು ಮಾನವರಾಗೋಣ ನಂತರ ಜಾತಿಯ ಬಗ್ಗೆ ವಿಚಾರ ಮಾಡೋಣ ಎನ್ನುವದಾಗಿದೆ.ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್‌ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಮೇಜರ್ ಸಿದ್ದಲಿಂಗಯ್ಯ ಹಿರೆಮಠರವರು ಮಾತನಾಡಿ ಮಹಾನ್ ಮಾನವತಾವಾದಿ ಡಾ.ಬಿ.ಆರ್‌.ಅಂಬೇಡ್ಕರರವರು ಸಮಾಜಕ್ಕೆ ನೀಡಿದ ಕೊಡುಗೆಗಳು ಮತ್ತು ಅವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಸಿದರು.  

ಬಡವರಿಗೆ, ಹಿಂದುಳಿದ ವರ್ಗದವರಿಗೆ, ಕೆಳ ವರ್ಗದವರಿಗೆ, ಸಮಾಜದ ಮುಖ್ಯ ವಾಹಿನಿಯಲ್ಲಿ ಹಿಂದುಳಿದವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹೋರಾಟ ಮಾಡಿ ನ್ಯಾಯವನ್ನು ಒದಗಿಸುವಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ರವರು ಬಹಳಷ್ಟು  ಶ್ರಮಿಸಿದ್ದಾರೆ ಎಂದು ತಿಳಿಸಿದರು. ಶಿಕ್ಷಣವನ್ನು ಪಡೆಯಲು ಅವರ ಪಟ್ಟ ಕಷ್ಟ ಯಾರಿಗೂ ಬರಬಾರದೆಂದರು. ಹಾಗಾಗಿ ಅಂತಹ ದಿನಗಳಲ್ಲಿ ಅವರು ಶಿಕ್ಷಣವನ್ನು ಪಡೆಯಲು ಅವರು ಶ್ರಮಿಸಿದ್ದು ಬಹಳ. ವಿದೇಶದಲ್ಲಿ ವ್ಯಾಸಂಗವನ್ನು ಮಾಡಿ ಭಾರತಕ್ಕೆ ಬಂದು ಇವರು ಜನರಿಗೆ ನೀಡಿದ ಕೊಡುಗೆಗಳಲ್ಲಿ ಮಹತ್ವದ್ದು ಭಾರತದ ಸಂವಿಧಾನ. ವಿಶ್ವದಲ್ಲಿ ಅತ್ಯಂತ ವಿಸ್ತೃತ ಭಾರತದ ಸಂವಿಧಾನವನ್ನು ನಮಗೆ ನೀಡುವಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ರವರ ಪರಿಶ್ರಮ ಮತ್ತು ಅವರ ಅಗಾಧವಾದ ಜ್ಞಾನವನ್ನು ಜನರು ಎಂದಿಗೂ ಮರೆಯುವುದಿಲ್ಲ ವೆಂದು ಮಾತನಾಡಿದರು. ಇಡೀ ವಿಶ್ವವೇ ಡಾ.ಬಿ.ಆರ್‌.ಅಂಬೇಡ್ಕರ್‌ರವರ ಜ್ಞಾನಕ್ಕೆ ತಲೆ ಬಾಗಿದೆ ಮತ್ತು ಗೌರವಿಸಿದೆಯೆಂದರು. ಇವರ ಆದರ್ಶಗಳು ಮತ್ತು ತತ್ವಗಳು ಜನರಿಗೆ ಸರಿಯಾದ ದಿಕ್ಕನ್ನು ತೋರಿಸುವಂತದ್ದಾಗಿದೆಯೆಂದರು.ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್‌ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಗಳಾದ ವಿಜಯಲಕ್ಷ್ಮೀ ತೊರಗಲ್ ಮಠ, ಶೂಶ್ರುಷಾಧೀಕ್ಷಕರಾದ ಲವ್ಲಿ ಮ್ಯಾಥೂಸ್‌ರವರು ವೇದಿಕೆಯ ಮೇಲೆ ಉಪಸ್ಥಿತಿರಿದ್ದರು.ಡಿಮ್ಹಾನ್ಸ್‌ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮಂಜುನಾಥ ಭಜಂತ್ರಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಮೇಘಮಾಲಾ ತಾವರಗಿ, ಸೈಕಿಯಾಟ್ರಿಕ್ ನಸಿಂಗ್ ವಿಭಾಗದ ಉಪನ್ಯಾಸಕರಾದ ಡಾ.ಸುಶೀಲ್‌ಕುಮಾರ ರೋಣದ, ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತರಾದ ಆರ್‌.ಎಮ್‌.ತಿಮ್ಮಾಪೂರ, ಸಿಬ್ಬಂದಿಗಳಾದ ಉಮೇಶ ನೀಲಣ್ಣವರ, ಪ್ರಕಾಶ ತಳವಾರ, ಕೃಷ್ಣ ಕದಂ, ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳು, ನರ್ಸಿಂಗ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಶೋಕ ಕೋರಿ ನಿರೂಪಿಸಿದರು.