ಕಬ್ಬು ತುಂಬಿದ ಟ್ಯ್ರಾಕ್ಟರ್‌ಗೆ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಜಮಖಂಡಿ 03: ನಗರದಲ್ಲಿ ಕಬ್ಬು ತುಂಬಿದ ಟ್ಯ್ರಾಕ್ಟರ್ ಡಬ್ಬಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಬೆಂಕಿ ಹತ್ತಿರುವ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ತಾಲೂಕಿನ ಸಮೀಪ ಯಲ್ಲಟ್ಟಿ ಗ್ರಾಮದ ಕಬ್ಬು ತುಂಬಿಕೊಂಡು ಸಿದ್ದಾಪೂರ ಕಡೆಗೆ ಹೊಗುವ ಸಮಯದಲ್ಲಿ ನಗರದ ಅಂಬೇಡ್ಕರ್ ಸರ್ಕಲ್ ಬಳಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಕಬ್ಬು ತುಂಬಿದ ಟ್ರ್ಯಾಕ್ಟರ್ ಡಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ. ಟ್ರ್ಯಾಕ್ಟರ್ ಚಾಲಕ ಸುತ್ತಮುತ್ತಲು ಅಂಗಡಿ, ಮುಂಗಟ್ಟುಗಳು ಹಾಗೂ ಪೆಟ್ರೋಲ್ ಬಂಕ್ ಇರುವ ಕಾರಣ ವಿಜಯಪೂರ ರಸ್ತೆಯ ಬಳಿ ಇರುವ ವಾಟರ್ ಸರ್ವೀಸ್ ಸೆಂಟರ್ ಗ್ಯಾರೇಜ್‌ಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ, ಅಲ್ಲಿ ಸೇರಿರುವ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದಂತೆ, ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಕಬ್ಬು ತುಂಬಿರುವ ಟ್ರ್ಯಾಕ್ಟರ್ ಡಬ್ಬಿಗೆ ಬೆಂಕಿ ಹೊತ್ತಿರುವದನ್ನು ನಂದಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.