ನಾಳೆ ರಾಜ್ಯಮಟ್ಟದ ಸಹಕಾರ ಸಪ್ತಾಹ

ಲೋಕದರ್ಶನ ವರದಿ

ಹಾವೇರಿ 16: ಸಹಕಾರ ಕ್ಷೇತ್ರದ ಸ್ವಯಂ ಪ್ರೇರಿತ ಕಾರ್ಯಗಳ ವಿಶ್ಲೇಷಣೆ, ಪರಾಮರ್ಶ ಮುಂದಿನ ಕಾರ್ಯ ಯೋಜನೆಗಳ ರೂಪಿಸಲು ಮಾಡುವ ಕೆಲಸವೇ ಅಖಿಲ ಭಾರತ ಸಹಕಾರ  ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿ, ಅಧ್ಯಕ್ಷರಾದ ಕಲ್ಯಾಣಕುಮಾರ ಶೆಟ್ಟರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಭಾರತದ ಮೂದಲ ಪ್ರಧಾನಿ ಜವಾಹರಲಾಲ್ ನೆಹರೂ ಹುಟ್ಟು ದಿನದಿಂದ 7 ದಿನಗಳ ವರಿಗೆ ಸಹಕಾರ ಕ್ಷೇತ್ರದಲ್ಲಿನ ಎಲ್ಲ ಬಗೆಯ ಆಯಾಮಗಳನ್ನು ಅಧ್ಯಯನಗಳ ಮೂಲಕ ಕಾರ್ಯಕ್ರಮಗಳ ಆಯೋಜನೆಗಳ ಮಾಡುವುದರ ಜೊತೆಗೆ ಮುಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಯಾವ ರೀತಿ ಸಾಮಾಜಿಕ ಕಳಕಳಿಯ ಕೆಲಸ ಮಾಡಬೇಕು ಎಂದು ತಿಳಿಸಲು ಮುಂದಾಗಿದ್ದು,   ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಹಾಗೂ ಎಲ್ಲ ವಿವಿಧ ಸಹಕಾರಿ ಸಂಘಗಳ ಸೌಹಾರ್ಧ ಸಹಕಾರಗಳ ಸಂಯುಕ್ತ ಆಶ್ರಯಗಳಲ್ಲಿ  ಬ್ಯಾಡಗಿ ತಾಲೂಕಿನ  ಕಾಗಿನೆಲೆಯ ಶ್ರೀ ಕನಕಗುರುಪೀಠದ ಕನಕ ಕಲಾಭವನದಲ್ಲಿ ನಾಳೆ (ದಿ 18) ರಾಜ್ಯ ಮಟ್ಟದ 65 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಯೋಜಿಸಲಾಗಿದೆ ಎಂದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕನಕ ಗುರುಪೀಠದ ಶ್ರೀ ನಿರಂಜನಾನಂದಪರಿ ಮಹಾಸ್ವಾಮಿಗಳು ವಹಿಸಲಿದ್ದು,ಸಭಾಪತಿಗಳಾದ ಬಸವರಾಜ ಹೊರಟ್ಟಿ ಘನ ಉಪಸ್ಥಿತರಿರುವರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್ ಜಮೀರ ಅಹ್ಮದಖಾನ್  ಸಪ್ತವರ್ಣದ ಸಹಕಾರ ಧ್ವಜಾರೋಹಣ ನೆರವೇರಿಸುವರು. ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ ಉದ್ಘಾಟಿಸುವರು. ಸಚಿವ ಆರ್ ಶಂಕರ, ವಸ್ತು ಪ್ರದರ್ಶನ ಮಾರಾಟ ಮಳಿಗೆಗಳ ಉದ್ಘಾಟನೆ.ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಜಾಥಾ ಚಾಲನೆ.  ಶಾಸಕ ಸಿಎಂ ಉದಾಸಿ ಸಾಧಕ ಸಹಕಾರಿಗಳಿಗೆ ಸನ್ಮಾನಿಸುವರು. ಅಧ್ಯಕ್ಷತೆಯನ್ನು ಕ.ರಾ.ಸ.ಮ.ನಿ ಅಧ್ಯಕ್ಷರಾದ ಎನ್ ಗಂಗಣ್ಣ ವಹಿಸುವರು. ಜಿಲ್ಲೆಯ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು. ಸಹಕಾರ ಕ್ಷೇತ್ರದ ಸಾಧಕರು. ವಿವಿಧ ಮಂಡಳಿಗಳ ಪದಾಧಿಕಾರಿಗಳು.ನಿದರ್ೇಶಕರು. ಸಹಕಾರಿ ಆಡಳಿತ ಮಂಡಳಿಗಳ ಸದಸ್ಯರು.ಸಂಘಗಳ ಕಾರ್ಯವೃಂದದವರು ಸೇರಿದಂತೆ ಗಣ್ಯಾತಿ ಗಣ್ಯರು ಭಾಗವಹಿಸುವರು.         ಸಹಕಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು. ವಿಪ್ಕೋ ಸಂಸ್ಥೆಯವರು ನೀಡುವ ರಾಷ್ಟೀಯ ಸಹಕಾರ ರತ್ನ ಬಿಂದು ಪ್ರಶಸ್ತಿಯು ಜಿಲ್ಲೆಯ ಹಿರೇಕೆರೂರ ತಾಲೂಕಿನ ಎಸ್ಎಸ್ ಪಾಟೀಲವರಿಗೆ ದೊರಕಿದ್ದು, ಪ್ರಶಸ್ತಿ ಮೊತ್ತ ನಗದು 11 ಲಕ್ಷ ರೂಗಳನ್ನು ನೀಡಲಾಗುತ್ತಿದೆ. ಈ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯವಾಗಿದ್ದು, ಸಕರ್ಾರದ ಪ್ರತಿನಿಧಿಗಳು ಆಗಮಿಸಲಿದ್ದು, ಸಹಕಾರ ಕ್ಷೇತ್ರಗಳ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಲಾಗುತ್ತದೆ. ಜಿಲ್ಲೆಯ 5-8 ಸಾವಿರ ಸಹಕಾರ ಬಂಧುಗಳು ಭಾಗವಹಿಸಲಿದ್ದು ಇದೊಂದು ಯಶಸ್ವಿ ಕಾರ್ಯಕ್ರಮವಾಗಲಿದೆ ಎಂದು  ಜಿಲ್ಲಾ ಸಹಕಾರ ಯೂನಿಯನ್ ನಿ, ಅಧ್ಯಕ್ಷರಾದ ಕಲ್ಯಾಣಕುಮಾರ ಶೆಟ್ಟರ ಕಾರ್ಯಕ್ರಮಗಳ ವಿವರಣೆಯನ್ನು ತಿಳಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಆಡಳಿತ ಮಂಡಳಿಗಳಾದ ಸಿದ್ದನಗೌಡ ಪಾಟೀಲ.ಮಲ್ಲಿಕಾಜರ್ುನ ಸಾತೇನಹಳ್ಳಿ.ವಿಜಯೇಂದ್ರ ಕನವಳ್ಳಿ.ಮಹಾಂತೇಶ ಬಶೆಟ್ಟಿಯವರ.ಡಿಸಿಸಿ ಬ್ಯಾಂಕ್ ನಿದರ್ೇಶಕರಾದ ಮುತ್ತಣ್ಣ ಯಲಿಗಾರ.ಸಹಕಾರಿ ಉಪನಿಬಂಧಕರಾದ ಶಶಿಕಲಾ ಪಾಳೇದ ಸಹಕಾರ ಕ್ಷೇತ್ರದ ಸಹಕಾರಿ ಬಂಧುಗಳು ಹಾಗೂ ಕಾರ್ಯವೃಂದದವರು ಪಾಲ್ಗೊಂಡಿದ್ದರು.