ಒಗ್ಗಟ್ಟು, ಒಮ್ಮತದ ಸಹಕಾರದೊಂದಿಗೆ ಸಮಾಜದ ಏಳಿಗೆಗೆ ಮುಂದಾಗಿ : ವೇಮನಾನಂದ ಮಹಾಸ್ವಾಮಿ
Towards the progress of society with unity, consensus and cooperation: Vemanananda Mahaswamy
ಕಂಪ್ಲಿ 28: ಹೇಮ-ವೇಮನ ತತ್ವಾದರ್ಶಗಳ ಪರಿಪಾಲನೆ ಜೊತೆಗೆ ಹಿಂದೂ ರೆಡ್ಡಿ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮತ್ತು ಒಗ್ಗಟ್ಟು, ಒಮ್ಮತದ ಸಹಕಾರದೊಂದಿಗೆ ಸಮಾಜದ ಏಳಿಗೆಗೆ ಮುಂದಾಗಬೇಕು ಎಂದು ಹರಿಹರದ ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವೇಮನಾನಂದ ಮಹಾಸ್ವಾಮಿ ಹೇಳಿದರು. ಪಟ್ಟಣದ ಎಸ್‌ಎನ್‌ಪೇಟೆಯ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಂಪ್ಲಿ ಹೇಮ-ವೇಮ ರೆಡ್ಡಿ ಜನ ಸಂಘದಿಂದ ಭಾನುವಾರ ಆಯೋಜಿಸಿದ್ದ ಹಿಂದೂ ರೆಡ್ಡಿ ಜಾಗೃತಿ ಸಭೆ ಉದ್ಘಾಟಿಸಿದ ನಂತರ ಆಶೀರ್ವದಿಸಿದ ಮಾತನಾಡಿ, ಸಮುದಾಯವು ಧಾರ್ಮಿಕ ಚುಟುವಟಿಕೆಗಳ ಜೊತೆಗೆ ಶೈಕ್ಷಣಿಕ ಕ್ಷೇತ್ರಕ್ಕೂ ಆಧ್ಯತೆ ನೀಡಬೇಕು. ಸಮಾಜ ಬಾಂಧವರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಿಲ್ಲಬೇಕು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಹಿಂದೂರೆಡ್ಡಿ ಸಮಾಜದ ಒಗ್ಗಟ್ಟು ಪ್ರದರ್ಶಿಸುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲೂ ಸಹ ಮುಂದಾಗಬೇಕು ಎಂದರು. ಹೇಮ-ವೇಮ ರೆಡ್ಡಿ ಜನ ಸಂಘದ ಅಧ್ಯಕ್ಷ ಬಸಲಿಂಗಪ್ಪ ಜಾಗೃತಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕ್ಯಾಲೆಂಟರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಾರಾ ಪ್ರತಾಪ್‌ರೆಡ್ಡಿ, ಗೌರವಾಧ್ಯಕ್ಷ(ಮಾಜಿ ಶಾಸಕ)ಜಿ.ಸೋಮಶೇಖರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮೆಟ್ರಿ ಗಂಗಾಧರಗೌಡ, ಮುಖಂಡರಾದ ಐನಾತರೆಡ್ಡಿ, ತಿಮ್ಮಾರೆಡ್ಡಿ, ಮರಿಸ್ವಾಮಿರೆಡ್ಡಿ, ವೆಂಕಟರೆಡ್ಡಿ, ಮೆಟ್ರಿ ಗಂಗಾಧರಗೌಡ, ಇಟಗಿ ಬಸವರಾಜಗೌಡ, ಹೊಸಕೋಟೆ ಜಗದೀಶ, ಕುಮಾರಸ್ವಾಮಿರೆಡ್ಡಿ, ಅಭ್ಯುತ್‌ರೆಡ್ಡಿ, ಸದಾಶಿವಪ್ಪ, ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 