ವಸತಿ ನಿಲಯದ ವಿದ್ಯಾರ್ಥಿಗಳನ್ನು ಮನೆ ಮಕ್ಕಳಂತೆ ಕಾಣಿ: ಕುಲಕರ್ಣಿ

Treat hostel students as house children: Kulkarni

ವಸತಿ ನಿಲಯದ ವಿದ್ಯಾರ್ಥಿಗಳನ್ನು ಮನೆ ಮಕ್ಕಳಂತೆ ಕಾಣಿ: ಕುಲಕರ್ಣಿ  

ಸಂಬರಗಿ 06: ವಿದ್ಯಾರ್ಥಿ ಹಾಗೂ ವಸತಿ ನಿಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಇವರ ಸಂಬಂಧ ಒಳ್ಳೆಯದಾಗಿರಬೇಕು. ತಮ್ಮ ಮನೆ ಮಕ್ಕಳನ್ನು ಹೇಗೆ ರಕ್ಷಣೆ ಮಾಡುತ್ತೀರಿ ಆ ಪ್ರಕಾರ ವಸತಿ ನಿಲಯದ ಮಕ್ಕಳನ್ನು ರಕ್ಷಣೆ ಮಾಡುವ ಜವಾಜ್ದಾರಿ ಅಲ್ಲಿ ಕೆಲಸ ಮಾಡುವ ಮೇಲ್ವಿಚಾರಕರ ಹಾಗೂ ಅಡುಗೆ ಸಿಬ್ಬಂದಿಯವರ ಜವಾಬ್ದಾರಿ ಇದೆ ಎಂದು ಅಲ್ಪ ಸಂಖ್ಯಾತರ ವಸತಿ ನಿಲಯ ತಾಲೂಕಾ ಅಧಿಕಾರಿ ವೆಂಕಟೇಶ ಕುಲಕರ್ಣಿ ಸಲಹೆ ನೀಡಿದರು.  

ವಿಜಯಪೂರ ರಸ್ತೆಯ ಬದಿಗಿರುವ ಶಿವಯೋಗಿ ನಗರ ವಸತಿ ನಿಲಯದಲ್ಲಿ ಅಥಣಿ ತಾಲೂಕಾ ಮಟ್ಟದ ಮೇಲ್ವಿಚಾರಕರು ಹಾಗೂ ಅಡುಗೆ ಸಿಬ್ಬಂದಿ ಇವರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ವಸತಿ ನಿಲಯದಲ್ಲಿ ಇರುವ ಮಕ್ಕಳ ಕಡೆಗೆ ಗಮನ ಹರಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಇದೆ. ವಸತಿ ನಿಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಭವಿಷ್ಯದಲ್ಲಿ ಯಾವ ಹುದ್ದೆಗೆ ಹೋಗುತ್ತಾರೆ. ವಸತಿ ನಿಲಯದಲ್ಲಿ ಕೆಲಸ ಮಾಡುವ ಮೇಲ್ವಿಚಾರಕರು ನೆನಪು ತೆಗೆದು ಕಣ್ಣಿರು ಚಲ್ಲುವ ಪರಿಸ್ಥಿತಿ ಬರುತ್ತದೆ. ಆ ಕಾರಣ ವಿದ್ಯಾರ್ಥಿಗಳಿಗೆ ಒಳ್ಳೆ ಶಿಕ್ಷಣ, ಪಾಠ ನೀಡುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ಸ್ಪಷ್ಟಪಡಿಸಿದರು. 

ಅಥಣಿ ತಾಲೂಕಾ ಆರೋಗ್ಯ ಶಿಕ್ಷಣ ಅಧಿಕಾರಿ ಎ.ಬಿ.ಗುಳೆಗಾರ ವಸತಿ ನಿಲಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಒಲವು ಕೊಡಬೇಕು. ಮೇಲಿಂದ ಮೇಲೆ ತಮ್ಮ ಆರೋಗ್ಯದ ಕುರಿತು ಪರೀಶೀಲನೆ ಮಾಡಿ ಯಾವುದೇ ಸಮಸ್ಯೆ ಇದ್ದರೆ ತಮ್ಮ ಮೇಲ್ವಿಚಾರಕರ ಗಮನಕ್ಕೆ ತರಬೇಕು ಎಂದು ಹೇಳದರು.  

ಅಗ್ನಿಶಾಮಕ ಠಾಣಾ ಅಧಿಕಾರಿ ಅನಿಲ ಬಡಚಿ ಮಾತನಾಡಿ ಆಕಸ್ಮಕವಾಗಿ ಗ್ಯಾಸ್ ಸ್ಪೋಟವಾದರೆ ಏನು ಮಾಡಬೇಕು ಈ ಕುರಿತು ಅಡುಗೆ ಸಿಬ್ಬಂದಿಯವರಿಗೆ ತರಬೇತಿ ನೀಡಿದರು. 

ಅಶೋಕ ಸತಿಗೌಡರ, ಪ್ರದೀಪ ದಳವಾಯಿ ಸೇರಿದಂತಹ ಎಲ್ಲಾ ಸಿಬ್ಬಂದಿಗಳು ಉಪಸ್ಥಿತ ಇದ್ದರು. ಮೇಲ್ವಿಚಾರಕ ಪಾರ್ವತಿ ಮಲಗೌಡರ ಇವರು ವಂದನಾರೆ​‍್ಣ ಹೇಳಿ ಅಡುಗೆ ಸಿಬ್ಬಂದಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.