ಬಸ್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಎರಡು ಹೊಸ ಬಸ್ ಮಾರ್ಗಗಳ ಸಂಚಾರ: ಶಾಸಕ ಶ್ರೀನಿವಾಸ ಮಾನೆ

Traffic of two new bus routes at a ceremony held at the bus stand: MLA Srinivasa Mane

ಬಸ್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಎರಡು ಹೊಸ ಬಸ್ ಮಾರ್ಗಗಳ ಸಂಚಾರ: ಶಾಸಕ ಶ್ರೀನಿವಾಸ ಮಾನೆ 

ಹಾನಗಲ್ 08: ಇಲ್ಲಿನ ಕೇಂದ್ರ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಎರಡು ಹೊಸ ಬಸ್ ಮಾರ್ಗಗಳ ಸಂಚಾರಕ್ಕೆ ಶಾಸಕ ಶ್ರೀನಿವಾಸ ಮಾನೆ ಹಸಿರು ನಿಶಾನೆ ತೋರಿದರು. 

     ಒಂದು ಮಾರ್ಗದ ಬಸ್ ಹಾನಗಲ್‌ನಿಂದ ಗದಗ, ಗಜೇಂದ್ರಗಡ, ಮಾನ್ವಿ, ಸಿಂಧನೂರು ಮಾರ್ಗವಾಗಿ ರಾಯಚೂರು, ಇನ್ನೊಂದು ಹಾನಗಲ್‌ನಿಂದ ಸವಣೂರು, ಲಕ್ಷ್ಮೇಶ್ವರ ಮಾರ್ಗವಾಗಿ ಗದಗಗೆ ತೆರಳಲಿದ್ದು, ಎರಡೂ ಬಸ್‌ಗಳು ಹಾನಗಲ್ ಬಸ್ ನಿಲ್ದಾಣದಿಂದ ನಿತ್ಯ ಬೆಳಗ್ಗೆ 8.45 ಗಂಟೆಗೆ ಹೊರಡಲಿವೆ. 

  ಈ ಸಂದರ್ಭದಲ್ಲಿ ಶಾಸಕ ಮಾನೆ ಮಾಹಿತಿ ನೀಡಿ, ಹಾನಗಲ್ ಬಸ್ ಘಟಕಕ್ಕೆ ಎರಡು ಹಂತಗಳಲ್ಲಿ ಒಟ್ಟು ಒಟ್ಟು 14 ಹೊಸ ಬಸ್‌ಗಳನ್ನು ಸಾರಿಗೆ ಇಲಾಖೆ ಒದಗಿಸಿದೆ. ಇನ್ನಷ್ಟು ಹೊಸ ಬಸ್ ದೊರಕಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ಹಿಂದಿನ ಸರ್ಕಾರ ಒಂದೂ ಸಹ ಹೊಸ ಬಸ್‌ಗಳನ್ನು ದೊರಕಿಸಿರಲಿಲ್ಲ. ಹಾಗಾಗಿ ಹೊಸ ಮಾರ್ಗಗಳಲ್ಲಿ ಬಸ್ ಓಡಿಸುವುದು ಕಷ್ಟಸಾಧ್ಯವಾಗಿತ್ತು. ಆದರೀಗ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೊಸ ಹೊಸ ಮಾರ್ಗಗಳಲ್ಲಿ ಬಸ್ ಓಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾನಗಲ್‌ನಿಂದ ಗದಗ ಮತ್ತು ರಾಯಚೂರಿಗೆ ಬಸ್ ಓಡಿಸಬೇಕು ಎನ್ನುವ ಬೇಡಿಕೆ ಹೆಚ್ಚಿತ್ತು. ಅದೀಗ ಈಡೇರಿದೆ ಎಂದರು. 

  ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸದಸ್ಯ ಪರಶುರಾಮ ಖಂಡೂನವರ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಸದಸ್ಯರಾದ ಲಿಂಗರಾಜ ಮಡಿವಾಳರ, ರಾಜೂ ಗಾಡಿಗೇರ, ರಾಮಚಂದ್ರ ಕಲ್ಲೇರ, ಸುಮಾ ಸುಣಗಾರ, ಹಾನಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಉಮೇಶ ದೊಡ್ಡಮನಿ, ಘಟಕ ವ್ಯವಸ್ಥಾಪಕ ಎಚ್‌.ಡಿ.ಜಾವೂರ, ಸಂಚಾರ ನೀರೀಕ್ಷಕ ಎನ್‌.ಬಿ.ಚವ್ಹಾಣ, ಸಾರಿಗೆ ನಿಯಂತ್ರಕರಾದ ಸತೀಶ ಮಡಿವಾಳರ, ಎ.ಎ.ಮಾಳಗಿ, ತಾಂತ್ರಿಕ ಸಿಬ್ಬಂದಿ ಎಂ.ಎಸ್‌.ಊಳಗಿ ಸೇರಿದಂತೆ ಅನೇಕರಿದ್ದರು.