ಹಿರಿಯ ಜೀವಿಗಳನ್ನು ಗೌರವಯುತವಾಗಿ ಕಾಣಿ: ಅವತಾಡೆ
Treat elders with respect: Avatar
ವಿಜಯಪುರ 10: ಇಂದು ವಯೋವೃದ್ಧ ಹಿರಿಯ ಜೀವಿಗಳು ಕುಟುಂಬದಲ್ಲಿ ನೀಡುವ ಹಿಂಸೆ, ಅಗೌರವ ಮತ್ತು ನೀಡುವ ಕಷ್ಟಗಳಿಂದ ನೊಂದು-ಬೆಂದು, ಮನನೊಂದು ಕೊನೆಗೆ ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿಯು ನಮ್ಮ ಸಂಸ್ಕೃತಿಗೆ ಒಂದು ಕಪ್ಪು ಚಿಕ್ಕೆ ಬಿದ್ದಂತಾಗಿದೆ. ಬಡತನ-ಶ್ರೀಮಂತಿಕೆಯ ಹಂಗು ಮೀರಿದ, ದಿಕ್ಕಿಲ್ಲದ ಅನೇಕ ವಯೋವೃದ್ಧ ಹಿರಿಯ ಜೀವಿಗಳ ಬದುಕು ತೀರಾ ಅತಂತ್ರವಾಗುತ್ತಾ ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ ದುಸ್ಥಿತಿಗೆ ನಾವೆಲ್ಲರೂ ಅಸಹ್ಯಪಡಬೇಕಾಗಿದೆ ಎಂದು ನ್ಯಾಯವಾದಿ ಎಸ್.ಎ.ಅವತಾಡೆ ಹೇಳಿದರು.
ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದ ಶಿವಾಲಯದ ದೇವಸ್ಥಾನದ ಶಿವಾನುಭವ ಮಂಟದಲ್ಲಿ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ, ನವರಸಪುರ ಇವರ ಸಹಯೋಗದಡಿಯಲ್ಲಿ ದಿ.9ರಂದು ಜರುಗಿದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕುಟುಂಬ ವ್ಯವಸ್ಥೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕತೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ ಹಿರಿಯ ಜೀವಿಗಳನ್ನು ಮನೆಯಿಂದ ದೂರ ತಳ್ಳಿ ಅವರು ವೃದ್ಧಾಶ್ರಮ ಸೇರುವಂತಹ ದುಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ದೇವರು ಬೇರೆಲ್ಲೂ ಇಲ್ಲ, ಅವರು ನಮ್ಮ ಹಿರಿಯ ಜೀವಿಗಳ ರೂಪದಲ್ಲೇ ಇರುತ್ತಾನೆ ಎಂಬುದನ್ನು ಅರಿತು ವಯೋವೃದ್ಧ ಹಿರಿಯ ಜೀವಿಗಳನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಮಾನಸಿಕ, ದೈಹಿಕ ಹಿಂಸೆ ನೀಡಿದರೆ ಸಿ.ಆರ್.ಪಿ.