ಧಾರವಾಡ 18: ಲಯದೊಂದಿಗೆ ಆರಂಭಗೊಂಡ ನಾವೀಕಾ ರಂಗಭೂಮಿ ಸಂಸ್ಥೆಯ ಪಂಚರಂಗಿ ಸಂಗೀತ ಸಂಜೆ ಕಾರ್ಯಕ್ರಮ ಮುಂದೆ ಶೃತಿಯೊಂದಿಗೆ ಸಮ್ಮಿಲನಗೊಂಡು ಶೀಘ್ರದಲ್ಲೇ ಯಶಸ್ಸಿನ ದಾರಿಯಲ್ಲಿ ಮುನ್ನಡೆಯುತ್ತದೆ ಎಂದು ಟಿ ಚೌಡಯ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ತಬಲಾವಾದಕ ಪಂಡಿತ ರಘುನಾಥ ನಾಕೋಡ ಭರವಸೆ ವ್ಯಕ್ತಪಡಿಸಿದ್ದಾರೆ.
ನಾವೀಕಾ ರಂಗಭೂಮಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಿನ್ನೆ ಧಾರವಾಡದ ಕರ್ನಾ ಟಕ ಕುಲ ಪುರೋಹಿತ ಆಲೂರ ವೆಂಕಟರಾವ್ ಸಭಾ ಭವನದಲ್ಲಿ ಆಯೋಜಿಸಲಾದ ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರವನ್ನು ತಬಲಾ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಸಂಗೀತ ಸಾಧಕರಿಗೆ ವೇದಿಕೆ ಕಲ್ಪಿಸುವ ಮೂಲಕ ಕಲಾಕಾರರಿಗೆ ಪ್ರೋತ್ಸಾಹಿಸುವ ಸಂಸ್ಥೆಯಾಗಿ ನಾವೀಕಾ ರಂಗಭೂಮಿ ಸಂಸ್ಥೆ, ಬೆಳೆಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗೀತ, ನೃತ್ಯ, ಅಕಾದೆಮಿ ಸದಸ್ಯ ವೀರಣ್ಣ ಪತ್ತಾರ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು. ಗುರು ಕಲಿಸಿದ ವಿದ್ಯೆ ಗುರಿ ತಲುಪಬೇಕಾದರೆ ಇವುಗಳೆರಡರ ಮಧ್ಯ ಪಾಲಕರ, ಪೋಷಕರ ಹಾಗೂ ನಾವೀಕಾ ರಂಗಭೂಮಿ ಸಂಸ್ಥೆಯಂತಹ ಸಂಘಟನೆಯಗಳ ಸಹಕಾರವಿರಬೇಕು ಎಂದರು.
ಜಾನಪದಗೀತೆ, ಭಾವಗೀತೆ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಶರಣರ ವಚನಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ನಾವೀಕಾ ರಂಭ ಭೂಮಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಇನ್ನೋರ್ವ ಸನ್ಮಾನಿತರಾದ, ಹೈದರಾಬಾದ ದೂರದರ್ಶನದಲ್ಲಿ ಉಪನಿದರ್ೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕೆ. ಸುಧಾಕರ ರಾವ್ ಬಣ್ಣಿಸಿದರು.
ನಾವೀಕಾ ರಂಗಭೂಮಿ ಸಂಸ್ಥೆಯ ಅಧ್ಯಕ್ಷೆ ಆರತಿ ದೇವಶಿಖಾಮಣಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು. ಪೂವರ್ಿ ದಿನೇಶ ಪ್ರಾರ್ಥಿ ಸಿದರು. ಅಂತಾರಾಷ್ಟ್ರೀಯ ಖ್ಯಾತ ಕಲಾವಿದರಾದ ವಿದೂಷಿ ರಿಂಪಾ ಸಿವಾ, ಗಾಯಕ ಯೋಗೇಶ ರಾಮದಾಸ ಕರ್ನಾ ಟಕ ಸಾಹಿತ್ಯ ಅಕಾದೆಮಿ ಸದಸ್ಯ ಡಾ. ಜಿನದತ್ತ ಹಡಗಲಿ, ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ವಿಶ್ವೇಶ್ವರಿ ಹಿರೇಮಠ, ಮಧುರಾ ಹಿರೇಮಠ, ಹಾಗೂ ಪೂಜಾ ವಾಲಿಕಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಅಂತಾರಾಷ್ಟ್ರೀಯ ತಬಲಾ ವಾದಕಿಯಾದ ವಿದೂಷಿ ರಿಂಪಾ ಸಿವಾ, ಅವರಿಂದ ತಬಲಾ ವಾದನ ಕಾರ್ಯಕ್ರಮ ಜರುಗಿತು. ಗಾಯಕರಾದ ಪಂ. ವೆಂಕಟೇಶ ಕುಮಾರ, ಕೈವಲ್ಯ ಕುಮಾರ ಗುರವ, ನ್ಯಾಯವಾದಿ ಉದಯ ದೇಸಾಯಿ, ಪೊಲೀಸ್ ಆಯುಕ್ತ ಆರ್. ದೀಲಿಪ, ಪದ್ಮಾವತಿ ಡಿ., ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.