ನಾಳೆ ಹಾಸ್ಯ ಸಂಭ್ರಮ -2025
ಬೆಳಗಾವಿ 09: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯವರು ಇದೇ ದಿನಾಂಕ 11 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ “ಹಾಸ್ಯ ಸಂಭ್ರಮ -2025”
ಹಾಸ್ಯ ಸಂಭ್ರಮ ಹಿ 2025 ನ್ನು ಪ್ರೊ. ಜಿ. ಕೆ. ಕುಲಕರ್ಣಿ, ಜಿ.ಎಸ್.ಸೋನಾರ, ಅರವಿಂದ ಹುನಗುಂದ, ಕೆ. ತಾನಾಜಿ ಹಾಸ್ಯಕೂಟ ಬಳಗದವರು ನಡೆಯಿಸಿಕೊಡಲಿದ್ದಾರೆ. ಕೆ.ಎಸ್.ಆರ್.ಟಿ.ಸಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನಾಗಪ್ಪ ಸಿಂಪಿಯವರು ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಬಂದು ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.