ರೈಲು ಓಡಾಟ ಪ್ರಾರಂಭಿಸಿ-ರೈಲ್ವೆ ಸಚಿವರಲ್ಲಿ ಡಾ. ಬಸವರಾಜ ಎಸ್ ಕ್ಯಾವಟರ್ ಮನವಿ

Train running started - Railway Minister Dr. Basavaraja S Cavator appeal

ರೈಲು ಓಡಾಟ ಪ್ರಾರಂಭಿಸಿ-ರೈಲ್ವೆ ಸಚಿವರಲ್ಲಿ ಡಾ. ಬಸವರಾಜ ಎಸ್ ಕ್ಯಾವಟರ್ ಮನವಿ 

ಕೊಪ್ಪಳ 09: ಸುಮಾರು ವರ್ಷಗಳಿಂದ ನಡೆಯುತ್ತಿರುವ ಗದಗ-ವಾಡಿ ಹೊಸ ರೈಲು ಮಾಗ9ದ ಕಾಮಗಾರಿ ಕುಷ್ಟಗಿಯವರೆಗೆ ಮುಗಿದಿದ್ದು, ಕುಷ್ಟಗಿವರೆಗೆ ರೈಲು ಓಡಿಸಲು ಒತ್ತಾಯಿಸಿ, ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಡಾ. ಬಸವರಾಜ ಎಸ್ ಕ್ಯಾವಟರ್ ಅವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಅವರು ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರಿಗೆ ಗುರುವಾರ  ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.  

ಈ ವೇಳೆ ಮಾತನಾಡಿರುವ ಅವರು,  ಗದಗ ವಾಡಿ ರೈಲ್ವೆ ಕಾಮಗಾರಿಯು ಕುಷ್ಟಗಿಯವರೆಗೆ ಪೂಣ9ಗೊಂಡಿದೆ. ಅಲ್ಲಿಯವರೆಗೆ ರೈಲು ಓಡಿಸಲು ಮುಂದಾಗಬೇಕು. ಜದರಿಂದ ಕುಷ್ಟಗಿ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ, ಎಪಿಎಂಸಿ ಮಾರುಕಟ್ಟೆಗೆ, ವ್ಯಾಪಾರಕ್ಕೆಂದು ಕುಷ್ಟಗಿ ಭಾಗದ ರೈತರು, ವ್ಯಾಪಾರಿಗಳು , ಸಾರ್ವಜನಿಕರು ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ದುಬಾರಿ ವೆಚ್ಚವನ್ನು ಮಾಡಿ ಹೋಗಬೇಕಾಗಿದೆ. ರೈಲು ಓಡಿಸುವುದರಿಂದ ಅಲ್ಲಿನ ವ್ಯಾಪಾರಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಕಾಮಾಗಾರಿ ಪೂಣ9ಗೊಂಡಿರುವ ಕಾರಣಕ್ಕೆ ರೈಲು ಓಡಿಸಿದರೆ ಜನರಿಗೆ ಇದರಿಂದ ಪ್ರಯೋಜನವಾಗಲಿದೆ.  

ಇನ್ನೂ 2025-26ನೇ ಸಾಲಿನ ಬಜೆಟ್ ನಲ್ಲಿ ಜಿಲ್ಲೆಯ ಹೊಸ ರೈಲು ಮಾಗ9ಗಳಾಗಿರುವ ಭಾಗಲಕೋಟೆ ಗಂಗಾವತಿ, ದರೋಜಿ ಗಂಗಾವತಿ, ಆಲಮಟ್ಟಿ ಚಿತ್ರದುರ್ಗ ಈ ರೈಲು ಮಾಗ9ಗಳಿಗೆ ಬಜೆಟ್ ನಲ್ಲಿ ಅನುದಾನವನ್ನು ಒದಗಿಸಬೇಕು.ಇದರ ಜತೆಗೆ ಕೊಪ್ಪಳ, ಹುಲಗಿ, ಮುನಿರಬಾದ್ ರೈಲು ನಿಲ್ದಾಣಗಳ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಇನ್ನೂ ರದ್ದಾಗಿರುವ ಬೆಳಗಾವಿ ಹೈದರಾಬಾದ್ ರೈಲನ್ನು ಪುನರಾಂಭ ಮಾಡಬೇಕು. ತಿರುಪತಿ ಕೊಲ್ಲಾಪೂರ ಮದ್ಯೆ ಗುಂತಕಲ್, ಹೊಸಪೇಟೆ, ಹುಬ್ಬಳ್ಳಿ ಮಾರ್ಗವಾಗಿ ವಂದೇ ಭಾರತ್ ರೈಲು ಪ್ರಾರಂಭಿಸಬೇಕು.   

ಸಾಮಾಜಿಕವಾಗಿ , ಆರ್ಥಿಕ. ಪ್ರಗತಿಗಾಗಿ ಕುಷ್ಟಗಿ ಗೋಕಾಕ, ರಾಯಚೂರ ಬೆಳಗಾವಿ ಹೊಸ ರೈಲು ಮಾರ್ಗಗಳನ್ನು ಸರ್ವೇ ಕಾಯ9 ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.ಬಾಕ್ಸ್‌..ಜ.14 ರಂದು ವಿ.ಸೋಮಣ್ಣ ಅವರಿಂದ ರೈಲ್ವೆ ಮೇಲ್ಸೇತುವೆ ಉದ್ಘಾಟನೆಕೊಪ್ಪಳ :ಸಾರ್ವಜನಿಕರ ಅನುಕೂಲಕ್ಕೆ ನಿರ್ಮಾಣಗೊಂಡಿರುವ ರೈಲ್ವೆ ಗೇಟ್ ನಂಬರ 66 ರಲ್ಲಿ (ಕುಷ್ಟಗಿ) ಬಳಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ಜನೇವರಿ 14 ರಂದು ಉದ್ಘಾಟನೆ ಮಾಡಲು ದಿನಾಂಕ ನಿಗಧಿಯಾಗಿದೆ.ಕೊಪ್ಪಳದ ಬಿಜೆಪಿ ಪಕ್ಷದ ಕಾರ್ಯಕಾರಣಿ ಸದಸ್ಯರಾದ ಡಾ.ಬಸವರಾಜ ಎಸ್ ಕ್ಯಾವಟರ್ ಅವರು ರೈಲ್ವೆ ಮೇಲ್ಸೇತುವೆಯನ್ನು ಜನರ ಅನುಕೂಲಕ್ಕಾಗಿ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನರಿಗೆ ಉಪಯೋಗವಾಗಲು ಆದಷ್ಟು ಬೇಗನೆ ಉದ್ಘಾಟನೆ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.  

ಮನವಿಗೆ ಸ್ಪಂದಿಸಿದ ಸಚಿವರು ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದಾರೆ.ಸಚಿವರು ತಿಳಿಸುವಂತೆ ಜನೇವರಿ 14 ರಂದು ಉದ್ಘಾಟನೆಯ ದಿನಾಂಕವನ್ನು ನಿಗಧಿ ಮಾಡಲಾಗಿದೆ. ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರು ಕೂಡ ಭಾಗವಹಿಸಿ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲಿದ್ದಾರೆ.