ಲಿಂಗಾಯತ ಮಹಿಳಾ ಸಮಾಜದ ಪದಾಧಿಕಾರಿಗಳ ಪದಗ್ರಹಣ ಪರಿಸರ ಸಂರಕ್ಷಣೆಗಾಗಿ ಶ್ರಮಿಸಿ: ಜಯಶೀಲಾ ಬ್ಯಾಕೋಡ

ಬೆಳಗಾವಿ, 24: ಮನೆಗೊಂದು ಮರ ತಲೆಗೆರಡು ಮರ ಎಂಬಂತೆ ನಾವು ಗಿಡಮರಗಳನ್ನು ಬೆಳೆಸಿ ನಮ್ಮ ಸುತ್ತಲಿನ ಪರಿಸರ ಸಂರಕ್ಷಿಸಿದರೆ ಮಾತ್ರ ನಮಗೆ ಉಳಿಗಾಲ ಇಲ್ಲದಿದ್ದರೆ ಈ ಜಗತ್ತು ವಿನಾಶವಾಗಲಿದೆ. ಆದ್ದರಿಂದ ಈಗಿನಿಂದಲೇ ನಾವೆಲ್ಲಾ ಎಚ್ಚೆತ್ತುಕೊಂಡು ನಿಸರ್ಗದ ಉಳಿವಿಗೆ ಶ್ರಮಿಸಬೇಕೆಂದು ಲಿಂಗಾಯತ ಮಹಿಳಾ ಸಮಾಜದ ನೂತನ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಅವರು 

ಹೇಳಿದರು. 

ನಗರದ ಲಿಂಗಾಯತ ಭವನದಲ್ಲಿ ಮಂಗಳವಾರ 23 ರಂದು ಲಿಂಗಾಯತ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಸನ್ಮಾನ, ಭಜನೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನನು ಉದ್ಘಾಟಿಸಿ ಮಾತನಾಡಿದರು.

ನೂತನ   ಲಿಂಗಾಯತ ಸಮಾಜದ ಗೌರವಾಧ್ಯಕ್ಷರಾಗಿ ಶೈಲಜಾ ಭಿಂಗೆ, ಅಧ್ಯಕ್ಷರಾಗಿ ಜಯಶೀಲಾ ಬ್ಯಾಕೋಡ, ಕಾರ್ಯದರ್ಶಿ ಯಾಗಿ ಅನು ಮೆಳವಂಕಿ, ಸಹ ಕಾರ್ಯದರ್ಶಿ ಯಾಗಿ ಮಧು ಪಟ್ಟಣಶೆಟ್ಟಿ, ಖಜಾಂಚಿಯಾಗಿ ಶುಭಾ ತೆಲಸಂಗ ಮತ್ತು ಸಮಾಜದ ನೂತನ ಸದಸ್ಯರಾಗಿ ಮಾಧವಿ ಸಂಬರಗಿ, ಕಾವೇರಿ ಕಿಲಾರಿ, ಸುರೇಖಾ ಮುಮ್ಮಿಗಟ್ಟಿ, ಇಂದಿರಾ ಮಾವೆಬೆನ್ನೂರ, ಸವಿತಾ ಪಾಟೀಲ, ಕಲ್ಪನಾ ಪಾಟೀಲ, ವಿಜಯಲಕ್ಷ್ಮೀ ಮನ್ನಿಕೇರಿ, ರೇಣುಕಾ ಅಂಕಲಗಿ, ಸುಧಾ ಪಾಟೀಲ, ಪ್ರಿಯಾಂಕಾ ಪಾಟೀಲ ಅವರು ಪದಗ್ರಹಣ 

ಮಾಡಿದರು. 

ಈ ಸಂದರ್ಭದಲ್ಲಿ ಗಡಹಿಂಗ್ಲಜದ ಬಿಲ್ವಾಶ್ರಮದ ಮಹಿಳೆಯರಿಂದ ಭಜನಾ ಕಾರ್ಯಕ್ರಮ ಜರುಗಿತು.  ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಾ ಬೆಲ್ಲದ, ಗಡಹಿಂಗ್ಲಜದ ಬಿಲ್ವಾಶ್ರಮ್ರದ ಸುನಂದಾ ಹಂಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು