ಕೆಂಚನಗುಡ್ಡ ಗ್ರಾಮ ಪಂಚಾಯಿತಿ ಸ್ವಯಂ ಸೇವಾ ಬೋಧಕರಿಗೆ ತರಬೇತಿ ಕಾರ್ಯಗಾರ
Training workshop for Kenchanagudda Gram Panchayat volunteer instructors
ಸಿರುಗುಪ್ಪ 23 : ಇಂದು ಪ್ರತಿಯೊಬ್ಬರೂ ಸಾಕ್ಷರರಾದಾಗ ಮಾತ್ರ ಗಾಮೋದ್ಧಾರ ಸಾಧ್ಯ ಎಂದು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಗ್ರಾಮ ಪಂಚಾಯತ್ ರವರ ಸಂಯುಕ್ತ ಆಶ್ರಯದಲ್ಲಿ ಸಾವಿರ ಗ್ರಾಮ ಪಂಚಾಯತ್ ಸಂಪೂರ್ಣ ಸಾಕ್ಷರತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಮ್ಮನ ಗೌಡ ಪಾಟೀಲ್ ಕ್ಷೇತ್ರ ಸಮನ್ವಯಾಧಿಕಾರಿಗಳು ಸಿರುಗುಪ್ಪ ಇವರು ತಿಳಿಸಿದರು.ನಂತರ ಎಂ ಟಿ ಶಾಂತ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕೆಂಚನಗುಡ್ಡ ಇವರು ಮಾತನಾಡುತ್ತಾ ಶಿಕ್ಷಣ ವ್ಯಕ್ತಿಯ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಕಾರಣ ಪ್ರತಿಯೊಬ್ಬ ನಾಗರಿಕನಿಗೂ ಅಕ್ಷರ ಜ್ಞಾನ ಅತ್ಯವಶ್ಯಕ ಆ ನಿಟ್ಟಿನಲ್ಲಿ ಪ್ರತಿ ಕುಟುಂಬಗಳ ಏಳಿಗೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉತ್ತಮವಾಗುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯತಿಯ ಕೇಂದ್ರ ಶಾಲೆಯ ಮುಖ್ಯ ಗುರುಗಳಾದ ಮಹಾದೇವಪ್ಪ ಮಾತನಾಡುತ್ತಾ ನಿತ್ಯ ಜೀವನದಲ್ಲಿ ಅಕ್ಷರ ಜ್ಞಾನ ವಹಿಸುವ ಪಾತ್ರಗಳ ಬಗ್ಗೆ ವಿವರಿಸಿದರು. ಅನಕ್ಷರಸ್ಥರಿಗೆ ತರಬೇತಿ ನೀಡಿ ಸಾಕ್ಷರರನ್ನಾಗಿ ಮಾಡುವ ಎಲ್ಲಾ ಸ್ವಯಂ ಬೋಧಕರಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ಶಿವಪ್ರಕಾಶ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳೂ ಕೂಡ ಹಾಜರಾಗಿ ಕಾರ್ಯಕ್ರಮದ ಉದ್ದೇಶ, ಅನುಷ್ಠಾನದ ಬಗ್ಗೆ ಸ್ವಯಂ ಬೋಧಕರಿಗೆ ಮಾರ್ಗದರ್ಶನ ಮಾಡಿದರು. ಕೆಂಚನಗುಡ್ಡ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 3 ಮುಖ್ಯ ಗ್ರಾಮಗಳ ಆರು ಶಾಲೆಗಳ ಕ್ಷೇತ್ರದ ಎಲ್ಲಾ ಸ್ವಯಂ ಸೇವಾ ಬೋಧಕರಿಗೆ ತರಬೇತಿ ನೀಡಲಾಯಿತು ಹಾಗೂ ಬೋಧನಾ ಸಾಮಗ್ರಿಗಳನ್ನು ವಿತರಿಸಲಾಯಿತು. ಒಬ್ಬೊಬ್ಬ ಸ್ವಯಂಸೇವಕರಿಗೆ 20 ಮಂದಿ ಅನಕ್ಷರಸ್ಥರನ್ನು ಭಾಗ ಮಾಡಿ ನೀಡಲಾಯಿತು. ಪ್ರತಿದಿನ ಸಂಜೆ ಅವರಿಗೆ ಬೋಧಿಸಿ ಸಾಕ್ಷರರನ್ನಾಗಿ ಮಾಡಲು ತಿಳಿಸಲಾಯಿತು. ಎಲ್ಲಾ ಸ್ವಯಂ ಬೋಧಕರಿಗೆ ಅಲ್ಪ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.ಈ ಸಂಧರ್ಭದಲ್ಲಿ ತರಬೇತಿಯಲ್ಲಿ ಕಾಳಿಂಗಪ್ಪ ಕ್ಷೇತ್ರೃ ಸಂಪನ್ಮೂಲ ವ್ಯಕ್ತಿಗಳು ಸಿರುಗುಪ್ಪ ಇನ್ನುಳಿದಂತೆ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮನಗೌಡ -ಸಮೂಹ ಸಂಪನ್ಮೂಲ ವ್ಯಕ್ತಿಗಳು ತೆಕ್ಕಲಕೋಟೆ, ಮಲ್ಲಯ್ಯ, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೈರಾಪುರ ಬಸವರಾಜ್ ,ದೈಹಿಕ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರಾರಾವಿ. ಗ್ರಾಮ ಪಂಚಾಯತ್ ಕೆಂಚನಗುಡ್ಡದ ಬಿಲ್ ಕಲೆಕ್ಟರ್ ಜಲಾಲಪ್ಪ ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 