ಸಿ ಕಾಯಿದೆಯಡಿಯಲ್ಲಿ ಗಂಭೀರ ಸ್ವರೂಪದ ಶಿಕ್ಷೆಯಿದೆ. ಹಿರಿಯ ಜೀವಿಗಳಿಗೆ ತೊಂದರೆ ನೀಡುವ, ಮಕ್ಕಳು ಇದ್ದಾಗಲೂ ವೃದ್ಧಾಶ್ರಮಕ್ಕೆ ತಳ್ಳುವ, ಚಿತ್ರಹಿಂಸೆ ನೀಡುವ ಮಕ್ಕಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಇನ್ನೊರ್ವ ಅತಿಥಿ ವಿಕಲ ಚೇತನ ಮತ್ತು ಹಿರಿಯ ನಾಗರೀಕ ಇಲಾಖೆಯ ಅಧಿಕಾರಿ ಶ್ರೀ ಜಗದೀಶ ಮಾತನಾಡಿ, ಮುಂದಿನ ಪೀಳಿಗೆಗೆ ಮನೆಯ ಪದ್ಧತಿ, ಆಚರಣೆ ಮತ್ತು ಸಾಮಾಜಿಕ-ಧಾರ್ಮಿಕ ವಿಧಿ ವಿಧಾನಗಳನ್ನು ಪರಿಚಯಿಸಲು ಹಾಗೂ ಉಳಿಸಿ-ಬೆಳೆಸಲು ನಮ್ಮ ಹಿರಿಯರು ನಮಗೆ ಬೇಕು. ಹಿರಿಯರ ಅನುಭವದ ಮಾತಿನಂತೆ, ಹೆತ್ತವರ ಮನಸ್ಸನ್ನು ನೋಯಿಸಿದ ಗೆದ್ದವರು ಇತಿಹಾಸದಲ್ಲೇ ಇಲ್ಲ. ತಾಯಿಯನ್ನು ಪೂಜಿಸಿ ಸೋತವರು ಚರಿತ್ರೆಯಲ್ಲೇ ಇಲ್ಲ ಎಂದು ಹೇಳುತ್ತಾ, ಹಿರಿಯ ನಾಗರೀಕರ ಸಮಸ್ಯೆಗಳನ್ನು ಅರಿತು ಇಲಾಖೆಯು ನೀಡುವ ವೃದ್ಧಾಶ್ರಮ, ಗ್ರಂಥಾಲಯ, ಆರೈಕೆ ಮತ್ತು ಮಾಶಾಸನದ ಜೊತೆಗೆ ಅಗತ್ಯ ಸೌಲಭ್ಯ ಮತ್ತು ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಹಿರಿಯ ನಾಗರೀಕ ಸಂಘದ ಅಧ್ಯಕ್ಷ ಎಸ್.ಎಲ್.ಇಂಗಳೇಶ್ವರ ಅವರು ಮಾತನಾಡಿ, ನಮ್ಮ ಸಂಘವು ಹಿರಿಯ ನಾಗರೀಕರ ಕಲ್ಯಾಣಕ್ಕಾಗಿ ಆರೋಗ್ಯ ಅರಿವು ಕಾರ್ಯಕ್ರಮ, ತಪಾಸಣಾ ಶಿಬಿರ ಮತ್ತು ಇನ್ನಿತರ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ ಎಂದರು. ಸಂಘದ ಗೌರವ ಅಧ್ಯಕ್ಷ ಬಿ.ಡಿ.ಕಡಕೋಳ, ಉಪಾಧ್ಯಕ್ಷ ಲಕ್ಷ್ಮಣ ಶಿಂಧೆ, ಕಾರ್ಯದರ್ಶಿ ಕೆ.ಜೆ.ಕೋಟ್ಯಾಳ ಮತ್ತು ಖಜಾಂಚಿ ಎಸ್.ಐ.ಹಿರೇಮಠ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.
ಸಮಾರಂಭದಲ್ಲಿ ಹಿರಿಯರಾದ ಅನಿಲ ಫತ್ತೇಪೂರ, ವಿಠ್ಠಲ ಜಗತಾಪ, ಬಸವರಾಜ ಕನ್ನೂರ, ಎಸ್.ಎಸ್.ದೊಡಮನಿ, ಎ,ಬಿ,ಬಿರಾದಾರ, ಪ್ರೊ. ಎಂ,ಎಸ್.ಖೊದ್ನಾಪೂರ, ಆಶಾ ಬಾಸೂತಕರ, ಎಸ್.ಎಸ್.ಇಂಗಳೆ ಇನ್ನಿತರರು ಸಹ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಎಸ್.ಎಂ.ಮಡಿವಾಳರ ಪ್ರಾರ್ಥನಾ ಗೀತೆ ಪ್ರಚುರಪಡಿಸಿದರು. ನಿವೃತ್ತ ಶಿಕ್ಷಕ ಸುರೇಶ ಹಲಕುಡೆ ಕಾರ್ಯಕ್ರಮ ನಿರೂಪಿಸಿದರು. ನವರಸಪುರ ಬಡಾವಣೆಯ ಹಿರಿಯ ನಾಗರೀಕರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 