ಕಡಲೆ ಉತ್ಪಾದನೆ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ

Training program on chickpea production, marketing and value addition

ಕಡಲೆ ಉತ್ಪಾದನೆ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ 

ನೇಸರಗಿ  08: ಸಮೀಪದ ಮತ್ತಿಕೊಪ್ಪ ಕೆಎಲ್‌ಇ ಸಂಸ್ಥೆಯ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಡಾ. ಕೆ. ಎಚ್‌. ಪಾಟೀಲ ಪ್ರಾಧ್ಯಾಪಕ ಪೀಠ ಅಗ್ರಿಕಲ್ಚರಲ್ ಮಾರ್ಕೇಟಿಂಗ್, ಎಬಿಎಮ್ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಬೆಂಗಳೂರಿನ ಕರ್ನಾಟಕ ರಾಜ್ಯ ಅಗ್ರಿಕಲ್ಚರಲ್ ಮಾರ್ಕೇಟಿಂಗ್ ಬೋರ್ಡ್‌ ಹಾಗೂ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ಸಹಯೋಗದೊಂದಿಗೆ ಕಡಲೆ ಉತ್ಪಾದನೆ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏರಿ​‍್ಡಸಲಾಗಿತ್ತು. 

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಪ್ರಾಧ್ಯಾಪಕ ಡಾ. ಜಿ. ಎನ್‌. ಮರಡ್ಡಿ ಮಾತನಾಡಿ, ಕಡಲೆ ಉತ್ಪಾದನೆಯ ಮಹತ್ವ, ಮಾರುಕಟ್ಟೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯವರ್ಧನೆಯ ಅಂಶಗಳನ್ನು ತಿಳಿಸಿದರು.  ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಲೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಂಶಗಳ ಮಹತ್ವವನ್ನು ತಿಳಿಸಿದರು.  

ತಾಂತ್ರಿಕ ಅಧಿವೇಶನದಲ್ಲಿ  ಡಾ. ಜಿ. ಎನ್‌. ಮರಡ್ಡಿ ಅವರು ಸುಧಾರಿತ ತಳಿಗಳು, ಜೈವಿಕ ಗೊಬ್ಬರಗಳಾದ (ಪಿಎಸ್‌ಬಿ, ರೈಜೋಬಿಯಂ ಮತ್ತು ಟ್ರೈಕೋಡರ್ಮಾ) ಬೀಜ ಸಂಸ್ಕರಣೆ ಮತ್ತು ಕೀಟ ಮತ್ತು ರೋಗ ನಿರ್ವಹಣೆಯ ಜೊತೆಗೆ ಕೃಷಿಯಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕುರಿತು ವಿವರಿಸಿದರು.   ಇದಲ್ಲದೆ, ಅವರು ರೈತರಿಗೆ ಮಣ್ಣಿನ ಪರೀಕ್ಷೆ ಮತ್ತು ಮಣ್ಣಿನ ಮಾದರಿಯ ವಿಧಾನದ ಮಹತ್ವದ ಕುರಿತು ತಿಳಿಸಿದರು.  

ಡಾ. ಡಿ. ಎಚ್‌. ಮಿತ್ರಣ್ಣವರ ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯುವ ಸಲುವಾಗಿ ಕಡಲೆಯ ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ತಂತ್ರಜ್ಞಾನಗಳು/ವಿಧಾನಗಳ ಬಗ್ಗೆ ವಿವರಿಸಿದರು. ಡಾ. ಎನ್‌. ಎಂ. ಕೆರೂರು ಸ್ವಾಗತಿಸಿದರು.   ಪ್ರವೀಣ ಯಡಹಳ್ಳಿ ಕಾರ್ಯಕ್ರಮದಲ್ಲಿ ನಿರೂಪಿಸಿದರು. ಡಾ. ಬಸವರಾಜ ಕುಲಕರ್ಣಿ ವಂದಿಸಿದರು.